RCB Virat Kohli: ಇದು ನಡೆದ್ರೆ, ಆರ್‌ಸಿಬಿ ತ್ಯಜಿಸುವೆ: ವಿರಾಟ್‌ ಕೊಹ್ಲಿ ಈ ಅಚ್ಚರಿಗ ಹೇಳಿಕೆ ನೀಡಿದ್ಯಾಕೆ?

RCB Virat Kohli: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವ ಮೂಲಕ 17 ವರ್ಷಗಳ ಬಳಿಕ ಮೊದಲ ಟ್ರೋಫಿಗೆ ಮುತ್ತಿಟ್ಟಿತು. ಅಂದು ಬರೀ ಕರ್ನಾಟಕ ಮಾತ್ರವಲ್ಲದೆ, ಇಡೀ ದೇಶವೇ ಸಂಭ್ರಾಮಾಚರಣೆಯಲ್ಲಿ ಮುಳುಗಿತ್ತು. ಇದಾದ ಬಳಿಕ ತುಂಬಾ ಬೆಳವಣಿಗೆಗಳು ಆದ್ವು. ಈ ನಡುವೆಯೇ ಇದೀಗ ವಿರಾಟ್‌ ಕೊಹ್ಲಿ ಅವರು ಐಪಿಎಲ್‌ ತೊರೆಯುವ ಮಾತನಾಡಿದ್ದಾರೆ. ಹಾಗಾದ್ರೆ ಅವರು ಹೇಳಿದ್ದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್‌ 18ನೇ ಆವೃತ್ತಿಯ ಫೈನಲ್‌ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಿತು. ಈ ವೇಳೆ ಬಲಿಷ್ಠ ಪಂಜಾಬ್‌ ಕಿಂಗ್ಸ್‌ ತಂಡವನ್ನು ಬಗ್ಗುಬಡಿಯುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಚೊಚ್ಚಲ ಟ್ರೋಫಿ ತನ್ನದಾಗಿಸಿಕೊಂಡಿತು. ಬಳಿಕ ಮಾರನೇ ದಿನ ಜೂನ್‌ 4ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಲಿತ ದುರಂತ ಆರ್‌ಸಿಬಿ ಪಾಲಿಗೆ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿತು.

Virat Kohli Makes Statement About Leaving from RCB

ಬಳಿಕ ಆರ್‌ಸಿಬಿ ಬ್ಯಾನ್‌, ಮಾರಾಟ ಮಾಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪ್ರಾಂಚೈಸಿ ಸ್ಪಷ್ಟನೆ ಕೊಡುವ ಕೆಲಸವನ್ನು ಸಹ ಮಾಡಿತ್ತು. ನಾವು ಯಾವುದೇ ಕಾರಣಕ್ಕೂ ತಂಡವನ್ನು ಮಾರಾಟ ಮಾಡುವುದಿಲ್ಲ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿತ್ತು. ಆದರೆ, ಈ ನಡುವೆಯೇ ಇದೀಗ ಆರ್‌ಸಿಬಿ ಸ್ಟಾರ್‌ ಆಟಗಾರ ಕಿಂಗ್‌ ಕೊಹ್ಲಿ ತಂಡ ತೊರೆಯುವ ಮಾತನಾಡಿದ್ದಾರೆ. ಹಾಗಾದ್ರೆ, ಅವರು ಹೀಗೆ ಹೇಳಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.

ಐಪಿಎಲ್‌ ಅಂದ್ರೆ ಆರ್‌ಸಿಬಿ, ಆರ್‌ಸಿವಿ ಅಂದ್ರೆ ಕೊಹ್ಲಿ ಎನ್ನುವಂತಾಗಿದೆ. ಒಂದು ವೇಳೆ ಇವರು ಆರ್‌ಸಿಬಿ ತೊರೆದರೆ, ಸಾಕು ಇವರನ್ನು ಎಷ್ಟು ಮತ್ತೊಕಾದರೂ ಸರಿ.. ಕೊಂಡುಕೊಳ್ಳಲೇಬೇಕೆನ್ನುವ ಹಠದಲ್ಲಿ ಎಲ್ಲಾ ಪ್ರಾಂಚೈಸಿಗಳಿವೆ. ಇಂತಹದ್ದರ ನಡುವೆಯೂ ಇದೀಗ ವಿರಾಟ್‌ ಕೊಹ್ಲಿ ಅವರು ಐಪಿಎಲ್‌ಗೆ ಗುಡ್‌ ಬಾಯ್‌ ಹೆಳುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದು, ಇದು ಇನ್ನಿತರ ಪ್ರಾಂಚೈಸಿಗಳಿಗೆ ಶುಭ ಸುದ್ದಿಯಾಗಿರಬಹುದು. ಆದರೆ, ಆತುರ ಪಡದೇ, ಅಸಲಿ ಸತ್ಯ ಏನು ಎನ್ನುವುದನ್ನು ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ.

ಆರ್‌ಸಿಬಿ ಸಹ ಆಟಗಾರ ಕೂಡ ವಿರಾಟ್‌ ಕೊಹ್ಲಿ ಅವರು ಐಪಿಎಲ್‌ ತೊರೆಯುವ ಬಗ್ಗೆ ಹೇಳಿದ್ದಾರೆ ಅಂತಾ ಹೇಳಿಕೆ ನೀಡಿದ್ದಾರೆ. ಐಪಿಎಲ್ ಆರಂಭ ಆದಾಗಿನಿಂದಲೂ ಆರ್‌ಸಿಬಿ ತಂಡದಲ್ಲಿರುವ ಅನುಭವಿ ಆಟಗಾರನಿಗೆ ಐಪಿಎಲ್ 2026 ಬರುವ ವೇಳೆಗೆ 37 ವರ್ಷ ವಯಸ್ಸಾಗಲಿದೆ. ಮುಂದಿನ ಸೀಸನ್‌ ಆರಂಭ ಆಗುವ ಮುನ್ನವೇ ತಂಡದ ಸಹ ಆಟಗಾರ ಸ್ವಸ್ತಿಕ್ ಚಿಕಾರ ಮಾಜಿ ಆರ್‌ಸಿಬಿ ನಾಯಕನ ನಿವೃತ್ತಿ ಬಗ್ಗೆ ಹೇಳಿಕೆ ನೀಡಿ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದಾರೆ.

ಹೌದು.. ಸಂದರ್ಶನವೊಂದಲ್ಲಿ ಮಾತನಾಡಿದ ಸ್ವಸ್ತಿಕ್‌ ಚಿಕಾರ ಅವರು, ಇಂಪ್ಯಾಕ್ಟ್ ಪ್ಲೇಯರ್ ಆಗಿ ಪಂದ್ಯ ಆಡುವ ದಿನ ನಿವೃತ್ತಿ ಹೊಂದುವುದಾಗಿ ವಿರಾಟ್‌ ಕೊಹ್ಲಿ ಹೇಳಿದ್ದರು. ಅಷ್ಟೇ ಅಲ್ಲದೆ, ನಾನು ಫಿಟ್ ಆಗಿರುವವರೆಗೂ ಕ್ರಿಕೆಟ್ ಆಡುತ್ತೇನೆ. 20 ಓವರ್‌ಗಳನ್ನು ಪೂರ್ತಿ ಫೀಲ್ಡಿಂಗ್ ಮಾಡಿದ ನಂತರವೂ ಬ್ಯಾಟಿಂಗ್ ಮಾಡಲು ಮಾಡಲು ಬಯಸುತ್ತೇಬೆ ಎಂದು ಹೇಳಿದ್ದರು ಅಂತಾ ಹೇಳಿಕೆ ನೀಡಿದ್ದಾರೆ.

ಜಬ್ ತಕ್ ಕ್ರಿಕೆಟ್ ಖೇಲುಂಗಾ, ಜಬ್ ತಕ್ ಮೈ ಪೂರಾ ಫಿಟ್ ಹೂಂ. ಯೇ ಇಂಪ್ಯಾಕ್ಟ್ ಪ್ಲೇಯರ್ ಕಿ ತರಹ್ ನಹಿ ಖೇಲುಂಗಾ. ಮೈ ಶೇರ್ ಕಿ ತರಹ್ ಖೇಲುಂಗಾ ಅತಾ ಹೇಳಿದ್ದಾರೆ. ಅಂದರೆ. ನಾನು ಸಂಪೂರ್ಣವಾಗಿ ಫಿಟ್ ಆಗಿರುವವರೆಗೂ ಕ್ರಿಕೆಟ್ ಆಡುತ್ತೇನೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವುದಿಲ್‌ ಎಂದು ವಿರಾಟ್ ಭಯ್ಯಾ ಹೇಳಿದ್ದರು ಅಂತಾ ಹೇಳಿದ್ದಾರೆ. ಒಂದು ವೇಳೆ ಇಂಪ್ಯಾಕ್ಟ್ ಪ್ಲೇಯರ್ ಆಡುವ ಪರಿಸ್ಥಿತಿ ಎದುರಾದರೆ, ಆಗಲೇ ನಾನು ಕ್ರಿಕೆಟ್ ತೊರೆಯುತ್ತೇವೆ ಎಂದಿರುವುದಾಗಿ ಚಿಕಾರ ಅವರು ಹೇಳಿದರು.

ಇದೀಗ ಸದ್ಯ ವಿರಾಟ್‌ ಕೊಹ್ಲಿ ಅವರು ಐಪಿಎಲ್ ಹೊರತುಪಡಿಸಿ, ಕೊಹ್ಲಿ ಏಕದಿನ ಅಂತರರಾಷ್ಟ್ರೀಯ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. 2024ರಲ್ಲಿ ಟಿ-20 ವಿಶ್ವಕಪ್ ಗೆದ್ದ ಬಳಿಕ ಅವರು ಮೊದಲು ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು. ಬಳಿಕ 2025ರ ಮೇ ತಿಂಗಳಲ್ಲಿ ಇಂಡಿಯಾ-ಇಂಗ್ಲೆಂಡ್‌ ಸರಣಿಗೆ ಮುಂಚೆಯೇ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ ಹೇಳಿ ಬಿಸಿಸಿಐಗೆ ಬಿಗ್‌ ಶಾಕ್‌ ಕೊಟ್ಟರು. ಒಂದು ವೇಳೆ ವಿರಾಟ್‌ ಕೊಹ್ಲಿ ಅವರು ಆರ್‌ಸಿಬಿಯಲ್ಲಿ ಇಲ್ಲದಿದ್ದರೆ, ತಂಡಕ್ಕೆ ಕಳೆನೇ ಇರುವುದಿಲ್ಲ ಎಂದು ಅಭಿಮಾನಿಗಳು ಅಷ್ಟೇ ಅಲ್ಲದೆ, ತುಂಬಾ ಅನುಭವಿ ಕ್ರಿಕೆಟ್‌ ಆಟಗಾರರು ಸಹ ಭವಿಷ್ಯ ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+