T20 World Cup: ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಮಣೆ ಹಾಕಿದ್ದು ಏಕೆ? ಟಿ20 ವಿಶ್ವಕಪ್‌ ಅಂಕಿ ಅಂಶಗಳಲ್ಲಿ ಅಡಗಿದೆ ಸತ್ಯ

ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಸ್ಥಾನ ನೀಡಿದ್ದು ಎಲ್ಲರ ಚಿತ್ತವನ್ನು ಸೆಳೆದಿತ್ತು. ಆದರೆ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್‌ ಈ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಆಗಿ ಸೇರ್ಪಡೆಗೊಂಡಿದ್ದಾರೆ. ಅವರು ಆಡುವ 11 ರಲ್ಲಿ ಎಲ್ಲೋ ತಂಡದ ಮೊದಲ ಆಯ್ಕೆಯಾಗಲಿದ್ದಾರೆ ಎಂದು ಟೀಮ್ ಮ್ಯಾನೇಜ್ಮೆಂಟ್ ತಿಳಿಸಿತು. ಏಕೆಂದರೆ ಅವರು ತಂಡದ ಉಪನಾಯಕರೂ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಸದ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದಾರೆ. ಆದರೆ ಐಪಿಎಲ್‌ನಲ್ಲೂ ಇವರ ಪ್ರದರ್ಶನ ಸ್ಥಿರವಾಗಿರಲಿಲ್ಲ. ಹೀಗಾಗಿ ಇವರನ್ನುಆಯ್ಕೆ ಮಾಡಿದಕ್ಕೆ ಪ್ರಶ್ನೆಗಳು ಎದ್ದಿದ್ದವು.

Why did BCCI give chance to Hardik Pandya The truth lies in T20 World Cup statistics

ಅಜಿತ್ ಅಗರ್ಕರ್‌ ಹೇಳಿದ್ದೇನು?

ಟೀಂ ಇಂಡಿಯಾ ಘೋಷಣೆಯ ನಂತರ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಹಾರ್ದಿಕ್ ಪಾಂಡ್ಯ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ತಂಡಕ್ಕೆ ಸಮತೋಲನವನ್ನು ನೀಡುವುದನ್ನು ಹೊರತುಪಡಿಸಿ, ಅವರು ಫಿಟ್ ಆಗಿದ್ದರೆ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನಿವಾರ್ಯವಾಯಿತು. ಮುಂಬೈ ಇಂಡಿಯನ್ಸ್ ಪರ ಇದುವರೆಗೆ ಎಲ್ಲಾ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಹಾರ್ದಿಕ್ ನೀಡುತ್ತಿರುವ ಪ್ರದರ್ಶನ ಸ್ಥಿರವಾಗಿಲ್ಲ ನಿಜ. ಆದರೆ ಅವರ ಫಿಟ್ನೆಸ್ ಚೆನ್ನಾಗಿದೆ. ಅವರು ತಂಡಕ್ಕೆ ಎಷ್ಟು ಬ್ಯಾಲೆನ್ಸ್ ನೀಡುತ್ತಾರೆ ಎಂದು ಬಿಸಿಸಿಐ ಅಜಿತ್ ಅಗರ್ಕರ್‌ ತಿಳಿಸಿದ್ದಾರೆ.

ಎಷ್ಟು ವಿಶ್ವಕಪ್‌ ಆಡಿದ್ದಾರೆ ಹಾರ್ದಿಕ್‌

ಹಾರ್ದಿಕ್ ಪಾಂಡ್ಯ ಸದ್ಯಕ್ಕೆ ಫಾರ್ಮ್‌ನಲ್ಲಿ ಇಲ್ಲದಿರಬಹುದು ಆದರೆ ಅವರ ಅನುಭವವು ತುಂಬಾ ಉಪಯುಕ್ತವಾಗಿದೆ. ಅವರು ಇಲ್ಲಿಯವರೆಗೆ ಟೀಮ್ ಇಂಡಿಯಾ ಪರ 3 ಟಿ20 ವಿಶ್ವಕಪ್‌ಗಳನ್ನು ಆಡಿದ್ದಾರೆ. ಅವರು 2016, 2021 ಮತ್ತು 2022 ರ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದಾರೆ.

Why did BCCI give chance to Hardik Pandya The truth lies in T20 World Cup statistics

ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಟಿ 20 ಸ್ವರೂಪದಲ್ಲಿ ಹೆಚ್ಚು ಅಗತ್ಯವಿರುವ ವೇಗದ ಬೌಲರ್ ಸ್ಥಾನವನ್ನು ಇವರು ತುಂಬ ಬಲ್ಲರು. ಅದೇ ಸಮಯದಲ್ಲಿ, ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಅವರ ಪ್ರದರ್ಶನವೂ ಉತ್ತಮವಾಗಿದೆ.

ಹೇಗಿದೆ ಟಿ20 ವಿಶ್ವಕಪ್‌ನಲ್ಲಿ ಪ್ರದರ್ಶನ

ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಪರ ಇದುವರೆಗೆ 16 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು 136.53 ಸ್ಟ್ರೈಕ್ ರೇಟ್ ಮತ್ತು 23.66 ಸರಾಸರಿಯಲ್ಲಿ 213 ರನ್ ಗಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ 25.30 ರ ಸರಾಸರಿಯಲ್ಲಿ 13 ಪಂದ್ಯಗಳಲ್ಲಿ 9.13 ರ ಎಕನಾಮಿಯಲ್ಲಿ 13 ವಿಕೆಟ್‌ಗಳನ್ನು ಪಡೆದರು. ಈ ಅಂಕಿ ಅಂಶಗಳಿಂದಲೇ ಪಾಂಡ್ಯ ಅವರಲ್ಲಿ ಆತ್ಮವಿಶ್ವಾಸ ಮೂಡಿದೆ.
ಪಾಂಡ್ಯ ಆಯ್ಕೆ ಕುರಿತು ಮುಖ್ಯ ಆಯ್ಕೆದಾರರು ಇವರನ್ನು ಆಯ್ಕೆ ಮಾಡಲು ಸಹಾಯಕವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+