Virat Kohli: ವಿರಾಟ್ ಕೊಹ್ಲಿ ಬಾಳಲ್ಲಿ ಬಿರುಗಾಳಿ, ಅನುಷ್ಕಾ ಶರ್ಮಾ ಜೊತೆಗಿನ...
ಕನ್ನಡಿಗರ ತಂಡ ಆರ್‌ಸಿಬಿ ಪರವಾಗಿ ಕಳೆದ ಒಂದೂವರೆ ದಶಕದಿಂದ ದುಡಿಯುತ್ತಿರುವ & ಕೋಟಿ ಕೋಟಿ ಕನ್ನಡಿಗರ ನೆಚ್ಚಿನ ಆಟಗಾರನಾಗಿರುವ ವಿರಾಟ್ ಕೊಹ್ಲಿ ಅಂದ್ರೆ ಬರೀ ಕ್ರಿಕೆಟರ್ ಅಲ್ಲ. ಯಾಕಂದ್ರೆ ವಿರಾಟ್ ಕೊಹ್ಲಿಗೆ ಅಂತಹ ಶಕ್ತಿ ಇದ್ದು, ಅಭಿಮಾನಿಗಳನ್ನು ಸೆಳೆಯುವ ಕಲೆ ಕೂಡ ಇದೆ. ಇಷ್ಟೆಲ್ಲದರ ನಡುವೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರೀತಿ ಎಲ್ಲರನ್ನೂ ಕಣ್ಣು ಕುಕ್ಕಿಸುತ್ತಿತ್ತು. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಬಾಳಲ್ಲಿ ಬಿರುಗಾಳಿ... ಅನುಷ್ಕಾ ಶರ್ಮಾ ಜೊತೆಗಿನ...
ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ದಂಪತಿಯ ಮುಖ ನೋಡಲು ಥೇಟ್ ದೇವರು & ದೇವತೆ ರೀತಿಯಲ್ಲೇ ಇರುತ್ತಾರೆ ಅನ್ನೋದು ಅಭಿಮಾನಿಗಳ ಮಾತು. ಅದರಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳು ಅನುಷ್ಕಾ ಶರ್ಮಾ ಅವರನ್ನು ಅತ್ತಿಗೆ.. ಅತ್ತಿಗೆ.. ಅಂತಾ ಗೌರವ & ಪ್ರೀತಿಯಿಂದ ಕರೆಯುತ್ತಾರೆ. ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸಿ ಮದುವೆ ಆಗಿದ್ದವರು. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಬಾಳಲ್ಲಿ ಬಿರುಗಾಳಿ, ಅನುಷ್ಕಾ ಶರ್ಮಾ ಜೊತೆಗಿನ...

ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಜೊತೆಗಿನ...
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ & ಆರ್‌ಸಿಬಿ ತಂಡದ ಜೀವ ವಿರಾಟ್ ಕೊಹ್ಲಿಯವರು ಲೆಕ್ಕಕ್ಕೆ ಸಿಗದಷ್ಟು ದಾಖಲೆಗಳನ್ನ ತಮ್ಮ ಹೆಸರಲ್ಲಿ ಬರೆದುಕೊಂಡಿದ್ದಾರೆ. ಅದರಲ್ಲೂ ಈಗ ಲೆಕ್ಕಹಾಕಿ ನೋಡಿದರೂ ಹತ್ತಾರು ಸಾವಿರ ದಾಖಲೆಗಳನ್ನ ಪುಡಿಪುಡಿ ಮಾಡುವಷ್ಟು ತಾಕತ್ ವಿರಾಟ್ ಕೊಹ್ಲಿ ಅವರಿಗೆ ಇದೆ. ಇಂತಹ ಸಮಯದಲ್ಲೇ ವಿರಾಟ್ ಕೊಹ್ಲಿ ಸಂಸಾರದ ಬಗ್ಗೆ ದೊಡ್ಡ ವದಂತಿ ಹಬ್ಬಿದ್ದು, ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ದೂರ ಆಗುವ....
ಗೊಂದಲ ಶುರುವಾಗಿದ್ದು ವಿರಾಟ್ ಕೊಹ್ಲಿ ಅವರ ಟ್ವಿಟ್ವರ್ ಪೋಸ್ಟ್ ಒಂದರಿಂದ. ಅಷ್ಟಕ್ಕೂ ವಿರಾಟ್ ಕೊಹ್ಲಿ ಅವರು ತಮ್ಮ ಜೀವನದ ಬಹುಮುಖ್ಯ ವಿಚಾರಗಳನ್ನು ತಿಳಿಸುವಾಗ ಎಲ್ಲ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಾರೆ. ಅದರಲ್ಲೂ ಈ ಹಿಂದೆ ನಾಯಕ ಸ್ಥಾನ ಬಿಡುವಾಗ, ಆರ್‌ಸಿಬಿ ಕ್ಯಾಪ್ಟನ್ ಸ್ಥಾನದಿಂದ ಹಿಂದೆ ಸರಿದಾಗ ಒಂದು ಪೋಸ್ಟ್ ಹಾಕಿದ್ದರು.
ಇದೀಗ ದಿಢೀರ್ ಮತ್ತೆ ಅದೇ ರೀತಿಯ ಫಾರ್ಮೆಟ್ ಬಳಸಿ ಪೋಸ್ಟ್ ಒಂದನ್ನ ಮಾಡಿದ್ದಾರೆ. ಕೂಡಲೇ ಅಭಿಮಾನಿಗಳ ಎದೆಯಲ್ಲಿ ಬೆಂಕಿ ಬಿದ್ದಂತೆ ಆಗಿದ್ದು, ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಡಿವೋರ್ಸ್ ನೀಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿ ಬಿಟ್ಟಿದೆ! ಆಗ ನೋಡಿದ್ರೆ ಕೊಹ್ಲಿ ಅವರು ಬೇರೆ ಏನನ್ನೋ ಅಭೀಮಾನಿಗಳಿಗೆ ತಿಳಿಸಲು ಹೋಗಿರುವುದು ಗೊತ್ತಾಗಿದೆ.
ವಿರಾಟ್ ಕೊಹ್ಲಿ ಅಸಲಿ ಮ್ಯಾಟರ್ ಇಲ್ಲಿದೆ!
ಅಸಲಿಗೆ ಮ್ಯಾಟರ್ ಏನು ಅಂದ್ರೆ ವಿರಾಟ್ ಕೊಹ್ಲಿ ತಮ್ಮ 'X' ಅಂದ್ರೆ ಟ್ವಿಟ್ಟರ್ ಖಾತೆ ಮೂಲಕ ಬಟ್ಟೆ ಬ್ರಾಂಡ್ 'WROGN' ಜೊತೆಗಿನ ಬಾಂಧವ್ಯ ಹಂಚಿಕೊಂಡಿದ್ದರು. ಆದರೆ, ಹೀಗೆ ಅವರು 'WROGN' ಬಟ್ಟೆ ಬ್ರಾಂಡ್ ಬಗ್ಗೆ 10ಕ್ಕೂ ಹೆಚ್ಚು ವರ್ಷಗಳ ಸಂಬಂಧದ ಬಗ್ಗೆ ಮಾತನಾಡುತ್ತಾ ಬಿಳಿ ಬ್ಯಾಕ್‌ಗ್ರೌಂಡ್ ಮೇಲೆ ಕಪ್ಪು ಬಣ್ಣದ ಟೆಕ್ಸ್ಟ್ ಅಂದ್ರೆ ಬರಹ ಹಾಕಿದ್ದರು!
ಈ ಪೋಸ್ಟ್ ನೋಡಿ ಬಿರುಗಾಳಿಯೇ ಎದ್ದು ಬಿಟ್ಟಿದೆ, ಎಲ್ಲಿ ನಮ್ಮ ವಿರಾಟ್ ಕೊಹ್ಲಿ ಅವರು ಡಿವೋರ್ಸ್ ಕೊಡ್ತಿದ್ದಾರೆ? ಎಂಬ ಪ್ರಶ್ನೆ ವಿರಾಟ್ ಕೊಹ್ಲಿ ಅವರ ಕೋಟಿ ಕೋಟಿ ಅಭಿಮಾನಿ ಬಳಗದ ಎದೆಯಲ್ಲಿ ಮೂಡಿತ್ತು. ಹಾಗೇ, ಇನ್ನೂ ಕೆಲವು ಅಭಿಮಾನಿಗಳು ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರಾ? ಅನ್ನೋ ಪ್ರಶ್ನೆಯ ಮನಸ್ಸಿನಲ್ಲಿ ಕೇಳಿಕೊಂಡರು. ಆ ನಂತರ ಪೋಸ್ಟ್ ಓದಿ ಅಭಿಮಾನಿಗಳಿಗೆ ಸತ್ಯ ಗೊತ್ತಾಗಿದ್ದು, ಇದು ಬಟ್ಟೆ ಬ್ರಾಂಡ್ ಜಾಹೀರಾತು ಅಂತಾ ಸತ್ಯ ಗೊತ್ತಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ವಿರಾಟ್ ಕೊಹ್ಲಿ ಹವಾ ಬಲು ಜೋರು!
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಾತ್ರವಲ್ಲ, ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿ ಕೂಡ ಈ ನಮ್ಮ ವಿರಾಟ್ ಕೊಹ್ಲಿ ಅವರೇ ಗ್ರೇಟ್ ಅಂತಾರೆ ಶತಕೋಟಿ ಅಭಿಮಾನಿಗಳು. ಇಡೀ ಜಗತ್ತು ಮೆಚ್ಚಿ ಕೊಂಡಾಡುವ ಕೆಲವೇ ಕೆಲವು ಕ್ರೀಡಾಪಟುಗಳ ಸಾಲಿಗೆ ವಿರಾಟ್ ಕೊಹ್ಲಿ ಅವರು ಕೂಡ ಸೇರುತ್ತಾರೆ. ಹೀಗಿದ್ದಾಗ ಪ್ರೀತಿಸಿ ಮದುವೆ ಆಗಿರುವ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ನೂರಾರು ವರ್ಷ ಚನ್ನಾಗಿ ಬಾಳಲಿ ಅನ್ನೋದು ಅಭಿಮಾನಿಗಳ ಆಶಯ. ಹೀಗಾಗಿ ವಿರಾಟ್ ಕೊಹ್ಲಿ ಅವರ ಸಂಸಾರ ಚನ್ನಾಗಿ ಇರಲಿ ಅಂತಾ ಅಭಿಮಾನಿಗಳು ಕೂಡ ಪ್ರಾರ್ಥಿಸುತ್ತಾರೆ. ಹೀಗಿದ್ದಾಗ ಸುಖಾಸುಮ್ಮನೆ ಗೊಂದಲಗಳು ಆಗಾಗ ಸೋಷಿಯಲ್ ಮೀಡಿಯಾ ಮೂಲಕವೇ ಸೃಷ್ಟಿಯಾಗಿ, ಸೋಷಿಯಲ್ ಮೀಡಿಯಾದಲ್ಲೇ ಮುಗಿದು ಹೋಗುತ್ತಿವೆ!












Click it and Unblock the Notifications