ವಿರಾಟ್‌ ಕೊಹ್ಲಿ ಹೆಸರಿಗೆ ಮಸಿ ಬಳಿಯಲು ಹಣದ ಆಮಿಷ: ದಕ್ಷಿಣ ಆಫ್ರಿಕಾದ ಮಾಡೆಲ್ ಸ್ಫೋಟಕ ಮಾಹಿತಿ ರಿವೀಲ್

Virat Kohli: ಇತ್ತೀಚೆಗೆ ಭಾರತೀಯ ಕ್ರಿಕೆಟ್‌ ದಿಗ್ಗಜ ವಿರಾಟ್ ಕೊಹ್ಲಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ದಕ್ಷಿಣ ಆಫ್ರಿಕಾದ ಮಾಡೆಲ್ ಲಿಜ್‌ಲಾಜ್ ಅವರ ಪೋಸ್ಟ್ ಒಂದಕ್ಕೆ ಲೈಕ್ ಬಂದಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ಕುರಿತು ಸ್ವತಃ ಲಿಜ್‌ಲಾಜ್ ಅವರು ಪ್ರತಿಕ್ರಿಯಿಸಿ ಸ್ಫೋಟಕ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.

ಫಿಲ್ಮಿಮಂತ್ರ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ಲಿಜ್‌ಲಾಜ್ ಅವರು ಮಾತನಾಡಿದ್ದು, "ಕೊಹ್ಲಿ ವಿರುದ್ಧ ಕೆಟ್ಟದಾಗಿ ಮಾತನಾಡುವಂತೆ ಕೆಲ ಪತ್ರಕರ್ತರು ನನಗೆ ಹಣದ ಆಮಿಷ ಒಡ್ಡಿದ್ದರು," ಎಂದು ಬಹಿರಂಗಪಡಿಸಿದ್ದಾರೆ. "ಕೆಲವು ಮಾಧ್ಯಮ ಸಂಸ್ಥೆಗಳು ತನ್ನನ್ನು ಸಂಪರ್ಕಿಸಿ ಕೊಹ್ಲಿ ಬಗ್ಗೆ ಇಲ್ಲದ ಸಲ್ಲದ ಸುಳ್ಳು ಆರೋಪಗಳನ್ನು ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದವು ಮತ್ತು ಅದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ನೀಡಲು ಮುಂದಾಗಿದ್ದವು. ಆದರೆ ನಾನು ಅದನ್ನ ಒಪ್ಪಿಕೊಳ್ಳದೇ ಯಾಕೆ ಆ ರೀತಿ ಮಾಡಬೇಕು ಎಂದು ಪ್ರಶ್ನಿಸಿದೆ," ಎಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

Virat Kohli Instagram Controversy LizLaz Reveals Shocking Offer From Media Know complete details

"ವಿರಾಟ್ ಕೊಹ್ಲಿ ನನ್ನ ಅಚ್ಚುಮೆಚ್ಚಿನ ಕ್ರಿಕೆಟಿಗ"

ಜರ್ಮನ್ ಮೂಲದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ಗಾಯಕಿ ಆಗಿರುವ ಲಿಜ್‌ಲಾಜ್ ಮುಂದುವರಿದು ಮಾತಾನಾಡಿ, "ವಿರಾಟ್ ಕೊಹ್ಲಿ ನನ್ನ ಅಚ್ಚುಮೆಚ್ಚಿನ ಕ್ರಿಕೆಟಿಗರಾಗಿದ್ದಾರೆ. ಕೇವಲ ಹಣ ಅಥವಾ ಪ್ರಚಾರಕ್ಕಾಗಿ ಅವರ ಘನತೆಗೆ ಧಕ್ಕೆ ತರುವ ಯಾವುದೇ ಉದ್ದೇಶ ನನಗಿಲ್ಲ," ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಯಾವುದೇ ಆಮಿಷಕ್ಕೆ ಒಳಗಾಗದೆ ಲಿಜ್‌ಲಾಜ್ ಅವರು ಸತ್ಯವನ್ನು ಬಹಿರಂಗಪಡಿಸಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯಾರು ಈ ಲಿಜ್‌ಲಾಜ್?

ಲಿಜ್‌ಲಾಜ್ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದರು. ಇವರ ತಾಯಿ ಜರ್ಮನ್ ಮೂಲದವರಾದರೆ, ತಂದೆ ದಕ್ಷಿಣ ಆಫ್ರಿಕಾದವರು. ಜರ್ಮನ್ ಮತ್ತು ಆಫ್ರಿಕಾನ್ಸ್ ಭಾಷೆಗಳಲ್ಲದೆ, ಲಿಜ್‌ಲಾಜ್ ಡಚ್, ಫ್ರೆಂಚ್, ರಷ್ಯನ್ ಮತ್ತು ಸ್ವಲ್ಪ ಮಟ್ಟಿಗೆ ಸ್ಪ್ಯಾನಿಷ್ ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಾರೆ. ಇವರು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇತರ ಕೌಶಲ್ಯಗಳನ್ನು ಸಹ ಇವರು ಹೊಂದಿದ್ದು, ಪ್ರಮಾಣೀಕೃತ ಜೀವ ರಕ್ಷಕ ಈಜುಗಾರ್ತಿ ಕೂಡ ಹೌದು. ಇವರಿಗೆ ಖಾದ್ಯಗಳ ಬಗ್ಗೆ ವಿಡಿಯೋ ಮಾಡುವುದು, ಪ್ರವಾಸ ಮಾಡುವುದು ಮತ್ತು ಹಾಡು ಬರೆಯುವುದು ಬಹಳ ಇಷ್ಟವಾದ ಹವ್ಯಾಸಗಳಾಗಿವೆ. ಇನ್ನು ವಿರಾಟ್ ಕೊಹ್ಲಿ ಅವರು ಲಿಜ್‌ಲಾಜ್ ಅವರ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ ಎಂಬ ಸುದ್ದಿ ಹರಡಿದ ಬೆನ್ನಲ್ಲೇ, ಅವರು ಆರ್‌ಸಿಬಿ ತಂಡದ ಅಭಿಮಾನಿ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಸ್ಟಾರ್ ಬ್ಯಾಟರ್ ಆಡುತ್ತಿರುವ ಅದೇ ಫ್ರಾಂಚೈಸಿಯನ್ನು ಲಿಜ್‌ಲಾಜ್ ಬೆಂಬಲಿಸುತ್ತಿರುವುದು ಕುತೂಹಲ ಮೂಡಿಸಿದೆ.

ಕಳೆದ ವರ್ಷ ಫಿಲ್ಮಿಮಂತ್ರಕ್ಕೆ ನೀಡಿದ ಸಂದರ್ಶನದಲ್ಲಿ ಲಿಜ್‌ಲಾಜ್ ಅವರು, "ನಾನು ಚಿಕ್ಕವಳಿದ್ದಾಗ ಕೇಪ್ ಟೌನ್‌ಗೆ ಸಮೀಪವಿರುವ ಕಡಲತೀರದ ಬಳಿ ವಾಸಿಸುತ್ತಿದ್ದೆವು. ನನ್ನ ಸ್ಥಳೀಯ ತಂಡವನ್ನು ಬೆಂಬಲಿಸುವುದು ನನಗೆ ತುಂಬಾ ಇಷ್ಟ. ಭಾರತದಲ್ಲಿ ಬೆಂಗಳೂರು ನನಗೆ ಅತ್ಯಂತ ಆತ್ಮೀಯವಾದ ಸ್ಥಳ ಎಂದು ಅನಿಸುತ್ತದೆ," ಎಂದು ಹೇಳಿದ್ದರು ಎಂದು ವರದಿಯಾಗಿದೆ.

ಲಿಜ್‌ಲಾಜ್ ಅವರು ವಿರಾಟ್‌ ಕೊಹ್ಲಿ ಮೇಲಿರುವ ತಮ್ಮ ಅಭಿಮಾನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಭಾರತಕ್ಕೆ ಬಂದ ನಂತರವೇ ಕ್ರಿಕೆಟ್ ಪರಿಚಯವಾದರೂ ಸಹ ವಿರಾಟ್ ಕೊಹ್ಲಿ ತಮ್ಮ ಅಚ್ಚುಮೆಚ್ಚಿನ ಕ್ರಿಕೆಟಿಗ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಕೊಹ್ಲಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲು ಹೇಳಿದ್ದವರಿಗೆ ಹಿಗ್ಗಮುಗ್ಗಾ ತರಾಟೆ ತೆಗೆದುಕೊಂಡು ಅಭಿಮಾನಿಗಳ ಮನಸು ಗೆದ್ದಿದ್ದಾರೆ. ಅಲ್ಲದೆ ಮತ್ತೊಂದೆಡೆ ಇವರು ಕೊಹ್ಲಿ ಅವರ ಅಪ್ಪಟ ಅಭಿಮಾನಿ ಎನ್ನುವುದು ವಿಶೇಷವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+