ಆರ್‌ಸಿಬಿ ಸೋಲಿಗೆ ಇವನೇ ಪ್ರಮುಖ ಕಾರಣ ಅಂತಿದ್ದಾರೆ ಅಭಿಮಾನಿಗಳು!

ಆರ್‌ಸಿಬಿ ನಿನ್ನೆ ರೋಚಕ ಸೋಲು ಕಂಡಿದೆ, ಈ ಮೂಲಕ ನಮ್ಮ ಬೆಂಗಳೂರು ತಂಡ ಈಗ ಐಪಿಎಲ್ 2024 (IPL 2024)ರ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಇದೇ ಸಮಯದಲ್ಲಿ ಆರ್‌ಸಿಬಿ ಅಭಿಮಾನಿಗಳು ಆ ಒಬ್ಬ ಆಟಗಾರನ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇವನಿಂದಲೇ ಆರ್‌ಸಿಬಿ ಸೋಲುವಂತೆ ಆಗಿದ್ದು ಅಂತಿದ್ದಾರೆ!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಂಗೋ ಹಿಂಗೋ ತಿಣುಕಾಡಿ ಕೊನೆಗೆ 172 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 33 ರನ್, ರಜತ್‌ ಪಾಟೀದಾರ್ 34 ರನ್, ಮಹಿಪಾಲ್ 32 ರನ್ ಗಳಿಸಿದ್ದು ಬಿಟ್ಟರೆ ಆರ್‌ಸಿಬಿ ತಂಡದ ಯಾವುದೇ ಆಟಗಾರ ಕೂಡ 30 ರನ್ ಗಡಿ ದಾಟಲೇ ಇಲ್ಲ. ಹೀಗಿದ್ದಾಗ ಆ ಒಬ್ಬ ಆಟಗಾರನ ವಿರುದ್ಧ ಆರ್‌ಸಿಬಿ ಅಭಿಮಾನಿಗಳ ಸಮುದಾಯವೇ ಈಗ ರೊಚ್ಚಿಗೆದ್ದು ಆಕ್ರೋಶ ಹೊರಹಾಕಿದೆ. ಈ ಮೂಲಕ ನಮ್ಮ ಸೋಲಿಗೆ ನೀನೇ ಕಾರಣ ಅಂತಾ ಆರೋಪ ಮಾಡುತ್ತಿದ್ದಾರೆ ಫ್ಯಾನ್ಸ್!

What The RCB Fans Are Saying For Royal Challengers Bengaluru Loss Against The Rajasthan Royals

ಕುಡುಕ ಮ್ಯಾಕ್ಸ್‌ವೆಲ್ ಅಂತಾ ಬೈಗುಳ!

ಹೌದು, ಗ್ಲೆನ್ ಮ್ಯಾಕ್ಸ್‌ವೆಲ್ ಬಗ್ಗೆ ಅದೆಷ್ಟು ಬಿಲ್ಡಪ್ ಕೊಟ್ಟಿದ್ದರೋ ಅಷ್ಟೇ ಠುಸ್ ಪಟಾಕಿ ಆಗೋಗಿದ್ದಾರೆ ಮ್ಯಾಕ್ಸಿ. ಅದರಲ್ಲೂ 2024ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ, ಇದೇ ಗ್ಲೆನ್ ಮ್ಯಾಕ್ಸ್‌ವೆಲ್ ವಿಲನ್ ಅಂದರೂ ತಪ್ಪಾಗೋದಿಲ್ಲ. ಯಾಕಂದ್ರೆ ಇಡೀ ಟೂರ್ನಿ 15 ಪಂದ್ಯಗಳ ಆಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಒಂದೇ ಒಂದು ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲ. ನಿನ್ನೆಯಂತೂ ಡಕ್ ಔಟ್ ಅಂದ್ರೆ 00 ಸುತ್ತಿ ಹೋಗಿದ್ದರು ಮ್ಯಾಕ್ಸ್‌ವೆಲ್.

ಅದ್ರಲ್ಲೂ ಮ್ಯಾಕ್ಸಿ ಕುಡಿತದ ಚಟದ ಕಾರಣಕ್ಕೆ ಹೀಗೆ ಕೆಟ್ಟದಾಗಿ ಆಡುತ್ತಿದ್ದಾರೆ, ಇದು ಅವರ ಏಕಾಗ್ರತೆ ಮೇಲೆ ಕೂಡ ಪೆಟ್ಟು ನೀಡುತ್ತಿದ್ದು ಆರ್‌ಸಿಬಿ ಸೋಲಿಗೆ ಇದೂ ಕಾರಣವಾಗಿದೆ ಎಂಬ ಆರೋಪ ಮಾಡುತ್ತಿದ್ದಾರೆ ಫ್ಯಾನ್ಸ್. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ಅಲ್ಲದೆ ಮ್ಯಾಕ್ಸ್‌ವೆಲ್ ಭವಿಷ್ಯದ ಬಗ್ಗೆಯೂ ಕುತೂಹಲ ಮೂಡಿದೆ.

ಮುಂದಿನ ವರ್ಷ ಮ್ಯಾಕ್ಸ್‌ವೆಲ್ ಬರಲ್ವಾ?

ಹೀಗೆ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಸೋಲಿನ ನಂತರ ಬೇಸರ ಹೊರಹಾಕಿ ಮ್ಯಾಕ್ಸ್‌ವೆಲ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹಾಗೇ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡಕ್ಕೆ ಬೇಡಪ್ಪ ಸಾಕು ಅವನ ಸಹವಾಸ ಅಂತಿದ್ದಾರೆ. ಹೀಗಾಗಿ ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲಿ ಮ್ಯಾಕ್ಸಿ ಆಟ ಆಡುತ್ತಾರಾ? ಅಥವಾ ಹೊರಗೆ ಉಳಿಯುತ್ತಾರಾ? ಎಂಬ ಪ್ರಶ್ನೆ ಕೂಡ ಕಾಡ್ತಿದೆ. ಈ ಪ್ರಶ್ನೆಗೆ ಉತ್ತರ ಹುಡುಕಲು ಇನ್ನೂ ಒಂದು ವರ್ಷ ಕಾಯಬೇಕಿದ್ದು, ಮುಂದಿನ ವರ್ಷ ನಮ್ಮ ಆರ್‌ಸಿಬಿ ಕಪ್ ಗೆಲ್ಲೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಮತ್ತೊಮ್ಮೆ ಆರ್‌ಸಿಬಿ ಅಭಿಮಾನಿಗಳ ಪ್ರೀತಿಗೆ ಜಗತ್ತು ಫಿದಾ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+