ರಿಷಭ್ ಪಂತ್ ಬೇಡ.. ಕನ್ನಡಿಗ ಕೆಎಲ್‌ ರಾಹುಲ್‌ಗೆ ನಾಯಕತ್ವ ಪಟ್ಟ ಕಟ್ಟಿ: ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್

IPL 2027: ಈಗಾಗಲೇ ಐಪಿಎಲ್‌ 2026ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇನ್ನೂ 2027ರ ಆವೃತ್ತಿ ಆರಂಭಕ್ಕೆ ತುಂಬಾ ಸಮಯ ಇದ್ದರೂ ಕೂಡ ತೆರೆಮರೆಯಲ್ಲಿ ಪ್ರಮುಖ ಆಟಗಾರರ ಟ್ರೇಡ್‌ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗಷ್ಟೇ ಎಲ್‌ಎಸ್‌ಜಿ ತೊರೆದು ಮತ್ತೆ ಡೆಲ್ಲಿಗೆ ಮರಳಿದ್ದ ರಿಷಭ್ ಪಂತ್‌ಗೆ ಇದೀಗ ವಾಸಿಂ ಜಾಫರ್ ಮಹತ್ವದ ಸಲಹೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

2026ರ ಐಪಿಎಲ್‌ ಆವೃತ್ತಿಯ ನಂತರ ರಿಷಭ್ ಪಂತ್ ಅವರು ಲಕ್ನೋ ಸೂಪರ್ ಜೈಂಟ್ಸ್ ತೊರೆದು ತಮ್ಮ ಹಳೆಯ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿದ್ದಾರೆ. ಪಂತ್ ₹12 ಕೋಟಿಗಳಷ್ಟು ವೇತನ ಕಡಿತ ಮಾಡಿಕೊಂಡು, 15 ಕೋಟಿ ರೂಪಾಯಿಗೆ ಸಂಬಳಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡರು.

Wasim Jaffer Big Advice to Rishabh Pant Says Let Kannadiga KL Rahul Lead Delhi Capitals Team

ರಿಷಭ್ ಪಂತ್‌ಗೆ ಮಹತ್ವದ ಸಲಹೆ

ಐಪಿಎಲ್ 2026ರ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ಹಾಗೂ ನಾಯಕತ್ವದ ಶೈಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪಂತ್ ಮರಳಿರುವುದರಿಂದ ಅವರಿಗೆ ಮತ್ತೆ ತಂಡದ ಚುಕ್ಕಾಣಿ ನೀಡಲಾಗುತ್ತದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವಾಸಿಂ ಜಾಫರ್, ಡೆಲ್ಲಿ ಪ್ರಾಂಚೈಸಿಯು ನಾಯಕತ್ವದ ಆಫರ್ ನೀಡಿದರೂ, ಅದನ್ನು ನಯವಾಗಿಯೇ ನಿರಾಕರಿಸುವುದು ಪಂತ್ ವೃತ್ತಿಜೀವನಕ್ಕೆ ಒಳ್ಳೆಯದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾಸಿಂ ಜಾಫರ್ ಹೇಳಿದ್ದೇನು?

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ವಾಸೀಂ ಜಾಫರ್ ಅವರು, 'ಡೆಲ್ಲಿ ಕ್ಯಾಪಿಟಲ್ಸ್ ಅವರಿಗೆ ನಾಯಕತ್ವದ ಆಫರ್ ನೀಡಿದರೂ, ಅವರು ಅದನ್ನು ಬೇಡ ಎನ್ನುವುದೇ ಉತ್ತಮ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರ ಅವರ ಬ್ಯಾಟಿಂಗ್ ಪ್ರದರ್ಶನ ಸುಧಾರಿಸಬೇಕಿದ್ದು, ಕೇವಲ ಒಬ್ಬ ಬ್ಯಾಟರ್ ಆಗಿ ಆಡುವುದು ಒಳಿತು,' ಎಂದು ಸಲಹೆ ನೀಡಿದ್ದಾರೆ.

ಎಲ್‌ಎಸ್‌ಜಿ ತಂಡದಲ್ಲಿ ನಾಯಕನಾಗಿ ಪಂತ್ ಅವರ ಎರಡು ಸೀಸನ್‌ಗಳು ಅಂದುಕೊಂಡಂತೆ ನಡೆಯಲಿಲ್ಲ. 'ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ, ಟಿ20 ಮತ್ತು ಏಕದಿನ ಭಾರತೀಯ ತಂಡಗಳಿಗೆ ಪುನರಾಗಮನ ಮಾಡುವುದೇ ಅವರ ಮೊದಲ ಆದ್ಯತೆಯಾಗಬೇಕು. ನಾಯಕತ್ವ ವಹಿಸಿಕೊಳ್ಳುವುದು ಅವರ ಆದ್ಯತೆಯಾಗಿರುವುದಿಲ್ಲ, ಏಕೆಂದರೆ ಅವರು ಪ್ರಸ್ತುತ ಭಾರತೀಯ ತಂಡದ ನಾಯಕತ್ವದ ರೇಸ್‌ನಲ್ಲಾಗಲಿ ಅಥವಾ ಆ ನಾಯಕರ ಗುಂಪಿನಲ್ಲಾಗಲಿ ಇಲ್ಲ,' ಎಂದು ಹೇಳಿದ್ದಾರೆ.

'ರಿಷಭ್ ಪಂತ್ ಅವರು ನಾಯಕತ್ವವನ್ನು ಬದಿಗಿಟ್ಟು ಒಬ್ಬ ಬ್ಯಾಟರ್ ಆಗಿ ಉತ್ತಮ ಪ್ರದರ್ಶನ ನೀಡುವುದರ ಮೇಲೆ ಮತ್ತು ತಮ್ಮ ಬ್ಯಾಟಿಂಗ್ ಮೂಲಕವೇ ಫ್ರಾಂಚೈಸಿಗೆ ಪಂದ್ಯಗಳನ್ನು ಗೆಲ್ಲಿಸಿಕೊಡುವುದರ ಮೇಲೆ ಗಮನ ಹರಿಸಬೇಕಿದೆ. ಪಂತ್ ಅವರಿಗೆ ಇದೇ ಅತ್ಯಂತ ಸೂಕ್ತವಾದದ್ದು ಎಂದು ನಾನು ಭಾವಿಸುತ್ತೇನೆ,' ಎಂದು ಜಾಫರ್ ಹೇಳಿದ್ದಾರೆ.

2025 ಮತ್ತು 2026ರ ಐಪಿಎಲ್ ಸೀಸನ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪಂತ್ ಮುನ್ನಡೆಸಿದ್ದರು. ಆದರೆ, ಅವರ ನಾಯಕತ್ವದಲ್ಲಿ ಎಲ್‌ಎಸ್‌ಜಿ ಕ್ರಮವಾಗಿ 7ನೇ ಹಾಗೂ ಕೊನೆಯ ಸ್ಥಾನಕ್ಕೆ ಕುಸಿಯಿತು. ಜೊತೆಗೆ ನಾಯಕನಾಗಿ ಅವರ ಮೇಲಿದ್ದ ಒತ್ತಡ ಬ್ಯಾಟಿಂಗ್ ಮೇಲೆಯೂ ಪರಿಣಾಮ ಬೀರಿತ್ತು.

'ಒಂದು ಐಪಿಎಲ್ ತಂಡವನ್ನು ಮುನ್ನಡೆಸುವುದು ಸುಲಭವಲ್ಲ. ತಂಡದ ಮಾಲೀಕರ ಒತ್ತಡ, ಅಭಿಮಾನಿಗಳ ನಿರೀಕ್ಷೆಗಳ ಜೊತೆಗೆ ಸ್ವಂತ ಪ್ರದರ್ಶನದ ಕಡೆಗೂ ಗಮನಹರಿಸಬೇಕಾಗುತ್ತದೆ. ಪಂತ್ ಕೇವಲ ಬ್ಯಾಟರ್ ಅಲ್ಲ, ವಿಕೆಟ್ ಕೀಪಿಂಗ್ ಜವಾಬ್ದಾರಿಯೂ ಅವರ ಮೇಲಿದೆ. ಇಷ್ಟೆಲ್ಲಾ ಸವಾಲುಗಳಿರುವಾಗ ನಾಯಕತ್ವದ ಹೆಚ್ಚುವರಿ ಹೊರೆ ಅಗತ್ಯವಿಲ್ಲ,' ಎಂದು ಹೇಳಿದ್ದಾರೆ.

'ಕೆ.ಎಲ್. ರಾಹುಲ್‌ಗೆ ನಾಯಕತ್ವ ಪಟ್ಟ ಕಟ್ಟಿ'

'ಕಳೆದ ಐದು ಐಪಿಎಲ್ ಆವೃತ್ತಿಗಳಲ್ಲಿ ಪ್ಲೇಆಫ್ ತಲುಪಲು ವಿಫಲವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ನಾಯಕನನ್ನಾಗಿ ಮಾಡುವುದು ಅತ್ಯಂತ ಸೂಕ್ತ ಆಯ್ಕೆ. ಸದ್ಯ ರಾಹುಲ್ ವೇಳೆ ಯಾವುದೇ ಹೆಚ್ಚುವರಿ ಜವಾಬ್ದಾರಿಗಳಿಲ್ಲ. ಆದ್ದರಿಂದ ಅವರು ತಂಡವನ್ನು ಮುನ್ನಡೆಸಲು ಸಮರ್ಥರಾಗಿದ್ದಾರೆ,' ಎಂದು ಜಾಫರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕತ್ವಕ್ಕೆ ಪಂತ್ ಸೂಕ್ತವಲ್ಲ, ಬದಲಿಗೆ ಕೆಎಲ್ ರಾಹುಲ್‌ಗೆ ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲಿದ್ದಾರೆ ಎನ್ನುವುದೇ ಇವರ ಹೇಳಿಕೆಯ ಹಿಂದಿನ ಅರ್ಥವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+