RCB New Captain: ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಕ್ಯಾಪ್ಟನ್!

ಐಪಿಎಲ್ 2025ರ ಸೀಸನ್‌ಗೆ ಎಲ್ಲಾ ಫ್ರಾಂಚೈಸಿಗಳು ತಯಾರಿ ಆರಂಭಿಸಿವೆ. ಅಕ್ಟೋಬರ್ 31ರಂದು ಎಲ್ಲಾ ತಂಡಗಳು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ. ಯಾವ ತಂಡಗಳು ಯಾರನ್ನು ಉಳಿಸಿಕೊಳ್ಳುತ್ತವೆ ಎನ್ನುವ ಕುತೂಹಲ ಹೆಚ್ಚಾಗಿದೆ. ಆರ್ ಸಿಬಿ ತಂಡದಲ್ಲಿ ಯಾರೆಲ್ಲಾ ಉಳಿಯುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿರುವಾಗಲೇ ದೊಡ್ಡ ಸುದ್ದಿಯೊಂದು ಸಿಕ್ಕಿದೆ. ವಿರಾಟ್ ಕೊಹ್ಲಿ ಮತ್ತೆ ಆರ್‌ಸಿಬಿ ತಂಡದ ನಾಯಕರಾಗುತ್ತಾರೆ ಎಂದು ವರದಿಯಾಗಿದೆ.

2021ರ ಐಪಿಎಲ್ ಆವೃತ್ತಿ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ಐಪಿಎಲ್ ಮಾತ್ರವಲ್ಲದ ಭಾರತ ಏಕದಿನ ಮತ್ತು ಟಿ20 ತಂಡದ ನಾಯಕತ್ವ ಕೂಡ ತ್ಯಜಿಸಿದ್ದರು. 2022ರ ಆರಂಭದಲ್ಲಿ ಟೆಸ್ಟ್ ತಂಡದ ನಾಯಕತ್ವ ಬಿಟ್ಟುಕೊಟ್ಟರು.

Virat Kohli Returns as RCB Captain for IPL 2025 Season

ಮತ್ತೆ ನಾಯಕತ್ವದ ಜವಾಬ್ದಾರಿ

2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆದ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು. ಅದಾದ ಬಳಿಕ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಈಗ ಅಂತಾರಾಷ್ಟ್ರೀಯ ಪಂದ್ಯಗಳ ಹೊರೆ ಕಡಿಮೆಯಾಗಿರುವ ಕಾರಣ, ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ತಂಡದ ಮ್ಯಾನೇಜ್‌ಮೆಂಟ್ ವಿರಾಟ್ ಕೊಹ್ಲಿ ಜೊತೆ ಚರ್ಚೆ ಮಾಡಿದ್ದು, ನಾಯಕ ಫಾಫ್ ಡುಪ್ಲೆಸಿಸ್‌ 40 ವರ್ಷದವರಾಗಿದ್ದು, ಅವರ ಬದಲಾಗಿ ವಿರಾಟ್ ಕೊಹ್ಲಿಯವರಿಗೆ ನಾಯಕತ್ವ ವಹಿಸಿಕೊಳ್ಳಲು ಮನವಿ ಮಾಡಲಾಗಿದೆ ಎಂದು ವರದಿಯಾಗಿದೆ.

ಬೇರೆ ತಂಡಕ್ಕಾಗಿ ಆಡಲಾರೆ

2008ರಲ್ಲಿ ಆರ್ ಸಿಬಿ ತಂಡವನ್ನು ಸೇರಿದ ವಿರಾಟ್ ಕೊಹ್ಲಿ ಇಂದಿನವರೆಗೂ ಹರಾಜು ಪ್ರಕ್ರಿಯೆಗೆ ಭಾಗವಹಿಸಿಲ್ಲ. ನನ್ನ ಕೊನೆಯ ಐಪಿಎಲ್‌ ಪಂದ್ಯ ಆಡುವವರೆಗೂ ನಾನು ಆರ್ ಸಿಬಿ ತಂಡದಲ್ಲಿ ಆಡುತ್ತೇನೆ. 16 ವರ್ಷಗಳ ಕಾಲ ನನಗೆ ತಂಡ ಎಲ್ಲವನ್ನೂ ನೀಡಿದೆ, ಹತಾಶೆ, ಖುಷಿ, ಸಂತೋಷ ಎಲ್ಲ ಕ್ಷಣಗಳನ್ನು ನೋಡಿದ್ದೇನೆ. ಇಷ್ಟು ವರ್ಷ ಸೋತರೂ ನನ್ನ ಬೆಂಬಲಕ್ಕೆ ನಿಂತಿದ್ದಕ್ಕೆ, ಪ್ರೀತಿ ತೋರಿಸಿದ್ದಕ್ಕೆ ಧನ್ಯವಾದ ಎಂದು ಕೊಹ್ಲಿ ಹೇಳಿದ್ದಾರೆ.

ಫಾಫ್ ಡುಪ್ಲೆಸಿಸ್‌ ಕೈಬಿಡಲು ನಿರ್ಧಾರ

ಫಾಫ್ ಡುಪ್ಲೆಸಿಸ್ 2022, 2023 ಮತ್ತು 2024ರ ಆವೃತ್ತಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೈಂಟ್ ಲೂಸಿಯಾ ಕಿಂಗ್ಸ್ ತಂಡ ಚಾಂಪಿಯನ್ ಆಗಿದೆ. ಫಾಫ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು, ತಂಡದ ಜೊತೆ ಉತ್ತಮ ನಂಟು ಹೊಂದಿದ್ದಾರೆ. ಅವರನ್ನು ರಿಟೈನ್ ಮಾಡದೇ ಇದ್ದರೂ ಹರಾಜಿನಲ್ಲಿ ಮತ್ತೆ ಅವರನ್ನು ಖರೀದಿ ಮಾಡುತ್ತದೆ ಅಥವಾ ಆರ್ ಟಿಎಂ ಬಳಸಿ ಅವರನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.

ಯಾರ ಮೇಲೆ ಕಣ್ಣಿಟ್ಟಿದೆ ಆರ್‌ಸಿಬಿ?

ಮೆಗಾ ಹರಾಜಿನಲ್ಲಿ ಹಲವು ಆಟಗಾರರ ಮೇಲೆ ಆರ್ ಸಿಬಿ ಕಣ್ಣಿಟ್ಟಿದೆ. ರಿಷಬ್ ಪಂತ್, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೇರಿದಂತೆ ಅನೇಕ ಪ್ರಮುಖ ಆಟಗಾರರು ತಂಡವನ್ನು ತೊರೆದು ಮೆಗಾ ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಆರ್ ಸಿಬಿ ಭಾರತೀಯ ಆಟಗಾರರ ಮೇಲೆ ಕಣ್ಣಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+