RCB Virat Kohli: ವಿರಾಟ್ ಕೊಹ್ಲಿ ಐಪಿಎಲ್ 2026ಕ್ಕೆ ಆರ್‌ಸಿಬಿ ಪರ ಕಣಕ್ಕಿಳಿಯೋದಿಲ್ಲ..
RCB Virat Kohli: ಐಪಿಎಲ್ 2025 ಟ್ರೋಫಿಗೆ ಆರ್‌ಸಿಬಿ ಮುತ್ತಿಟ್ಟಿದೆ. ಇನ್ನೂ ಇದೀಗ 2026ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುವುದಿಲ್ಲ. ಅವರು ವಿದಾಯ ಘೋಷಿಸಲಿದ್ದಾರೆ ಎನ್ನುವ ಸುದ್ದಿಯೊಂದು ಭಾರೀ ಗದ್ದಲ ಸೃಷ್ಟಿಸಿದೆ. ಹಾಗಾದ್ರೆ, ಅಸಲಿ ಸತ್ಯ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 18ನೇ ಆವೃತ್ತಿಯ ಫೈನಲ್‌ನಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇನ್ನೂ ಇದೀಗ ಎಲ್ಲರ ಚಿತ್ತ 2026ನೇ ಆವೃತ್ತಿಯತ್ತ ನೆಟ್ಟಿದೆ. ಇದಕ್ಕೂ ಮೊದಲೇ ವಿರಾಟ್ ಕೊಹ್ಲಿ ಅವರು ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಆಡುವುದಿಲ್ಲ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಆರ್‌ಸಿಬಿ ಇಲ್ಲದಿದ್ರೆ, ಐಪಿಎಲ್ ಇಲ್ಲ, ಹಾಗೆಯೇ ವಿರಾಟ್ ಕೊಹ್ಲಿ ಇಲ್ಲದಿದ್ರೆ ಆರ್‌ಸಿಬಿ ತಂಡ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಅಷ್ಟರ ಮಟ್ಟಿಗೆ ಕಿಂಗ್ ಕೊಹ್ಲಿಗೆ ಅಭಿಮಾನಿ ಬಳಗವಿದೆ. ಇಂತಹದ್ದರ ನಡುವೆಯೇ ವಿರಾಟ್ ಕೊಹ್ಲಿ ಅವರು ಮುಂದಿನ ಐಪಿಎಲ್‌ನಲ್ಲಿ ಆಡುವುದಿಲ್ಲ ಎಂಬ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಗೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿದಾಯ ಸಲ್ಲಿಸಲಿದ್ದಾರೆ ಎಂದು ವರದಿ ಆಗಿದೆ. ಆದರೆ ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಣೆ ನೀಡಿರುವ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ, "ಆರ್‌ಸಿಬಿ ಫ್ರಾಂಚೈಸಿಯ ವಾಣಿಜ್ಯ ಒಪ್ಪಂದ ನವೀಕರಿಸದಿರಲು ವಿರಾಟ್ ಕೊಹ್ಲಿ ಅವರು ನಿರ್ಧಾರ ಮಾಡಿದ್ದಾರೆ," ಎಂದು ಹೇಳಿದ್ದಾರೆ ಅಂತಾ ವರದಿ ಆಗಿದೆ.
ಆದರೆ, ಇದರ ಅರ್ಥ ಅವರು ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡವನ್ನು ತೊರೆಯಲಿದ್ದಾರೆ ಅಂತಲ್ಲ. ವಿರಾಟ್ ಕೊಹ್ಲಿ ಅವರು ಮುಂದಿನ ಆವೃತ್ತಿಯಲ್ಲೂ ಆರ್‌ಸಿಬಿ ಪರ ಆಡುವ ಸಾಧ್ಯತೆಯಿದೆ," ಎಂದು ತಿಳಿಸಿದ್ದಾರೆ. ಅಲ್ಲದೆ, ವಿರಾಟ್ ಕೊಹ್ಲಿ ಆರ್‌ಸಿಬಿಯ ವಾಣಿಜ್ಯ ಒಪ್ಪಂದವನ್ನು ನಿರಾಕರಿಸಿದ್ದರೆಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಪರ ಆಡುತ್ತಾರೆ. ಅವರು ಆರ್‌ಸಿಬಿ ಮೊದಲ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಮತ್ತೆ ಫ್ರಾಂಚೈಸಿ ಏಕೆ ತೊರೆಯುತ್ತಾರೆ? ವಾಣಿಜ್ಯ ಒಪ್ಪಂದವು ಕ್ರಿಕೆಟ್‌ಯೇತರ ಒಪ್ಪಂದವಾಗಿದೆ ಎಂದು ಅವರು ಅವರು ಸ್ಪಷ್ಟನೆ ನೀಡಿದ್ದಾರೆ. ವಿಶ್ವದ ಅತ್ಯಂಯದ ಶ್ರೀಮಂತ ಲೀಗ್‌ಗಳ ಸಾಲಿಗೆ ಐಪಿಎಲ್ ಕೂಡ ಸೇರುತ್ತದೆ. ಕಳೆದ 18 ವರ್ಷಗಳಲ್ಲಿ ತಂಡದ ಅವಿಭಾಜ್ಯ ಅಂಗ ಆಗಿರುವ ವಿರಾಟ್ ಕೊಹ್ಲಿ ಅವರು ಈ ಹಿಂದೆ ನಾಯಕರಾಗಿಯೂ ತಂಡವನ್ನು ಮುನ್ನಡೆಸಿದ್ದರು ಎನ್ನುವುದನ್ನು ಮರೆಯುವಂತಿಲ್ಲ.
ಆರ್‌ಸಿಬಿ ಆಡಿದ 17 ಆವೃತ್ತಿಗಳಲ್ಲೂ ಒಂದೇ ಒಂದು ಬಾರಿಯೂ ಟ್ರೋಫಿ ಗೆದ್ದಿರಲಿಲ್ಲ. ಯಾಕಂದ್ರೆ, ಬ್ಯಾಟಿಂಗ್ ಇದ್ದರೆ, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ಇರುತ್ತಿರಲಿಲ್ಲ. ಆದರೆ, 2025 ಅಂದರೆ ಈ ಬಾರಿ ಉತ್ತಮ ತಂಡ ಹೊಂದಿದ್ದು, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಯಾರಾದರೂ ಒಬ್ಬ ಉತ್ತಮ ಆಟಗಾರ ಇಲ್ಲ ಅಂದ್ರೆ ಆ ಸ್ಥಾನ ತುಂಬಲು ಮತ್ತೊಬ್ಬರು ರೆಡಿ ಇರುತ್ತಿದ್ದರು. ಇದೇ ಈ ಬಾರಿ ಟ್ರೋಫಿ ಗೆಲುವಿಗೆ ಕಾರಣವಾಗಿದ್ದು. ಆದ್ದರಿಂದ ಇದೇ ತಂಡವನ್ನೇ ಆರ್‌ಸಿಬಿ ಮುಂದುವರೆಸಲೂ ಫಿಕ್ಸ್ ಆಯಿತು. ಬಲಿಷ್ಠ ತಂಡ ಹೊಂದಿರುವ ಆರ್‌ಸಿಬಿ ಮುಂದಿನ ಬಾರಿಯೂ ಟ್ರೋಫಿ ಗೆಲ್ಲುವ ತಂಡಗಳ ಸಾಲಿನಲ್ಲಿ ಒಂದಾಗಿದೆ.












Click it and Unblock the Notifications