ಸಪ್ತಸಾಗರದಾಚೆ ದಾಟಿದ ವಿರಾಟ್ ಜನಪ್ರಿಯತೆ: ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಕೊಹ್ಲಿ ಪ್ರತಿಮೆ
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಸದ್ಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಆಡುತ್ತಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ, ರನ್ ಕಲೆ ಹಾಕಲು ಹಿಂದೆ ಬಿದ್ದಿರ ಬಹುದು. ಆದರೆ ಪ್ರಖ್ಯಾತಿ ವಿಷಯದಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಈಗಲೂ ವಿರಾಟ್ ಕೊಹ್ಲಿ ಜನಪ್ರಿಯತೆ ಡಬಲ್ ಆಗಿದೆ.
ಪ್ರಸಕ್ತ ಸಾಲಿನ ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ. ಲೀಗ್ ಹಾಗೂ ಸೂಪರ್ 8 ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರೋಹಿತ್ ಪಡೆ, ಉಪಾಂತ್ಯಕ್ಕೆ ಪ್ರವೇಶ ಪಡೆದಿದೆ. ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಮೌನಕ್ಕೆ ಶರಣಾಗಿದೆ. ಆದರೆ ಅಮೆರಿಕದಲ್ಲಿ ವಿರಾಟ್ ಕೊಹ್ಲಿ ಜನಪ್ರಿಯತೆ ಇನ್ನು ಹೆಚ್ಚಿದೆ.

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ವಿರಾಟ್ ಅಭಿಮಾನಿಗಳಿದ್ದಾರೆ. 2024 ರ ಟಿ 20 ವಿಶ್ವಕಪ್ ನಡುವೆ ವಿರಾಟ್ ಅಮೆರಿಕದ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ವಿರಾಟ್ ತಮ್ಮ ಬ್ಯಾಟಿಂಗ್ ಆಧಾರದ ಮೇಲೆ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ತಮ್ಮ ಸ್ಥಾನವನ್ನು ಗಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಟೈಮ್ಸ್ ಸ್ಕ್ವೇರ್ ನಲ್ಲಿ ಕಾಣಿಸಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ.
ವಿರಾಟ್ ಕೊಹ್ಲಿ ಹಾಸಿಗೆ ತಯಾರಿಕಾ ಕಂಪನಿ ಡ್ಯೂರೊಫ್ಲೆಕ್ಸ್ ಪ್ರಚಾರ ರಾಯಭಾರಿ. ವಿರಾಟ್ ಅವರನ್ನು ಡ್ಯುರೊಫ್ಲೆಕ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಪ್ರತಿಮೆಯನ್ನು ನೋಡಿದ ನಂತರ ಡ್ಯುರೊಫ್ಲೆಕ್ಸ್ ವೀಡಿಯೊವನ್ನು ಹಂಚಿಕೊಂಡಿದೆ.
ಪೋಸ್ಟ್‌ನಲ್ಲಿ, 'ಈಗಷ್ಟೇ ಅನಾವರಣಗೊಂಡಿದೆ, ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿಯ ದೈತ್ಯ ಪ್ರತಿಮೆ. ನಾವು ಜಾಗತಿಕವಾಗಿ ಮತ್ತು ಇತಿಹಾಸವನ್ನು ನಿರ್ಮಿಸುತ್ತಿದ್ದೇವೆ. ನಾವು ವಿರಾಟ್ ಕೊಹ್ಲಿಗೆ ಉತ್ತಮ ನಿದ್ರೆ ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತಿದ್ದೇವೆ ಎಂದು ಬರೆದುಕೊಂಡಿದೆ.\
Just Unveiled :A larger-than-life statue of Virat Kohli at the iconic Times Square.
— Duroflex (@Duroflex_world) June 23, 2024
This King's Duty, we are going global and making history!
We’re delivering great sleep and great health to Virat Kohli.#GreatSleepGreatHealth #ViratKohli #worldcup #cricket #CGI pic.twitter.com/5WpkZcwa7i
ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡ್ತಾ ಇದೆ. ಈ ಬೆನ್ನಲ್ಲೆ ಚೇಸಿಂಗ್ ಸ್ಟಾರ್ ಅಭಿಮಾನಿಗಳು ಈ ಫೋಸ್ಟ್‌ಗೆ ತರಹೆವಾರಿ ಕಮೆಂಟ್ ಮಾಡುತ್ತಿದ್ದಾರೆ. ಈ ಫೊಸ್ಟ್‌ಗೆ ಕಮೆಂಟ್ ಮಾಡಿದ ಬಳಕೆದಾರರು ಭಾರತ ಹಾಗೂ ಪಾಕಿಸ್ತಾನ ತಂಡವನ್ನು ಹೋಲಿಕೆ ಮಾಡಿದ್ದಾರೆ.












Click it and Unblock the Notifications