Virat Kohli: ಶ್‌... ವಿರಾಟ್ ವೀರಾವೇಶ, ಕಿಂಗ್ ಯಾವತ್ತಿದ್ದರೂ ಕಿಂಗೇ!

ವಿರಾಟ್ ಕೊಹ್ಲಿ ಮತ್ತೆ ತಮ್ಮ ತಾಕತ್ ತೋರಿಸಿದ್ದಾರೆ, ತಮ್ಮನ್ನು ಕ್ರಿಕೆಟ್ ಲೋಕದಲ್ಲಿ ಕಿಂಗ್ ಅಂತಾ ಕರೆಯೋದು ಯಾಕೆ? ಅನ್ನೋ ಪ್ರಶ್ನೆಗೂ ಸರಿಯಾದ ಉತ್ತರ ನೀಡಿದ್ದಾರೆ ವಿರಾಟ್ ಕೊಹ್ಲಿ. ವಿರೋಧಿಗಳ ಬಾಯಿ ಮುಚ್ಚಿಸಲು ತಮ್ಮ ಬ್ಯಾಟ್‌ನ ಖಡ್ಗದಂತೆ ಮತ್ತೆ ಝಳಪಿಸಿ ನಿಂತಿದ್ದಾರೆ. ಎಲ್ಲರೂ ಕಾಯುತ್ತಿದ್ದ ಆ ಸಮಯವನ್ನು ಮತ್ತೆ ಮರಳಿ ತಂದಿರುವ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಶತಕ ಬಾರಿಸಿದ್ದಾರೆ!

ವಿರಾಟ್ ಕೊಹ್ಲಿ ಇವತ್ತು ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕೆ ಬಂದಾಗ, ಯಾರೂ ಊಹೆ ಮಾಡಿರಲಿಲ್ಲ. ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿದಾಗಲು, ಯಾರಿಗೂ ಶತಕದ ಕನಸು ಮೂಡಿರಲಿಲ್ಲ. ಆದರೆ ಯಾವಾಗ ವಿರಾಟ್ ಕೊಹ್ಲಿ 70 ರನ್ ಗಡಿಯನ್ನು ದಾಟಿದರೋ ಆ ನಂತರವೇ ಪಕ್ಕಾ ಆಗಿದ್ದು, ವಿರಾಟ್ ಕೊಹ್ಲಿ ಸೆಂಚ್ಯುರಿ ಬಾರಿಸೋದು ಗ್ಯಾರಂಟಿ ಅಂತಾ. ಎಲ್ಲಾ ಅಂದುಕೊಂಡ ರೀತಿಯೇ ನಡೆದಿದ್ದು ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿ ಬಂದಿದ್ದು, ಭರ್ಜರಿ ಶತಕ ಗಳಿಸಿದ್ದಾರೆ.

Virat Kohli Shines with a Brilliant Century Against Pakistan in ICC Champions Trophy 2025

ವಿರಾಟ್ ಕೊಹ್ಲಿ ಆಟಕ್ಕೆ ದಾಖಲೆ ಉಡೀಸ್!

ಕೊಹ್ಲಿ ಆಟವನ್ನು ನೋಡಿ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದರು. ಅದರಲ್ಲೂ ವಿರಾಟ್ ಅಬ್ಬರ ನೋಡಿ ಪಾಕಿಸ್ತಾನದ ಬೌಲಿಂಗ್ ಪಡೆ ಕೂಡ ನಡುಗಿ ಹೋಗಿತ್ತು. ನೋಡ ನೋಡುತ್ತಲೇ ಕೊಹ್ಲಿ ಅವರ ಶತಕ ತಪ್ಪಿಸಲು ಪಾಕಿಸ್ತಾನದ ಬೌಲರ್ಸ್ ಸಾಷ್ಟು ಪ್ರಯತ್ನ ಮಾಡಿದ್ದರು. ಈ ಎಲ್ಲಾ ಪ್ರಯತ್ನಗಳು ಫಲ ನೀಡದೆ ಪಾಕಿಗಳು ಸೈಲೆಂಟ್ ಆಗಿಬಿಟ್ಟರು. ಕೊನೆಗೂ ವಿರಾಟ್ ಭರ್ಜರಿಯಾಗಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

111 ಬಾಲ್ + 7 ಬೌಂಡರಿ = 100 ರನ್

ಪಾಕಿಸ್ತಾನ ಬೌಲರ್‌ಗಳ ಡ್ರಾಮಾ ಹೆಚ್ಚಾದರೂ ಅದನ್ನು ಲೆಕ್ಕಿಸದೆ ದಿಟ್ಟ ಹೋರಾಟ ತೋರಿದ ವಿರಾಟ್ ಕೊಹ್ಲಿ, 111 ಬಾಲ್ ಆಡಿ 7 ಬೌಂಡರಿಯನ್ನು ಬಾರಿಸಿ ಭರ್ಜರಿಯಾಗಿ 100 ರನ್ ಗಳಿಸಿ ಮಿಂಚಿದರು. ವಿರಾಟ್ ಕೊಹ್ಲಿ ಪ್ರತಿಯೊಬ್ಬ ಪಾಕ್ ಬೌಲರ್‌ನ ಕಾಡಿದರು. ಒಂದು ಕಡೆ ಪಾಕ್ ತಂಡ ವಿಕೆಟ್ ಉರುಳಿಸಲು ಪ್ರಯತ್ನ ಮಾಡುವಾಗಲೇ, ವಿರಾಟ್ ಕೊಹ್ಲಿ & ಶ್ರೇಯಸ್ ಐಯ್ಯರ್ ನಿಧಾನವಾಗಿ ರನ್ ಕದಿಯಲು ಶುರು ಮಾಡಿದರು.

ಹೀಗೆ ನೋಡ ನೋಡುತ್ತಲೇ ವಿರಾಟ್ ಕೊಹ್ಲಿ ಅರ್ಧ ಶತಕ ಗಳಿಸಿ ಶತಕದ ಕಡೆ ಮುನ್ನುಗ್ಗಿದ್ದರು ಆಗಲೂ ಪಾಕ್ ಟೀಂ ಎಲ್ಲಾ ರೀತಿ ಪ್ರಯತ್ನ ಮಾಡಿದರೂ ವರ್ಕೌಟ್ ಆಗಲೇ ಇಲ್ಲ. ಕೊನೆಗೂ ಕೊಹ್ಲಿ ಶತಕ ಸಿಡಿಸಿ ಮಿಂಚಿದರು. ಭಾರತ ಗೆಲ್ಲಲು ಕೊನೆಯ 2 ರನ್ ಬಾಕಿ ಇದ್ದಾಗ ಕಿಂಗ್ ಕೊಹ್ಲಿ 96 ರನ್ ಗಳಿಸಿದ್ದರು. ಹೀಗಿದ್ದಾಗ ವಿರಾಟ್ ಕೊಹ್ಲಿ ಸೆಂಚ್ಯುರಿ ಅನುಮಾನ ಎಂಬ ಮಾತು ಕೇಳಿ ಬಂದಿತ್ತು. ಆದರೆ ಕೊನೆಗೆ ಬೌಂಡರಿ ಬಾರಿಸಿ 4 ರನ್ ಕದ್ದು ಸೆಂಚ್ಯುರಿ ಗುರಿ ಮುಟ್ಟಿದರು ವಿರಾಟ್ ಕೊಹ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+