Kohli Vs Chahal: ಆಗ ಅವನೀತ್ ಕೌರ್, ಈಗ ಲಿಜ್‌ಲಾಜ್; 'ಅಲ್ಗಾರಿದಮ್' ಕಮೆಂಟ್ ಮೂಲಕ ಕೊಹ್ಲಿ ಕಾಲೆಳೆದ ಚಹಾಲ್
Kohli Vs Chahal: ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಬಾರಿ ಅವರು ತಮ್ಮ ಬ್ಯಾಟಿಂಗ್‌ನಿಂದಲ್ಲ, ಬದಲಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ನೀಡಿದ ಒಂದು 'ಲೈಕ್' ಮೂಲಕ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ. ಜೊತೆಗೆ ಇದರ ಬೆನ್ನಲ್ಲೇ ಯುಜ್ವೇಂದ್ರ ಚಹಾಲ್ ಅವರ 'ಅಲ್ಗಾರಿದಮ್' ಟ್ರೋಲ್ ಸಖತ್ ವೈರಲ್ ಆಗಿದೆ.
ಜರ್ಮನ್-ದಕ್ಷಿಣ ಆಫ್ರಿಕಾ ಮೂಲದ ಇನ್ಫ್ಯೂಯೆನ್ಸರ್ ಮತ್ತು ಗಾಯಕಿ ಲಿಜ್‌ಲಾಜ್ ಎಂಬುವವರು ಹಂಚಿಕೊಂಡಿದ್ದ ಹಳೆಯ ಫೋಟೋವೊಂದಕ್ಕೆ ವಿರಾಟ್ ಕೊಹ್ಲಿ ಅವರ ಅಧಿಕೃತ ಖಾತೆಯಿಂದ ಲೈಕ್ ಬಂದಿದೆ. ಲಿಜ್‌ಲಾಜ್ ಭಾರತದಲ್ಲಿ ತಮ್ಮ 'ಸಮೋಸಾ ಸಮೋಸಾ' ಹಾಡಿನ ಮೂಲಕ ಈಗಾಗಲೇ ಪರಿಚಿತರಾಗಿದ್ದು, ಆರ್‌ಸಿಬಿ ತಂಡದ ದೊಡ್ಡ ಅಭಿಮಾನಿಯೂ ಹೌದು. ವಿರಾಟ್ ಅವರು ಇವರನ್ನು ಫಾಲೋ ಮಾಡದಿದ್ದರೂ, ಅವರ ಹಳೆಯ ಫೋಟೋಗೆ ಲೈಕ್ ಬಂದಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಚಹಾಲ್ ಅಲ್ಗಾರಿದಮ್ ಕಮೆಂಟ್ ವೈರಲ್
ಈ ಘಟನೆಯ ಬೆನ್ನಲ್ಲೇ ಕೊಹ್ಲಿ ಅವರ ಮಾಜಿ ಸಹ ಆಟಗಾರ ಮತ್ತು ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಪೋಟೋದ ಕಮೆಂಟ್ ಸೆಕ್ಷನ್‌ನಲ್ಲಿ ಕೇವಲ 'ಅಲ್ಗಾರಿದಮ್' ಎಂದು ಬರೆಯುವ ಮೂಲಕ ಕೊಹ್ಲಿ ಅವರ ಕಾಲೆಳೆದಿದ್ದಾರೆ. ಚಹಾಲ್ ಈ ರೀತಿ ಹೇಳಲು ಒಂದು ವಿಶೇಷ ಕಾರಣವಿದೆ. ಕಳೆದ ವರ್ಷ 2025ರಲ್ಲೊ ನಟಿ ಅವನೀತ್ ಕೌರ್ ಅವರ ಫೋಟೋಗೆ ಕೊಹ್ಲಿ ಲೈಕ್ ಮಾಡಿದ್ದಾಗ ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಆಗ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ನನ್ನ ಫೀಡ್ ಕ್ಲಿಯರ್ ಮಾಡುವಾಗ ಅಲ್ಗಾರಿದಮ್ ತಪ್ಪಾಗಿ ಆ ಪೋಸ್ಟ್ ಅನ್ನು ಲೈಕ್ ಮಾಡಿರಬಹುದು, ಇದರಲ್ಲಿ ಯಾವುದೇ ಉದ್ದೇಶವಿಲ್ಲ" ಎಂದು ಸ್ಪಷ್ಟನೆ ನೀಡಿದ್ದರು. ಅಂದಿನಿಂದ 'ಅಲ್ಗಾರಿದಮ್' ಎಂಬ ಪದವು ಕ್ರಿಕೆಟ್ ಅಭಿಮಾನಿಗಳ ನಡುವೆ ಒಂದು ದೊಡ್ಡ ಮೀಮ್ ಆಗಿ ಮಾರ್ಪಟ್ಟಿದೆ. ಈಗ ಅದೇ ಪದವನ್ನು ಬಳಸಿ ಚಹಾಲ್ ಹಾಸ್ಯಮಯವಾಗಿ ಕೊಹ್ಲಿ ಅವರ ಕಾಲೆಳೆದಿದ್ದಾರೆ.
ಕೊಹ್ಲಿ ಲೈಕ್‌ಗೆ ಲಿಜ್‌ಲಾಜ್ ಹೇಳಿದ್ದೇನು?
ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾ ಪೋಸ್ಟ್‌ಗೆ ಲೈಕ್ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಲಿಜ್‌ಲಾಜ್, "ವಿರಾಟ್ ಕೊಹ್ಲಿ ಲೈಕ್ ಮಾಡಿದ್ದು ನೋಡಿ ಮೊದಲು ತುಂಬಾ ಖುಷಿಯಾಯಿತು. ಆದರೆ, ಜನರು ಇದನ್ನು ದೊಡ್ಡ ಸುದ್ದಿಯನ್ನಾಗಿ ಮಾಡಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದು ನೋಡಿ ಬೇಸರವಾಯಿತು. ಕೊಹ್ಲಿ ನಂತರ ಆ ಲೈಕ್ ಅನ್ನು ತೆಗೆದುಹಾಕಿದ್ದಾರೆ. ಅವರ ಉದ್ದೇಶ ಏನೇ ಇರಲಿ, ಅವರು ನನಗೆ ಬೆಂಬಲ ನೀಡಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ," ಎಂದು ತಿಳಿಸಿದ್ದಾರೆ.
ವಿವಾದಕ್ಕೆ ತೆರೆ ಎಳೆದ ಲಿಜ್‌ಲಾಜ್
ಅಲ್ಲದೆ, ಲಿಜ್‌ಲಾಜ್ ಅವರು ತಮ್ಮ ಇತ್ತೀಚಿನ ಸ್ಟೋರಿಯಲ್ಲಿ, "ನನ್ನನ್ನು ಟ್ರೋಲ್ ಮಾಡಬೇಡಿ, ನಾನು ಕ್ರಿಕೆಟಿಗರನ್ನು ಗೌರವಿಸುತ್ತೇನೆ. ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರ, ಅವರ ಒಂದು ಲೈಕ್ ನನಗೆ ದೊಡ್ಡ ವಿಷಯ," ಎಂದು ಹೇಳುವ ಮೂಲಕ ವಿವಾದಕ್ಕೆ ಫುಲ್ ಸ್ಟಾಪ್ ಇಡುವ ಕೆಲಸ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಈಗಾಗಲೇ ಆ ಪೋಸ್ಟ್‌ನಿಂದ ತಮ್ಮ ಲೈಕ್ ಅನ್ನು ತೆಗೆದಿದ್ದಾರೆ ಮತ್ತು ಯುಜ್ವೇಂದ್ರ ಚಹಾಲ್ ಅವರ ಕಾಮೆಂಟ್ ಕೂಡ ಈಗ ಅಲ್ಲಿ ಕಾಣಿಸುತ್ತಿಲ್ಲ. ಐಪಿಎಲ್ 2026ರಲ್ಲಿ ಕೊಹ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದರೆ, ಚಹಾಲ್ ಪಂಜಾಬ್ ಕಿಂಗ್ಸ್ ಪರ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಕಾಲೆಳೆಯುವ ಆಟ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಬಡಿಸಿದಂತಾಗಿದೆ.












Click it and Unblock the Notifications