IPL 2025: ವಾಷಿಂಗ್ಟನ್ ಸುಂದರ್ಗೆ ಬರೋಬ್ಬರಿ ₹15.5 ಕೋಟಿ ಕೊಟ್ಟ ಗುಜರಾತ್ ಜೈಂಟ್ಸ್!
ಐಪಿಎಲ್ 2025ರ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದ್ದು, 500ಕ್ಕೂ ಹೆಚ್ಚು ಆಟಗಾರರ ಹೆಸರನ್ನು ಹರಾಜಿಗಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಐಪಿಎಲ್ ಮೆಗಾಹರಾಜಿಗೆ ಮುನ್ನ ಅಣಕು ಹರಾಜು ನಡೆಯುತ್ತಿದ್ದು ವಿವಿಧ ಆಟಗಾರರನ್ನು ಸೇರಿಸಿಕೊಂಡು ತಂಡವನ್ನು ಕಟ್ಟಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಹಲವು ಆಟಗಾರರು ಈ ಬಾರಿ ಹರಾಜಿನಲ್ಲಿ ಹಲವು ಆಟಗಾರರು ಕೋಟಿ ಕೋಟಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ, ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ ಆ ಲಿಸ್ಟ್‌ನಲ್ಲಿದ್ದು ಇದೀಗ ಮತ್ತೊಬ್ಬ ಆಲ್‌ರೌಂಡರ್ ಕೋಟಿ ಕೋಟಿ ಪಡೆಯುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿರುವ ವಾಷಿಂಗ್ಟನ್ ಸುಂದರ್ ಈ ಬಾರಿ ಹರಾಜಿನಲ್ಲಿ ಕೋಟಿ ಕೋಟಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಐಪಿಎಲ್ ಮೆಗಾ ಹರಾಜಿಗೆ ಮುನ್ನ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಅಣಕು ಹರಾಜು ನಡೆಸುತ್ತಿದ್ದು ಆಯ್ಕೆ ಮಾಡಿರುವ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಂಡಗಳ ಪರ ಹರಾಜು ಕೂಗಲು ಅವಕಾಶ ಮಾಡಿಕೊಟ್ಟಿದ್ದಾರೆ.

ಮೂರು ಜನರ ತಂಡವನ್ನು ಮಾಡಿದ್ದು ಎಲ್ಲಾ 10 ಫ್ರಾಂಚೈಸಿಗಳಿಗೆ ಐಪಿಎಲ್ ಹರಾಜು ಮಾದರಿಯಲ್ಲೇ ಆಟಗಾರರನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿತ್ತು. ಸ್ವತಃ ರವಿಚಂದ್ರನ್ ಅಶ್ವಿನ್ ಆಟಗಾರರ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡುತ್ತಿದ್ದಾರೆ. ಈ ಅಣಕು ಹರಾಜಿನಲ್ಲಿ ವಾಷಿಂಗ್ಟನ್ ಸುಂದರ್ ಅವರಿಗಾಗಿ ಎಲ್ಲಾ ಫ್ರಾಂಚೈಸಿಗಳು ಮುಗಿಬಿದ್ದ ಕಾರಣ ಕೋಟಿ ಕೋಟಿ ಪಡೆದು.
15.5 ಕೋಟಿ ರೂಪಾಯಿಗೆ ಹರಾಜು
2 ಕೋಟಿ ರೂಪಾಯಿಗಳ ಮೂಲ ಬೆಲೆಯೊಂದಿಗೆ ಹರಾಜಿಗೆ ಪ್ರವೇಶಿಸಿದ ಸುಂದರ್ ಅವರನ್ನು ಪಡೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಎಸ್‌ಆರ್‌ಹೆಚ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 15.5 ಕೋಟಿ ರೂಪಾಯಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಬಿಡ್ ಮಾಡಿತು.
ಮೆಗಾ ಹರಾಜಿನಲ್ಲಿ ವಾಷಿಂಗ್ಟನ್ ಸುಂದರ್ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆಯಬಹುದು ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ (TNPL) ವಾಷಿಂಗ್ಟನ್ ಸುಂದರ್ ಅಮೋಘ ಪ್ರದರ್ಶನ ನೀಡಿದ್ದರಿಂದ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.
ಆರ್ ಸಿಬಿ ಭಾರಿ ಪೈಪೋಟಿ
ಮೂವರು ಆಟಗಾರರನ್ನು ಮಾತ್ರ ಆರ್ ಸಿಬಿ ಉಳಿಸಿಕೊಂಡಿದ್ದು ಉಳಿದ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿದೆ. ವಾಷಿಂಗ್ಟನ್ ಸುಂದರ್ ಉತ್ತಮ ಆಲ್‌ರೌಂಡರ್ ಆಗಿರುವ ಕಾರಣ, ಮುಖ್ಯವಾಗಿ ಎಡಗೈ ಆಟಗಾರನಾಗಿದ್ದು ಆರ್ ಸಿಬಿ ದೊಡ್ಡ ಮೊತ್ತ ನೀಡಲು ಯೋಜಿಸಿದ್ದರೂ ಅಚ್ಚರಿ ಪಡಬೇಕಿಲ್ಲ. ವಾಷಿಂಗ್ಟನ್ ಸುಂದರ್ ಪವರ್ ಪ್ಲೇನಲ್ಲಿ ಕೂಡ ಬೌಲಿಂಗ್ ಮಾಡುತ್ತಾರೆ, ಬ್ಯಾಟಿಂಗ್‌ನಲ್ಲಿ ಕೂಡ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದು ಎಲ್ಲಾ ಫ್ರಾಂಚೈಸಿಗಳು ಅವರಿಗಾಗಿ ಪೈಪೋಟಿಗೆ ಇಳಿಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications