ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಪರ ಫೀಲ್ಡಿಂಗ್‌ಗೆ ಬಾರದ ವಿರಾಟ್.. ಕೊಹ್ಲಿ ಈ ಲಿಸ್ಟ್‌ಗೆ ಸೇರಿರುವುದು ಇದೇ ಮೊದಲ ಬಾರಿ
Virat Kohli: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 15) ನಡೆಯುತ್ತಿರುವ ಐಪಿಎಲ್ 2026ರ 23ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ಮುಖಾಮುಖಿಯಾಗಿವೆ. ಆದರೆ, ವಿರಾಟ್ ಕೊಹ್ಲಿ ಅವರು ಆರಂಭಿಕ ಪಂದ್ಯದ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಬದಲಾಗಿ, ಅವರನ್ನು ಆರ್‌ಸಿಬಿ ತಂಡವು 'ಇಂಪ್ಯಾಕ್ಟ್ ಪ್ಲೇಯರ್' ಆಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.
ವಾಂಖೆಡೆಯಲ್ಲಿ ಏಪ್ರಿಲ್ 12ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಕೊಹ್ಲಿ ಅವರ ಪಾದಕ್ಕೆ ಗಾಯವಾಗಿತ್ತು. ಆ ಪಂದ್ಯದಲ್ಲಿ 50 ರನ್ ಗಳಿಸಿದ ನಂತರ, ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಬಂದಿರಲಿಲ್ಲ. ಪಂದ್ಯದ ಮುನ್ನಾದಿನ ಅವರು ಅಭ್ಯಾಸ ನಡೆಸಿದ್ದು, ಇಂದಿನ ಎಲ್‌ಎಸ್‌ಜಿ ವಿರುದ್ಧ ಪಂದ್ಯದಲ್ಲಿ ಆಡಲು ಅವರಿಗೆ ಅನುಮತಿ ನೀಡಲಾಗಿದೆ.

ತಂಡದ ನಿರ್ಧಾರ ಏನು?
ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇನ್ನೂ ಕೊಹ್ಲಿ ಅವರ ಮೇಲಿನ ದೈಹಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅವರ ಬ್ಯಾಟಿಂಗ್ ಸೇವೆಯನ್ನು ಮಾತ್ರ ಬಳಸಿಕೊಳ್ಳಲು ತಂಡದ ಮ್ಯಾನೇಜ್‌ಮೆಂಟ್ ಈ ನಿರ್ಧಾರ ಕೈಗೊಂಡಿದೆ. ಇಂಪ್ಯಾಕ್ಟ್ ಪ್ಲೇಯರ್ ಆಗಿರುವುದರಿಂದ, ಕೊಹ್ಲಿ ಅವರು ಫೀಲ್ಡಿಂಗ್ ಮಾಡುವ ಅವಶ್ಯಕತೆ ಇರುವುದಿಲ್ಲ, ಆದರೆ ಚೇಸಿಂಗ್ ವೇಳೆ ಬ್ಯಾಟಿಂಗ್‌ಗೆ ಬರಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಬದಲಾವಣೆ
ಮತ್ತೊಂದೆಡೆ, ಜೋಶ್ ಹ್ಯಾಜಲ್‌ವುಡ್ ಅವರನ್ನು ತಂಡಕ್ಕೆ ಮರಳಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಅವರು ಆಡಿರಲಿಲ್ಲ. ತಮ್ಮ ಪುನರಾಗಮನದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಎದುರು ಹೆಚ್ಚು ರನ್ ಬಿಟ್ಟುಕೊಟ್ಟಿದ್ದ ಹ್ಯಾಜಲ್‌ವುಡ್‌ಗೆ, ಈ ಪಂದ್ಯಕ್ಕಾಗಿ ವಿಶ್ರಾಂತಿ ನೀಡಲಾಗಿತ್ತು. ರಸಿಖ್ ಸಲಾಮ್ ಕೂಡ ಈಗ ಸಂಪೂರ್ಣ ಫಿಟ್ ಆಗಿದ್ದು, ಈ ಪಂದ್ಯದಲ್ಲಿ ಆಡುತ್ತಿದ್ದಾರೆ.
ಇಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದ್ದು, ಜೇಕಬ್ ಡಫಿ ಬದಲಿಗೆ ಜೋಶ್ ಹ್ಯಾಜಲ್‌ವುಡ್ ತಂಡಕ್ಕೆ ಮರಳಿದ್ದಾರೆ. ಒಟ್ಟಾರೆಯಾಗಿ, ಕೊಹ್ಲಿ ಅವರ ಗಾಯವು ಅತಿ ಗಂಭೀರವಾಗಿಲ್ಲದಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಕೇವಲ ಬ್ಯಾಟಿಂಗ್‌ಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದು ಆರ್‌ಸಿಬಿ ಅಭಿಮಾನಿಗಳಲ್ಲಿ ಸಮಾಧಾನ ಮತ್ತು ಕುತೂಹಲ ಎರಡನ್ನೂ ಮೂಡಿಸಿದೆ.
ಆರ್‌ಸಿಬಿ ಪ್ಲೇಯಿಂಗ್ 11: ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ರಸಿಖ್ ಸಲಾಮ್, ಜೋಶ್ ಹ್ಯಾಜಲ್‌ವುಡ್.
ಇಂಪ್ಯಾಂಕ್ಸ್ ಪ್ಲೇಯರ್ಸ್: ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜೋರ್ಡಾನ್ ಕಾಕ್ಸ್, ಕನಿಷ್ಕ್ ಚೌಹಾಣ್.












Click it and Unblock the Notifications