Virat Kohli: ಸ್ಟ್ರೈಕ್ ರೇಟ್‌ ಬಗ್ಗೆ ಧ್ವನಿ ಎತ್ತಿದವರ ಬಾಯಿ ಮುಚ್ಚಿಸಿದ ಆರ್‌ಸಿಬಿ ಸ್ಟಾರ್ ಪ್ಲೇಯರ್‌

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟಿಂಗ್ ಆಧಾರ ಸ್ಥಂಬ ವಿರಾಟ್‌ ಕೊಹ್ಲಿ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಶತಕ ವಂಚಿತರಾದರೂ ಸಹ ತಮ್ಮ ಟೀಕಾಕಾರಿಗೆ ಭರ್ಜರಿ ಉತ್ತರ ನೀಡುವಲ್ಲಿ ವಿರಾಟ್ ಸಫಲರಾಗಿದ್ದಾರೆ.

ಪಂಜಾಬ್‌ ಕಿಂಗ್ಸ್‌ ಪಂದ್ಯಕ್ಕೂ ಮುನ್ನ ಹಲವು ಮಾಜಿ ಆಟಗಾರರು ವಿರಾಟ್ ಕೊಹ್ಲಿ ಸ್ಟ್ರೈಕ್‌ ರೇಟ್‌ ಬಗ್ಗೆ ಧ್ವನಿ ಎತ್ತಿದ್ದರು. ಅವರ ಟೀಕೆಗೆ ಧರ್ಮಶಾಲಾದ ಅಂಗಳವನ್ನೇ ವೇದಿಕೆಯಾಗಿಸಿಕೊಂಡ ವಿರಾಟ್‌, ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿರಾಟ್ ತಮ್ಮ ಘನತೆಗೆ ತಕ್ಕ ಆಟವನ್ನೇ ಆಡಿ, ಆರ್‌ಸಿಬಿ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಮಹತ್ವದ ಕಾಣಿಕೆ ನೀಡಿದರು.

Virat Kohli Shuts the Mouth of his Critics of His Strike Rate

ಭರ್ಜರಿ ಬ್ಯಾಟಿಂಗ್

ಧರ್ಮಶಾಲಾ ಅಂಗಳದಲ್ಲಿ ಪಂಜಾಬ್‌ ಕಿಂಗ್ಸ್‌ ನೀಡಿದ ಜೀವದಾನದ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ವಿರಾಟ್, ಪಂಜಾಬ್‌ ಬೌಲರ್‌ಗಳು ಮುಟ್ಟಿ ನೋಡಿಕೊಳ್ಳುವಂತಹ ಬ್ಯಾಟಿಂಗ್ ನಡೆಸಿದರು. ಪಂದ್ಯದುದ್ದಕ್ಕೂ ತಮ್ಮ ಸ್ಟ್ರೈಕ್‌ ರೇಟ್‌ ಬಗ್ಗೆಯೂ ಹೆಚ್ಚಿನ ಗಮನ ವಹಿಸಿದ ವಿರಾಟ್ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡಿದರು. ಪಂಜಾಬ್ ತಂಡದ ಸ್ಟಾರ್‌ ಬೌಲರ್‌ಗಳ ರಣ ತಂತ್ರವನ್ನು ಬೇಧಿಸಿದ ವಿರಾಟ್‌, ರನ್ ಮಹಲ್‌ ಕಟ್ಟಿದರು.

195 ಸ್ಟ್ರೈಕ್‌ ರೇಟ್‌

ವಿರಾಟ್ ಧರ್ಮಶಾಲಾದಲ್ಲಿ 47 ಎಸೆತಗಳಲ್ಲಿ 195.74ರ ಸ್ಟ್ರೈಕ್‌ ರೇಟ್‌ನಲ್ಲಿ 92 ರನ್ ಬಾರಿಸಿದರು. ಇವರ ಕ್ಲಾಸಿಕ್ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 6 ಸಿಕ್ಸರ್‌ಗಳು ಸೇರಿವೆ. ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳ ವಿರುದ್ಧ ಮನಮೋಹಕ ಬ್ಯಾಟ್ ಮಾಡಿದ ವಿರಾಟ್, ಎಂಟು ರನ್‌ಗಳಿಂದ ಶತಕವಂಚಿತರಾದರು. ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ವಿರಾಟ್ 12 ಪಂದ್ಯಗಳಲ್ಲಿ 70.44ರ ಸರಾಸರಿಯಲ್ಲಿ 634 ರನ್ ಸಿಡಿಸಿದ್ದಾರೆ. ಈ ಮೂಲಕ ಆರೆಂಕ್ ಕ್ಯಾಪ್‌ಗೆ ಅಧಿಪತಿ ಆಗಿದ್ದಾರೆ.

Virat Kohli Shuts the Mouth of his Critics of His Strike Rate

ವಿರಾಟ್ ಕೊಹ್ಲಿ ಅವರ ಸ್ಟ್ರೇಕ್‌ ರೇಟ್‌ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರರು ಧ್ವನಿ ಎತ್ತಿದ್ದರು. ಈ ಟೀಕೆಗೆ ವಿರಾಟ್‌ ಅಂಗಳದಿಂದಲೇ ಉತ್ತರ ನೀಡಿದ್ದಾರೆ. ಅಲ್ಲದೆ ತನಗೆ ಡಿಫೆನ್ಸ್ ಆಡಲೂ ಗೊತ್ತು. ಹಾಗೂ ಗೇರ್‌ ಶಿಫ್ಟ್ ಮಾಡುವುದು ಗೊತ್ತು ಎಂಬುದನ್ನು ಸಾರಿ ಹೇಳಿದ್ದಾರೆ.

ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ದೃಷ್ಟಿಯಿಂದ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಟೀಮ್ ಇಂಡಿಯಾಗೆ ಖುಷಿಯ ವಿಚಾರ. ಇವರ ಫಾರ್ಮ್‌ ನಿಜಕ್ಕೂ ಎದುರಾಳಿಗಳ ನಿದ್ದೆಗೆಡಿಸಿದೆ. ಐಪಿಎಲ್‌ನಲ್ಲಂತೂ ವಿರಾಟ್ ರನ್ ಮಹಲ್ ಕಟ್ಟುತ್ತಿದ್ದಾರೆ. ಇದೇ ಕಾರ್ಯವನ್ನು ಟಿ20 ವಿಶ್ವಕಪ್‌ನಲ್ಲಿ ಮಾಡಲು ಸಿದ್ಧರಿರುವಾಗಿ ಸಾರಿ ಹೇಳಿದ್ದಾರೆ.

ಟಿ20 ವಿಶ್ವಕಪ್‌ಗೆ ಆಯ್ಕೆ

ಐಪಿಎಲ್‌ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರನ್ನು ಟಿ20 ವಿಶ್ವಕಪ್‌ನಲ್ಲಿ ಆಯ್ಕೆ ಮಾಡಬೇಕಾ ಎಂಬ ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಪರ ಹಾಗೂ ವಿರೋಧ ಚರ್ಚೆಗಳು ನಡೆದಿದ್ದವು. ತಾನು ಇನ್ನು ಸಹ ಟಿ20 ಫಾರ್ಮೆಟ್ ಆಡಲು ಫಿಟ್ ಆಗಿರುವುದಾಗಿ ಸಾರಿ ಹೇಳಿದ್ದಾರೆ. ಈ ಮೂಲಕ ವಿರಾಟ್ ತಮ್ಮ ನ್ನು ಟಿ20 ವಿಶ್ವಕಪ್‌ಗೆ ತಮ್ಮನ್ನು ಆಯ್ಕೆ ಮಾಡುವಂತೆ ಆಯ್ಕೆದಾರರಿಗೆ ಪರೋಕ್ಷ ಸಂದೇಶವನ್ನು ರವಾನಿಸಿದ್ದರು. ವಿರಾಟ್ ಆಟಕ್ಕೆ ಆಯ್ಕೆದಾರರ ಈ ಬಾರಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+