World Cup Champions: ತಿಂಡಿಗೆ ವಿರಾಟ್ ಕೊಹ್ಲಿ ನೆಚ್ಚಿನ ತಿನಿಸು: ಟೀಮ್ ಇಂಡಿಯಾದ ಈ ದಿನದ ಪೂರ್ತಿ ಶೆಡ್ಯೂಲ್ ಇಲ್ಲಿದೆ
ಶನಿವಾರ ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಐಸಿಸಿ ಟಿ20 ವಿಶ್ವ ಚಾಂಪಿಯನ್ ಆದ ಟೀಮ್ ಇಂಡಿಯಾ, ಈಗ ಭಾರತಕ್ಕೆ ಕಾಲಿಟ್ಟಿದೆ. ಸತತ 16 ಗಂಟೆಗಳ ಪ್ರವಾಸದ ಬಳಿಕ ಟೀಮ್ ಇಂಡಿಯಾ ಆಟಗಾರರು ನವದೆಹಲಿ ತಲುಪಿದ್ದಾರೆ. ವಿಮಾನ ನಿಲ್ದಾಣ ತಲಪುತ್ತಿದ್ದಂತೆ ವಿಶ್ವ ಚಾಂಪಿಯನ್ನರಿಗೆ ಭರ್ಜರಿ ಸ್ವಾಗತ ನೀಡಲಾಯಿತು. ಜನ ವಿಮಾನ ನಿಲ್ದಾಣದಲ್ಲಿ ನೆಚ್ಚಿನ ಆಟಗಾರರನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು.
ಏರ್ ಪೋರ್ಟ್ ಹೊರಗಡೆ ತಂಡವನ್ನು ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ತಂಡದ ನಾಯಕ ರೋಹಿತ್ ಶರ್ಮಾ ಹೊರಗೆ ನಿಂತಿದ್ದ ಅಭಿಮಾನಿಗಳಿಗೆ ಟ್ರೋಫಿಯ ದರ್ಶನ ಮಾಡಿಸಿದರು. ವಿಮಾನ ನಿಲ್ದಾಣದಿಂದ ತಂಡವು ಹೋಟೆಲ್ ಐಟಿಸಿ ಮೌರ್ಯ ತಲುಪಿತು. ಇಲ್ಲಿಯೂ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ತಂಡವು ಕೆಲವು ಗಂಟೆಗಳ ಕಾಲ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯಲಿದೆ.

ಟೀಮ್ ಇಂಡಿಯಾ ಸದ್ಯ ದೆಹಲಿಯ ಪ್ರಸಿದ್ಧ ಮೌರ್ಯ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಬೆಳಗಿನ ಉಪಾಹಾರದಲ್ಲಿ ಚೋಲೆ ಭಾತುರೆ, ಲಸ್ಸಿ ಮತ್ತು ಅವರ ಆಯ್ಕೆಯ ಉಪಹಾರವನ್ನು ನೀಡಲಾಗುತ್ತದೆ.
#WATCH | Visuals from ITC Maurya in Delhi where the Men's Indian Cricket Team has arrived from Barbados after winning the #T20WorldCup2024 trophy. pic.twitter.com/vPQ6BPBmK0
— ANI (@ANI) July 4, 2024
ವಿಶೇಷ ಕೇಕ್ ವ್ಯವಸ್ಥೆ
ಟಿ-20 ವಿಶ್ವಕಪ್ ಟ್ರೋಫಿಯೊಂದಿಗೆ ದೆಹಲಿ ತಲುಪಿದ ಟೀಂ ಇಂಡಿಯಾಗೆ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಇಲ್ಲಿ ಟೀಂ ಇಂಡಿಯಾ ಕೇಕ್ ಕತ್ತರಿಸುವ ಮೂಲಕ ವಿಜಯೋತ್ಸವ ಆಚರಿಸಿತು. ಟೀಮ್ ಇಂಡಿಯಾದ ಯಶಸ್ಸಿನ ಮೇಲೆ ಹೋಟೆಲ್ ನವರು ಈ ಕೇಕ್ ಅನ್ನು ವಿಶೇಷವಾಗಿ ತಯಾರಿಸಿದ್ದಾರೆ.

ತಂಡಕ್ಕೆ ವಿಶೇಷ ಚಾಕೊಲೇಟ್
ಐಟಿಸಿ ಮೌರ್ಯ ಹೋಟೆಲ್ ನಲ್ಲಿ ಟೀಂ ಇಂಡಿಯಾಗೆ ವಿಶೇಷ ಉಪಹಾರವನ್ನು ಸಿದ್ಧಪಡಿಸಲಾಗಿದೆ. ಆಟಗಾರರ ಆದ್ಯತೆಗಳನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ. ತಂಡಕ್ಕಾಗಿ ವಿಶೇಷ ಉಪಹಾರವನ್ನು ಸಿದ್ಧಪಡಿಸಲಾಗಿದೆ ಎಂದು ಮೌರ್ಯ ಚೆಫ್ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ. ಚೋಲೆ-ಭಾತುರೆ ಮತ್ತು ರಾಗಿಗಳನ್ನು ಇದರಲ್ಲಿ ಸೇರಿಸಲಾಗಿದೆ. ಟೀಂ ಇಂಡಿಯಾಗೆ ವಿಶೇಷವಾದ ಚಾಕೊಲೇಟ್ ಕೂಡ ಸಿದ್ಧಪಡಿಸಿದ್ದೇವೆ ಎಂದು ತಿಳಿಸಿದರು.
#WATCH | Virat Kohli and Hardik Pandya at ITC Maurya Hotel in Delhi, after winning the #T20WorldCup2024 trophy. pic.twitter.com/o6yzbhcnzl
— ANI (@ANI) July 4, 2024
ಇವತ್ತಿನ ಶೆಡ್ಯೂಲ್ ಏನು?
ಬೆಳಗ್ಗೆ 9 ಗಂಟೆಗೆ ಐಟಿಸಿ ಮೌರ್ಯದಿಂದ ಪ್ರಧಾನಿ ನಿವಾಸದಲ್ಲಿ ಭೇಟಿ ಆಗಲಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 12 ತಂಡ ಪ್ರಧಾನಿ ಜೊತೆ ಭೇಟಿಗೆ ಸಮಯ ನಿಗದಿ ಮಾಡಲಾಗಿದೆ. ಮಧ್ಯಾಹ್ನ 12ಕ್ಕೆ ಐಟಿಸಿ ಮೌರ್ಯಕ್ಕೆ ವಾಪಸ್ ಆಗಲಿದ್ದು, ಬಳಿಕ ಮುಂಬೈಗೆ ಪ್ರಯಾಣ ಬೆಳೆಸಲಿದೆ. ಸಂಜೆ 4 ಗಂಟೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಸಂಜೆ 5 ಗಂಟೆಗೆ ವಾಂಖೆಡೆ ಸ್ಟೇಡಿಯಂಗೆ ಆಗಮಿಸಲಿದೆ. ಸಂಜೆ 5 ರಿಂದ 7 ರವರೆಗೆ ತೆರೆದ ಬಸ್ ಮೆರವಣಿಗೆ ನಡೆಯಲಿದೆ. ಸಂಜೆ 7 ರಿಂದ 7:30: ವಾಂಖೆಡೆ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ತಂಡ ಸಂಜೆ 7:30: ಹೋಟೆಲ್ ತಾಜ್‌ಗೆ ನಿರ್ಗಮಿಸಲಿದೆ.












Click it and Unblock the Notifications