IPL 2025: ಐಪಿಎಲ್‌ನಿಂದ ಎರಡು ವರ್ಷ ಬ್ಯಾನ್ ಆಗಲಿರುವ ಮಾಜಿ ಸಿಎಸ್‌ಕೆ ಆಟಗಾರ!

ಐಪಿಎಲ್ 2025ರ ಮೆಗಾ ಹರಾಜಿಗೆ ಮುಹೂರ್ತ ನಿಗದಿಯಾಗಿದ್ದು, 1574 ಆಟಗಾರರು ಮೆಗಾ ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ಈ ಮೊದಲು ಐಪಿಎಲ್ ನಲ್ಲಿ ದೊಡ್ಡ ಮೊತ್ತದ ಹಣ ಪಡೆದು, ವಿವಿಧ ಕಾರಣ ನೀಡಿ ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಿದ್ದ ಆಟಗಾರರನ್ನು ನಿರ್ಬಂಧಿಸಲು ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಮೆಗಾ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಳ್ಳದ ಆಟಗಾರರಿಗೆ ಇನ್ನು ಎರಡು ವರ್ಷ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲ್ಲ ಎಂದು ಹೇಳಿದೆ.

2025ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳದ ಪ್ರಮುಖ ಆಟಗಾರರ ಪಟ್ಟಿಯಲ್ಲಿ ಬೆನ್ ಸ್ಟೋಕ್ಸ್ ಹೆಸರು ಪ್ರಮುಖವಾಗಿದೆ. 2023ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಪರವಾಗಿ ಆಡಿದ್ದ ಬೆನ್‌ಸ್ಟೋಕ್ಸ್ ಗಾಯದ ಕಾರಣದಿಂದ ಕೆಲವು ಪಂದ್ಯಗಳನ್ನಷ್ಟೇ ಆಡಿದ್ದರು. ಈ ಬಾರಿ ಮೆಗಾ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಳ್ಳದ ಕಾರಣ ಸ್ಟೋಕ್ಸ್‌ಗೆ ಇನ್ನೆರಡು ವರ್ಷ ಐಪಿಎಲ್‌ ಹರಾಜಿನಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲಾಗಿದೆ.

why ben stokes will be banned from ipl 2026

2027ರ ಐಪಿಎಲ್‌ವರೆಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಸ್ಟೋಕ್ಸ್‌ಗೆ ಹರಾಜಿನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ. 2025ರ ಐಪಿಎಲ್‌ ಆಟಗಾರರ ಹರಾಜು ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿದ ಹೊಸ ನಿಯಮ ಇದಕ್ಕೆ ಕಾರಣವಾಗಿದೆ. ಮೆಗಾ ಹರಾಜಿನಲ್ಲಿ ಹೆಸರು ನೋಂದಾಯಿಸದ ಯಾವ ಆಟಗಾರ ಕೂಡ ಮುಂದಿನ ವರ್ಷದ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ಕಠಿಣ ನಿಯಮ ತರಲು ಕಾರಣವೇನು?

ಮೆಗಾ ಹರಾಜಿನಲ್ಲಿ ಹಲವು ಪ್ರಮುಖ ವಿದೇಶಿ ಆಟಗಾರರು ಬೇಕಂತಲೇ ತಪ್ಪಿಸಿಕೊಂಡು, ಬಳಿಕ ಮಿನಿ ಹರಾಜಿನಲ್ಲಿ ಭಾಗವಹಿಸಿ ದೊಡ್ಡ ಮೊತ್ತದ ಹಣ ಪಡೆಯುತ್ತಿದ್ದರು. 2022 ರ ಮೆಗಾ ಹರಾಜನ್ನು ತಪ್ಪಿಸಿಕೊಂಡ ಸ್ಟೋಕ್ಸ್ 2023 ರ ಮಿನಿ ಹರಾಜಿನಲ್ಲಿ ಬರೋಬ್ಬರಿ 16.25 ಕೋಟಿ ರೂಪಾಯಿಗೆ ಸಿಎಸ್‌ಕೆ ತಂಡ ಸೇರಿದ್ದರು. ಅದಕ್ಕೂ ಮುನ್ನ 2017ರ ಐಪಿಎಲ್ ಮಿನಿ ಹರಾಜಿನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ (RPSG) 14.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. 2018 ರ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ 12.5 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು.

ಗಮನಾರ್ಹವಾಗಿ ಮೆಗಾ ಹರಾಜಿನಲ್ಲಿ ಮಿನಿ ಹರಾಜಿನಲ್ಲಿ ಸಿಕ್ಕಂತೆ ದೊಡ್ಡ ಮೊತ್ತ ಸಿಗುವುದಿಲ್ಲ. ಸಾಕಷ್ಟು ಆಟಗಾರರು ಹರಾಜಿನಲ್ಲಿ ಲಭ್ಯವಿರುವ ಕಾರಣ ಫ್ರಾಂಚೈಸಿಗಳು ದೊಡ್ಡ ಮೊತ್ತಕ್ಕೆ ಖರೀದಿ ಮಾಡುವುದು ಕಡಿಮೆ. ಆದರೆ ಮಿನಿ ಹರಾಜಿನಲ್ಲಿ ಆಯ್ಕೆಗಳು ಕಡಿಮೆ ಇದ್ದಾಗ ಪೈಪೋಟಿ ಹೆಚ್ಚಿರುವ ಕಾರಣ, ಕೋಟಿ ಕೋಟಿ ಪಡೆದುಕೊಳ್ಳುತ್ತಾರೆ.

2024ರ ಮಿನಿ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 24.75 ಕೋಟಿ ರೂಪಾಯಿ ಪಡೆದುಕೊಂಡು ಐಪಿಎಲ್ ಇತಿಹಾಸದ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಮೆಗಾ ಹರಾಜಿಗೆ ಮುನ್ನ ಕೆಕೆಆರ್ ಮಿಚೆಲ್‌ ಸ್ಟಾರ್ಕ್‌ರನ್ನು ತಂಡದಿಂದ ಕೈಬಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+