RCB vs CSK: ಗುರಾಯಿಸಿದ ಸಿಎಸ್‌ಕೆ ಬೌಲರ್‌ಗೆ ಖಡಕ್ ವಾರ್ನಿಂಗ್ ಕೊಟ್ಟ ವಿರಾಟ್ ಕೊಹ್ಲಿ
ಶುಕ್ರವಾರ ಚೆನ್ನೈ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 50 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 2008ರ ಬಳಿಕ ಮೊದಲ ಬಾರಿಗೆ ಆರ್ ಸಿಬಿ ಸಿಎಸ್‌ಕೆ ವಿರುದ್ಧ ಚೆನ್ನೈನಲ್ಲಿ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಸಿಎಸ್‌ಕೆ ಆರ್‌ಸಿಬಿ ನಡುವಿನ ಪಂದ್ಯವೆಂದರೆ ಅಲ್ಲಿ ಅಭಿಮಾನಿಗಳು ಮಾತ್ರವಲ್ಲ ಆಟಗಾರರ ನಡುವೆ ಕೂಡ ಮಾತಿನ ಚಕಮಕಿ ನಡೆಯುತ್ತದೆ. ಶುಕ್ರವಾರದ ಪಂದ್ಯದಲ್ಲೂ ಕೂಡ ಅದೇ ಆಗಿದೆ.
ಒಂದು ಕಡೆ ಫಿಲ್ ಸಾಲ್ಟ್, ಪಡಿಕ್ಕಲ್, ರಜತ್ ಪಟಿದಾರ್ ಅಬ್ಬರಿಸುತ್ತಿದ್ದರೆ ಇನ್ನೊಂದು ಕಡೆ ವಿರಾಟ್ ಕೊಹ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡುತ್ತಿದ್ದರು. ಖಲೀಲ್ ಅಹ್ಮದ್ ವಿರಾಟ್ ಕೊಹ್ಲಿ ವಿರುದ್ಧ ಎಲ್‌ಬಿಡಬ್ಲ್ಯೂ ಮನವಿ ಮಾಡಿದರು, ಅಂಪೈರ್ ಔಟ್ ಕೊಡದಿದ್ದರೂ ಸಂಭ್ರಮಾಚರಣೆ ಮಾಡಿದರು. ಬಳಿಕ ಡಿಆರ್ ಎಸ್ ತೆಗೆದುಕೊಂಡರೂ ಅದು ನಾಟೌಟ್ ಎಂದು ತೀರ್ಪು ನೀಡಲಾಯೊತು. ಇದರಿಂದ ನಿರಾಶೆಗೊಂಡ ಖಲೀಲ್ ತೀಕ್ಷ್ಣವಾದ ಬೌನ್ಸರ್ ಹೊಡೆದರು, ಅದನ್ನು ಕೊಹ್ಲಿ ಹೊಡೆಯಲು ಪ್ರಯತ್ನಿಸಿದರು ಆದರೆ ಸಂಪರ್ಕಿಸಲು ವಿಫಲರಾದರು. ಬಳಿಕ ಇಬ್ಬರೂ ಪರಸ್ಪರ ಗುರಾಯಿಸಿಕೊಂಡರು.

ಮತೀಶ ಪತಿರಾಣ ಎಸೆತ ಯಾವಾಗ ಕೊಹ್ಲಿ ತಲೆಗೆ ಬಡಿಯಿತೋ, ಬಳಿಕ ಮುಂದಿನ ಎಸೆತವನ್ನೇ ಸಿಕ್ಸರ್ ಬಾರಿಸಿದರು. ಕೆಣಕಿದವರನ್ನು ಕೊಹ್ಮಿ ಸುಮ್ಮನೆ ಬಿಟ್ಟ ಉದಾಹರಣೆಯೇ ಇಲ್ಲ. ಖಲೀಲ್ ಅಹ್ಮದ್‌ಗೂ ಅದೇ ಆಗಿತ್ತು. ಗುರಾಯಿಸಿದ್ದು ಮಾತ್ರವಲ್ಲದೆ ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಪಂದ್ಯ ಮುಗಿದ ಬಳಿಕವೂ ಖಲೀಲ್ ಅಹ್ಮದ್ ಕೈಕುಲುಕುವ ಸಂದರ್ಭದಲ್ಲಿ ಏನೋ ಹೇಳಲು ಹೋದರು, ಆಗಲೂ ವಿರಾಟ್ ಕೊಹ್ಲಿ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿದರು.
ಪಂದ್ಯ ಮುಗಿದ ಬಳಿಕ ಆಟಗಾರರು ಮಾತನಾಡುವ ಸಂದರ್ಭದಲ್ಲಿ ಕೂಡ ವಿರಾಟ್ ಕೊಹ್ಲಿ ಖಲೀಲ್ ಅಹ್ಮದ್‌ಗೆ ಕೋಪದಲ್ಲೇ ಕೈ ತೋರಿಸಿ ಏನೋ ಹೇಳಿದರು. ಕೊಹ್ಲಿ ಏನು ಹೇಳಿದರು ಎನ್ನುವ ಸ್ಪಷ್ಟನೆ ಇಲ್ಲದೇ ಇದ್ದರೂ ಅಭಿಮಾನಿಗಳು ಮಾತ್ರ ಇದು ಖಲೀಲ್ ಅಹ್ಮದ್‌ಗೆ ಕೊಟ್ಟಿರುವ ವಾರ್ನಿಂಗ್ ಎನ್ನುತ್ತಿದ್ದಾರೆ.
ಬೆಂಗಳೂರಿಗೆ ಬಾ ನೋಡಿಕೊಳ್ತೀನಿ!
ವಿರಾಟ್ ಕೊಹ್ಲಿ ಖಲೀಲ್ ಅಹ್ಮದ್ ನಡುವಿನ ಸಂಭಾಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಭಿಮಾನಿಗಳು ಕೊಹ್ಲಿ ಏನು ಹೇಳಿದ್ದಾರೆ ಎಂದು ಅಂದಾಜು ಮಾಡುತ್ತಿದ್ದಾರೆ. ಬೆಂಗಳೂರಿನ ಪಂದ್ಯದಲ್ಲಿ ನಿನ್ನನ್ನು ನೋಡಿಕೊಳ್ತಿನಿ ಎನ್ನುವಂತೆ ಮಾತನಾಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಮೇ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಆರ್ ಸಿಬಿ ಮತ್ತು ಸಿಎಸ್‌ಕೆ ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ಕೆಣಕಿರುವ ಖಲೀಲ್ ಅಹ್ಮದ್‌ಗೆ ಈ ಪಂದ್ಯದಲ್ಲಿ ನೋಡಿಕೊಳ್ತೀನಿ ಎನ್ನುವಂತೆ ಕೊಹ್ಲಿ ಹೇಳಿರಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.












Click it and Unblock the Notifications