Virat Kohli: ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಲಿದ್ದಾರೆ ವಿರಾಟ್ ಕೊಹ್ಲಿ!

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಮೋಘ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ, ಭಾರತ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದರು. ತಮ್ಮ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 'ಪಂದ್ಯದ ಆಟಗಾರ' ಪ್ರಶಸ್ತಿಯನ್ನು ಪಡೆದರು.

ಬಾರ್ಬಡೋಸ್‌ನಿಂದ ಭಾರತ ತಂಡದ ಜೊತೆ ಆಗಮಿಸಿದ ವಿರಾಟ್ ಕೊಹ್ಲಿ, ತಂಡದ ಜೊತೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಎಲ್ಲಾ ಕ್ರಿಕೆಟಿಗರು ಮನೆಗೆ ತೆರಳಿದರೆ, ಕೊಹ್ಲಿ ಮಾತ್ರ ಲಂಡನ್‌ಗೆ ತೆರಳಿದರು. ವಿರಾಟ್ ಕೊಹ್ಲಿ ಭಾರತವನ್ನು ತೊರೆದು ಲಂಡನ್‌ನಲ್ಲಿ ನೆಲೆಸಲಿದ್ದಾರೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.

Virat Kohli s Potential Permanent Move to London Explored

ಅಕಾಯ್ ಕೊಹ್ಲಿ ಜನಿಸಿದ ನಂತರ ಅನುಷ್ಕಾ ಶರ್ಮಾ ಲಂಡನ್‌ನಲ್ಲೇ ಇದ್ದು, ಕುಟುಂಬದ ಜೊತೆ ಕಾಲ ಕಳೆಯಲು ವಿರಾಟ್ ಕೊಹ್ಲಿ ಲಂಡನ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ವಿರಾಟ್ ಕೊಹ್ಲಿ ಮುಂಬರುವ ವರ್ಷಗಳಲ್ಲಿ ಭಾರತವನ್ನು ತೊರೆದು ಲಂಡನ್‌ಗೆ ಶಾಶ್ವತವಾಗಿ ನೆಲೆಸಲು ವಿವಿಧ ಕಾರಣಗಳು ಇರಬಹುದು ಎಂದು ಹೇಳಲಾಗಿದೆ.

ಅನುಮಾನಕ್ಕೆ ಕಾರಣಗಳೇನು?

ಅನುಷ್ಕಾ ಶರ್ಮಾ ವಾಮಿಕಾ ಮತ್ತು ಅಕಾಯ್ ಅವರೊಂದಿಗೆ ಲಂಡನ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರು ಬಾರ್ಬಡೋಸ್‌ನಿಂದ ಭಾರತಕ್ಕೆ ಮರಳಿದ ಕೂಡಲೇ ಅವರನ್ನು ಭೇಟಿಯಾಗಲು ಹೊರಟಿದ್ದರು. ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ದಂಪತಿಗಳು ಜೀವನವನ್ನು ನಡೆಸಲು ಶಾಶ್ವತವಾಗಿ ಲಂಡನ್‌ಗೆ ಸ್ಥಳಾಂತರಗೊಳ್ಳುತ್ತಾರೆ ಎನ್ನಲಾಗುತ್ತಿದೆ.

ವಿಶೇಷವಾಗಿ ಅನುಷ್ಕಾ ಮತ್ತು ವಿರಾಟ್ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಈ ಊಹಾಪೋಹಗಳು ಶುರುವಾಗಿದೆ. 2023 ರಲ್ಲಿ ವಿರಾಟ್ ತಮ್ಮ ಒತ್ತಡದ ವೇಳಾಪಟ್ಟಿಯಿಂದ ವಿರಾಮ ತೆಗೆದುಕೊಂಡು ಲಂಡನ್‌ನಲ್ಲಿ ಅನುಷ್ಕಾ ಅವರೊಂದಿಗೆ ಸ್ವಲ್ಪ ಸಮಯ ಕಳೆದರು.

ಲಂಡನ್‌ನ ರೆಸ್ಟೋರೆಂಟ್‌ನ ಹೊರಗೆ ಅನುಷ್ಕಾ ಮತ್ತು ವಿರಾಟ್ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗಿತ್ತು. ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾಗ ಸಾಕಷ್ಟು ಸಮಯವನ್ನು ಲಂಡನ್‌ನಲ್ಲಿ ಕಳೆದರು. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಜನಿಸಿದ ಐದು ದಿನಗಳ ನಂತರ ತಮ್ಮ ಮಗು ಹುಟ್ಟಿರುವ ಬಗ್ಗೆ ಘೋಷಣೆ ಮಾಡಿದ್ದರು. ಅಲ್ಲಿಯವರೆಗೆ, ಅಕಾಯ್ ಅವರ ಜನನದ ಬಗ್ಗೆ ಅಭಿಮಾನಿಗಳಿಗೆ ಯಾವುದೇ ಸುಳಿವು ಇರಲಿಲ್ಲ.

ಬಾಲಿವುಡ್ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಿಂದ ಅನುಷ್ಕಾ ಶರ್ಮಾ ದೂರವುಳಿದಿರುವುದು ಊಹಾಪೋಹ ಹೆಚ್ಚಾಗಲು ಕಾರಣವಾಗಿದೆ. ಕುಟುಂಬದ ಜೊತೆ ಸಮಯ ಕಳೆಯಬೇಕು ಇನ್ನು ಮುಂದೆ ಹೆಚ್ಚು ಸಿನಿಮಾ ಮಾಡಲ್ಲ ಎಂದು ಅನುಷ್ಕಾ ಕಳೆದ ವರ್ಷ ಹೇಳಿದ್ದರು.

ವಿರಾಟ್ ಕೊಹ್ಲಿ ಅವರು ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಇಷ್ಟ

ಎಂದು ಆಗಾಗ್ಗೆ ಹೇಳಿದ್ದಾರೆ. ಲಂಡನ್‌ನಲ್ಲಿ ನಾನು ಸಾಮಾನ್ಯ ಮನುಷ್ಯನಂತೆ ಬದುಕಬಹುದು. ಕುಟುಂಬದ ಜೊತೆ ಕಾಲ ಕಳೆಯುವುದಕ್ಕಿಂತ ಹೆಚ್ಚಿನ ಸಂತೋಷ ಮತ್ತೊಂದಿಲ್ಲ, ರಸ್ತೆಯಲ್ಲಿ ಸಾಮಾನ್ಯರಂತೆ ಓಡಾಡುವುದು ಅದ್ಭುತ ಭಾವನೆ ಎಂದು ಹೇಳಿದ್ದರು.

ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಯುಕೆ ಮೂಲದ ಕಂಪನಿಯ ನಿರ್ದೇಶಕರೂ ಆಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಮತ್ತು ಅಪ್‌ಡೇಟ್ ಕಂಪನಿ ಮಾಹಿತಿ ಸೇವೆಯ ಪ್ರಕಾರ, ದಂಪತಿಗಳು ಮ್ಯಾಜಿಕ್ ಲ್ಯಾಂಪ್‌ನ ಮೂವರು ನಿರ್ದೇಶಕರಲ್ಲಿ ಇಬ್ಬರು ಎಂದು ವರದಿ ಹೇಳಿದರು. ಆಗಸ್ಟ್ 1, 2022 ರಂದು ಸಂಯೋಜಿತವಾದ ನಿರ್ವಹಣಾ ಸಲಹಾ ಸಂಸ್ಥೆಯಾಗಿದೆ.

ಇದೆಲ್ಲಾ ಅಭಿಮಾನಿಗಳ ಊಹೆಯಾಗಿದೆ. ಕೊಹ್ಲಿ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಲಂಡನ್‌ನಲ್ಲಿ ನೆಲೆಸುವ ಬಗ್ಗೆ ಯೋಜಿಸಬಹುದು. ಈ ಬಗ್ಗೆ ಕೊಹ್ಲಿ ಇನ್ನೂ ಸ್ಪಷ್ಟನೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+