ಟೀಮ್ ಇಂಡಿಯಾ ಸೋಲಿಗೆ ಗೌತಮ್‌ ಗಂಭೀರ್‌ ಆ ಅತಿಯಾಸೆಯೇ ಪ್ರಮುಖ ಕಾರಣ: ವಾಸಿಂ ಜಾಫರ್ ಹಿಂಗ್ ಹೇಳಿದ್ಯಾಕೆ?

Wasim Jaffer: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಅಕ್ಟೋಬರ್ 17) ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವೆ ಕೊನೆಯ ಹಾಗೂ ನಿರ್ಣಾಯಕ ಟಿ20 ಪಂದ್ಯ ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾವು ಗೆದ್ದರೆ ಮಾತ್ರ ಸರಣಿ ವಶಪಡಿಸಿಕೊಳ್ಳಲು ಸಾಧ್ಯ. ಇನ್ನೂ ಇದಕ್ಕೂ ಮುನ್ನ ವಾಸಿಂ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್ ಯೋಜನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡ ಬೆನ್ನಲ್ಲೇ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಯೋಜನೆಯ ಕುರಿತು ಮಾಜಿ ಕ್ರಿಕೆಟಿರ್ ವಾಸಿಂ ಜಾಫರ್ ಪ್ರತಿಕ್ರಯಿಸಿದ್ದಾರೆ. ಆಲ್ರೌಂಡರ್ ನಮನ್ ಧೀರ್ ಅವರಿಂದ ನಾಲ್ಕು ಓವರ್‌ ಬೌಲಿಂಗ್ ನಿರೀಕ್ಷಿಸುವುದು ಅತಿಯಾದ ಆಸೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

Wasim Jaffer Questions Head coach Gautam Gambhir s Strategy Backs Rinku Singh Ahead of 5th T20

ರಿಂಕು ಸಿಂಗ್ ಹೊರಗಿಟ್ಟಿರುವುದಕ್ಕೆ ಅಸಮಾಧಾನ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ವಾಸಿಂ ಜಾಫರ್ ಅವರು, ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ರಿಂಕು ಸಿಂಗ್ ಅವರಂತಹ ಪಂದ್ಯ ಮುಗಿಸುವ ಸಾಮರ್ಥ್ಯವಿರುವ ಆಟಗಾರನನ್ನು ತಂಡದಿಂದ ಹೊರಗಿಟ್ಟಿರುವುದು ಭಾರತದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಗೌತಮ್ ಗಂಭೀರ್ ವಿರುದ್ಧ ವಾಸಿಂ ಜಾಫರ್ ಆಕ್ರೋಶ

'ಬ್ಯಾಟಿಂಗ್ ಸಾಮರ್ಥ್ಯ ಮತ್ತು ಅನುಭವದ ದೃಷ್ಟಿಯಿಂದ ನೋಡಿದರೆ, ರಿಂಕು ಸಿಂಗ್ ಇತರ ಆಟಗಾರರಿಗಿಂತ ಉತ್ತಮವಾಗಿ ಆಟ ಆಡುತ್ತಾರೆ. 5 ಮತ್ತು 6ನೇ ಕ್ರಮಾಂಕದಲ್ಲಿ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಬಲ್ಲರು, ಜೊತೆಗೆ ಎಡಗೈ ಬ್ಯಾಟರ್. ಕೇವಲ ಬೌಲಿಂಗ್ ಮಾಡುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ಪಕ್ಕಕ್ಕೆ ಸರಿಸಿರುವುದು ನಿಜಕ್ಕೂ ದುರದೃಷ್ಟಕರ. ನಾಲ್ಕನೇ ಪಂದ್ಯದಲ್ಲಿ ರಿಂಕು ಇದ್ದಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಅವರು ಅಂತಹ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ,' ಎಂದು ಜಾಫರ್ ಹೇಳಿದ್ದಾರೆ.

ನಮನ್ ಧೀರ್ ಬೌಲಿಂಗ್ ತಂತ್ರದ ಬಗ್ಗೆ ಜಾಫರ್ ಪ್ರಶ್ನೆ

ನಾಲ್ಕನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 248 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 223 ರನ್‌ಗಳಿಗೆ ಆಲೌಟ್ ಆಗಿ 24 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಯುವ ಆಲ್‌ರೌಂಡರ್ ನಮನ್ ಧೀರ್ ಅವರನ್ನು ಆಡಿಸಿದ ಗಂಭೀರ್ ಹಾಗೂ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಜಾಫರ್ ಪ್ರಶ್ನಿಸಿದ್ದಾರೆ.

'ಭಾರತೀಯ ಪಿಚ್‌ಗಳಲ್ಲಿ ಪವರ್‌ಪ್ಲೇ ಮುಗಿದ ನಂತರ ಯಾವುದೇ ವೈವಿಧ್ಯತೆ ಇಲ್ಲದ ಆಫ್-ಸ್ಪಿನ್ನರ್‌ಗಳಿಗೆ ಬೌಲಿಂಗ್ ಮಾಡುವುದು ಅತ್ಯಂತ ಕಷ್ಟ. ವೆಸ್ಟ್ ಇಂಡೀಸ್‌ನ ರೋಸ್ಟನ್ ಚೇಸ್ ಅದನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅದಕ್ಕೆ ಅವರಿಗೆ ಶ್ರೇಯಸ್ಸು ಸಲ್ಲಬೇಕು. ಆದರೆ ಯಾವುದೇ ಗಿಮಿಕ್ ಅಥವಾ ಚಾಣಾಕ್ಷತೆ ಇಲ್ಲದೆ ನಮನ್ ಧೀರ್ ಅವರಿಂದ ಸಂಪೂರ್ಣ 4 ಓವರ್‌ಗಳನ್ನು ನಿರೀಕ್ಷಿಸುವುದು ಅತಿಯಾದ ಆಸೆಯಾಗುತ್ತದೆ. ಅವರು ಟಿ20ಯಲ್ಲಿ ಮುಂದುವರೆಯಬೇಕಾದರೆ ಬ್ಯಾಟಿಂಗ್‌ನಲ್ಲಿ ಪ್ರದರ್ಶನ ನೀಡುವುದು ಅಗತ್ಯ,' ಎಂದು ಜಾಫರ್ ಸ್ಪಷ್ಟವಾಗಿ ಹೇಳಿದ್ದಾರೆ.

ಸರಣಿಯ ಪ್ರಸ್ತುತ ಸ್ಥಿತಿ

ಐದು ಪಂದ್ಯಗಳ ಈ ಟಿ20 ಸರಣಿಯು ಪ್ರಸ್ತುತ 2-2 ಅಂತರದಲ್ಲಿ ಸಮಬಲಗೊಂಡಿದೆ. ಅಂತಿಮ ಹಾಗೂ ನಿರ್ಣಾಯಕ ಐದನೇ ಪಂದ್ಯವು ಶನಿವಾರ (ಅಕ್ಟೋಬರ್ 17) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾ ಗೆದ್ದರೆ ಮಾತ್ರ ಸರಣಿ ತನ್ನದಾಗಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಸೋಲು ಖಚಿತ.

ಸರಣಿ ನಿರ್ಣಾಯಕ ಹಂತಕ್ಕೆ ತಲುಪಿರುವಾಗ, ಆಡುವ 11ರ ಬಳಗದಲ್ಲಿ ಆಲ್‌ರೌಂಡರ್‌ಗಳನ್ನು ಸೇರಿಸಿಕೊಳ್ಳುವ ಗಂಭೀರ್ ಅವರ ಯೋಜನೆಯು ಬ್ಯಾಟಿಂಗ್ ಸಮತೋಲನವನ್ನು ಹಾಳುಗೆಡವುತ್ತಿದೆಯೇ ಎಂಬ ಪ್ರಶ್ನೆಯನ್ನು ವಾಸಿಂ ಜಾಫರ್ ಅವರ ಈ ಹೇಳಿಕೆಗಳು ಹುಟ್ಟುಹಾಕಿವೆ. ಒಟ್ಟಿನಲ್ಲಿ ಗೌತ್ ಗಂಭೀರ್ ಅವರ ಯೋಜನೆಯೇ ಸರಿಯಿಲ್ಲ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+