Virat Kohli: ರಾಯಲ್ ಆಗಿ ಆರ್‌ಸಿಬಿ ಕ್ಯಾಂಪ್‌ಗೆ ಎಂಟ್ರಿ; ಅದೊಂದು ಪಂದ್ಯ ಆಡುತ್ತೇನೆ ಎಂದ ವಿರಾಟ್ ಕೊಹ್ಲಿ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯ ಆರಂಭಕ್ಕೆ ಇನ್ನು ಒಂದು ವಾರ ಸಮಯವಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯಕ್ ಕೆಕೆಆರ್ ತಂಡವು ಆರ್ ಸಿಬಿ ತಂಡವನ್ನು ಎದುರಿಸಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಆರ್ ಸಿಬಿ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಆರ್ ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶನಿವಾರ ಬೆಂಗಳೂರಿಗೆ ಬಂದಿದ್ದು ತಂಡವನ್ನು ಸೇರಿಕೊಂಡಿದ್ದಾರೆ.

ಶನಿವಾರ ವಿರಾಟ್ ಕೊಹ್ಲಿ ಆರ್ ಸಿಬಿ ಸೇರಿದ್ದು ಫ್ರಾಂಚೈಸಿ ಅದರ ವಿಡಿಯೋ ಹಂಚಿಕೊಂಡಿದೆ. ಹೊಸ ಸ್ಟೈಲ್‌ನಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ, ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದ ಬಳಿಕ ಸೆಮಿಫೈನಲ್‌ನಲ್ಲಿ 86 ರನ್ ಗಳಿಸಿದ್ದ ಕೊಹ್ಲಿ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ.

virat kohli joins rcb in bengaluru ahead of ipl 2025

ಐಪಿಎಲ್‌ 18ನೇ ಆವೃತ್ತಿಯಾಗಿದ್ದು ವಿರಾಟ್ ಕೊಹ್ಲಿ ಜೆರ್ಸಿ ಸಂಖ್ಯೆ ಕೂಡ 18 ಆಗಿರುವುದು ವಿಶೇಷ. ಇದು ಅಭಿಮಾನಿಗಳಿಗೆ ಮತ್ತಷ್ಟು ವಿಶೇಷ ಸಂಗತಿಯಾಗಿದ್ದು ಈ ವರ್ಷವಾದರೂ ಆರ್ ಸಿಬಿಯ ಪ್ರಶಸ್ತಿಯ ಬರ ಕೊನೆಯಾಗಲಿ ಎಂದು ಹಾರೈಸಿದ್ದಾರೆ.

ಅಭಿಮಾನಿಗಳಿಗೆ ಖುಷಿ ಸುದ್ದಿ!

ಆರ್ ಸಿಬಿ ಸೇರಿದ ಬಳಿಕ ಅಭಿಮಾನಿಗಳ ಜೊತೆ ಮಾತನಾಡಿದ ಅವರು ಸಖತ್ ಖುಷಿ ಸುದ್ದಿ ಕೊಟ್ಟರು. ಯಾರೂ ಆತಂಕಪಡುವ ಅಗತ್ಯವಿಲ್ಲ, ನಾನು ಯಾವುದೇ ಘೋಷಣೆಗಳನ್ನು ಮಾಡುವುದಿಲ್ಲ, ಇನ್ನಷ್ಟು ಆಡುವುದನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ನಿವೃತ್ತಿ ಬಗೆಗಿನ

ಒಲಿಂಪಿಕ್‌ನಲ್ಲಿ ಒಂದು ಪಂದ್ಯ ಆಡಬೇಕು!

2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಿದರೆ ಮತ್ತೆ ಟಿ20 ಕ್ರಿಕೆಟ್‌ಗೆ ಮರಳುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, "ಒಲಿಂಪಿಕ್ಸ್‌ನಲ್ಲಿ ಆಡಲು ನಾನು ನಿವೃತ್ತಿಯಿಂದ ವಾಪಸ್ ಬರಲು ಸಾಧ್ಯವಿಲ್ಲ, ಒಂದು ವೇಳೆ ಭಾರತ ತಂಡ ಚಿನ್ನದ ಪದಕಕ್ಕಾಗಿ ಒಂದು ಪಂದ್ಯ ಆಡುವುದಾದರೆ, ನಾನು ಆ ಪಂದ್ಯ ಆಡಲು ನಿವೃತ್ತಿಯಿಂದ ವಾಪಸ್ ಬರುತ್ತೇನೆ, ಪದಕ ಗೆದ್ದು ಮನೆಗೆ ಮರಳುತ್ತೇನೆ" ಎಂದು ನಗುತ್ತಾ ಉತ್ತರ ಕೊಟ್ಟಿದ್ದಾರೆ.

ಕೊಹ್ಲಿ ಬಂದಿರುವುದು ಆರ್ ಸಿಬಿ ತಂಡದ ಉತ್ಸಾಹವನ್ನು ಹೆಚ್ಚಿಸಿದೆ. ಈಗಾಗಲೇ ಎಲ್ಲಾ ಆಟಗಾರರು ತಂಡವನ್ನು ಸೇರಿಕೊಂಡಿದ್ದು ಅಭ್ಯಾಸ ಆರಂಭಿಸಿದ್ದಾರೆ. ಬಲಿಷ್ಠ ಆಲ್‌ರೌಂಡರ್ ಗಳನ್ನು ಹೊಂದಿದ್ದು ತಂಡ ಉತ್ತಮವಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ನರನ್ನು ಸೋಲಿಸಿ ಉತ್ತಮ ಆರಂಭ ಪಡೆಯಲು ಕಠಿಣ ಅಭ್ಯಾಸ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+