RCB vs MI: ಬುಮ್ರಾಗೆ ಎಚ್ಚರಿಕೆ ಕೊಟ್ಟ ಆರ್‌ಸಿಬಿ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್‌!

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಸೋಮವಾರ ನಡೆಯುವ ಐಪಿಎಲ್ 2025ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, 10 ವರ್ಷಗಳಿಂದ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲದ ಆರ್ ಸಿಬಿ ಈ ಬಾರಿ ಗೆಲುವಿನ ವಿಶ್ವಾಸದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಬುಮ್ರಾ, ರೋಹಿತ್ ವಾಪಾಗಿರುವುದು ತಂಡದ ಬಲವನ್ನು ಹೆಚ್ಚಿಸಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ವೇಳೆ ಗಾಯಗೊಂಡಿದ್ದ ಜಸ್ಪ್ರೀತ್ ಬುಮ್ರಾ 3 ತಿಂಗಳ ಬಳಿಕ ಚೇತರಿಸಿಕೊಂಡಿದ್ದು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆರ್ ಸಿಬಿ ಬಲಿಷ್ಠ ಬ್ಯಾಟಿಂಗ್ ಪಡೆಗೆ ಬುಮ್ರಾ ದೊಡ್ಡ ಸವಾಲಾಕುವ ಸಾಧ್ಯತೆ ಇದೆ. ಆದರೆ ಬುಮ್ರಾ ಬಗ್ಗೆ ಮಾತನಾಡಿರುವ ಆರ್ ಸಿಬಿ ಆಲ್‌ರೌಂಡರ್ ಟಿಮ್ ಡೇವಿಡ್, ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದಾರೆ.

virat kohli phil salt warning bumrah rcb vs mi ipl 2025

ಆರ್ ಸಿಬಿಗೆ ಬರುವ ಮುನ್ನ ಟಿಮ್ ಡೇವಿಡ್ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡಿದ್ದರು. ಬುಮ್ರಾರನ್ನು ನೆಟ್ಸ್‌ನಲ್ಲಿ ಎದುರಿಸಿರುವ ಅವರು ಇದೀಗ ಪಂದ್ಯದಲ್ಲಿ ಎದುರಿಸಲು ಸಜ್ಜಾಗಿದ್ದಾರೆ. ಡೆತ್ ಓವರ್ ನಲ್ಲಿ ಬುಮ್ರಾ ಬೌಲಿಂಗ್ ಮಾಡುತ್ತಾರೆ, ವಿಕೆಟ್ ಬಿದ್ದರೆ ಟಿಮ್ ಡೇವಿಡ್ ಕೂಡ ಡೆತ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಾರೆ. ಇಬ್ಬರೂ ಮುಖಾಮುಖಿಯಾಗುವ ಸಾಧ್ಯತೆ ಇರುವುದರಿಂದ ಯಾರು ಮೇಲುಗೈ ಸಾಧಿಸುತ್ತಾರೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಬುಮ್ರಾ ಬಗ್ಗೆ ಟಿಮ್ ಡೇವಿಡ್ ಮೆಚ್ಚುಗೆ

ಬುಮ್ರಾ ಬಗ್ಗೆ ಮಾತನಾಡಿರುವ ಟಿಮ್ ಡೇವಿಡ್, "ಅವರು ಮಾರಕ ಯಾರ್ಕರ್ ಬೌಲಿಂಗ್ ಮಾಡುವುದರಿಂದ ನಾನು ನನ್ನ ಕಾಲ್ಬೆರಳುಗಳನ್ನು ತಪ್ಪಿಸಲು ಪ್ರಯತ್ನಿಸುತ್ತೇನೆ. ಅವರು ಒಬ್ಬ ಅದ್ಭುತ ಬೌಲರ್. ಮತ್ತು ನೀವು ಅತ್ಯುತ್ತಮ ತಂಡಗಳ ವಿರುದ್ಧ, ಅತ್ಯುತ್ತಮ ಆಟಗಾರರ ವಿರುದ್ಧ ದೊಡ್ಡ ಪ್ರದರ್ಶನ ನೀಡಿದಾಗ, ಒಬ್ಬ ಆಟಗಾರನಾಗಿ ನೀವು ಉತ್ತಮವಾಗಬಹುದು. ಉತ್ತಮ ಆಟಗಾರರು ಅತ್ಯುತ್ತಮ ಆಟಗಾರರಿಂದ ಸವಾಲು ಎದುರಿಸಲು ಬಯಸುತ್ತಾರೆ, ನಾನು ಅದಕ್ಕಾಗಿ ಎದುರು ನೋಡುತ್ತಿದ್ದೇನೆ," ಎಂದು ಹೇಳಿದರು.

2022 ರಿಂದ 2024 ರವರೆಗೆ ಮುಂಬೈ ಇಂಡಿಯನ್ಸ್ ಪರ ಆಡಿರುವ 29 ವರ್ಷದ ಟಿಮ್ ಡೇವಿಡ್, ಬುಮ್ರಾ ತಮ್ಮ ತಂಡದ ವಿರುದ್ಧ ಎಸೆದ ಮೊದಲ ಬೌಂಡರಿ ಅಥವಾ ಸಿಕ್ಸರ್ ಹೋಗಬಹುದು ಎಂದಿದ್ದಾರೆ.

ಪಂದ್ಯಾವಳಿಯಲ್ಲಿ ನಾವು ಮುಂದಿನ ಹಂತಕ್ಕೆ ಹೋಗಬೇಕೆಂದರೆ ಉತ್ತಮ ತಂಡಗಳನ್ನು ಸೋಲಿಸಬೇಕು. ಅತ್ಯುತ್ತಮ ಆಟಗಾರರನ್ನು ಸೋಲಿಸಬೇಕು. ಆದ್ದರಿಂದ ನಿಮಗೆ ತಿಳಿದಿದೆ, ಸೋಮವಾರ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿ ಬುಮ್ರಾ ಚೆಂಡನ್ನು ಬೌಲ್ ಮಾಡುತ್ತಾನೆ ಮತ್ತು ವಿರಾಟ್ ಕೊಹ್ಲಿ ಅಥವಾ ಫಿಲ್‌ಸಾಲ್ಟ್‌ರಿಂದ ಮೊದಲ ಚೆಂಡು ನಾಲ್ಕು ಅಥವಾ ಆರು ಆಗುತ್ತದೆ" ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+