50,000 ರೂಪಾಯಿ ಬ್ಯಾಟ್ ಹಂಚುತ್ತಿರುವ ವಿರಾಟ್ ಕೊಹ್ಲಿಗೆ ಭರ್ಜರಿ ಲಾಸ್... Virat Kohli
100 ಕೋಟಿ ರೂಪಾಯಿ ಕೊಟ್ಟು ಜಾಹೀರಾತು ಪ್ರಮೋಷನ್ ಮಾಡುವುದು, ಒಂದೊಂದು ಆಡ್ ಮಾಡೋಕೆ ಕೋಟಿ, ಕೋಟಿ ರೂಪಾಯಿ ಪಡೆಯೋದು... ಇದೆಲ್ಲಾ ವಿರಾಟ್ ಕೊಹ್ಲಿಗೆ ಮಾತ್ರ ಸಾಧ್ಯ, ಯಾಕಂದ್ರೆ ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಈಗ ಚಿನ್ನವಾಗುತ್ತಿದೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಅಬ್ಬರ ಬಲು ಜೋರಾಗುತ್ತಿದ್ದು ಸಖತ್ ಗಮನ ಸೆಳೆಯುತ್ತಿದೆ. ಹೀಗಿದ್ದಾಗಲೇ, 50,000 ರೂಪಾಯಿ ಬ್ಯಾಟ್ ಹಂಚುತ್ತಿರುವ ವಿರಾಟ್ ಕೊಹ್ಲಿಗೆ ಭರ್ಜರಿ ಲಾಸ್...
1000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಒಂದು ಕಾಲದಲ್ಲಿ ಬಸ್ ಚಾರ್ಜ್‌ಗೂ ಪರದಾಡಿದ್ದ ದಿನಗಳು ಇದ್ದವು. ಊಟಕ್ಕೂ ಯೋಚನೆ ಮಾಡುವ ಪರಿಸ್ಥಿತಿ ಎದುರಿಸಿದ್ದರು ವಿರಾಟ್ ಕೊಹ್ಲಿ ಅವರು. ಹೀಗಿದ್ದಾಗ ಸುಮಾರು 10 ವರ್ಷದಲ್ಲಿ 1000 ಕೋಟಿ ರೂಪಾಯಿ ಒಡೆಯನಾಗಿ ಬೆಳೆದು ನಿಂತಿರುವ ವಿರಾಟ್ ಕೊಹ್ಲಿ ಇದೀಗ ಜಗತ್ತಿನ ಶ್ರೀಮಂತ ಕ್ರೀಡಾಪಟು ಆಗಿ ಬೆಳೆದು ನಿಂತಿದ್ದಾರೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಕೂಡ ಲಕ್ಷ ಲಕ್ಷ ಖರ್ಚು ಮಾಡಿ ತಮ್ಮ ಜೊತೆಗೆ ಆಟ ಆಡುವ ಆಟಗಾರರಿಗೆ ಗಿಫ್ಟ್ ಅಂದ್ರೆ ಉಡುಗೊರೆ ಕೊಡುತ್ತಿದ್ದಾರೆ.

50,000 ರೂಪಾಯಿ ಬ್ಯಾಟ್ ಲಾಸ್...
ವಿರಾಟ್ ಕೊಹ್ಲಿ ಕೈಯಲ್ಲಿ ಬ್ಯಾಟ್ ನೋಡಿದರೆ ಸಾಕು ಆ ಬ್ಯಾಟ್ ಕಿತ್ತುಕೊಳ್ಳಲು ಓಡೋಡಿ ಬರ್ತಾರೆ ಇತರ ಆಟಗಾರರು. ಅದರಲ್ಲೂ ರಿಂಕು ಸಿಂಗ್ ಬಳಿಯೇ ಸುಮಾರು ಬ್ಯಾಟ್ ಇದ್ದು, ವಿರಾಟ್ ಕೊಹ್ಲಿ ಬಳಿ ಕಾಡಿ ಬೇಡಿ ಬ್ಯಾಟ್ ಪಡೆದುಕೊಂಡು ಬಂದಿದ್ದಾರೆ. ಈ ಸಮಯದಲ್ಲೇ 50,000 ರೂಪಾಯಿ ಬ್ಯಾಟ್ ಹಂಚುತ್ತಿರುವ ವಿರಾಟ್ ಕೊಹ್ಲಿಗೆ ಭರ್ಜರಿ ಲಾಸ್ ಆಗಿದೆಯಂತೆ!
ವಿರಾಟ್ ಕೊಹ್ಲಿ ಅವರ ಬಳಿ ಕೋಟಿ ಕೋಟಿ ಹಣ ಇದ್ದರೂ, ಬೇರೆಯವರಿಗೆ ಸಹಾಯವನ್ನ ಮಾಡುವುದು ಮರೆತಿಲ್ಲ. ಕಷ್ಟದಲ್ಲೇ ಬೆಳೆದು ಬಂದು ಇದೀಗ ದೊಡ್ಡ ಸ್ಟಾರ್ ಆಟಗಾರನಾಗಿ ನಿಂತಿರುವ ವಿರಾಟ್ ಕೊಹ್ಲಿಗೆ ಬಡವರ ಕಷ್ಟ ಅರ್ಥ ಆಗುತ್ತದೆ. ಇದೇ ಕಾರಣಕ್ಕೆ ಹಲವಾರು ಕ್ರಿಕೆಟ್ ಆಟಗಾರರಿಗೆ ಸಹಾಯ ಮಾಡಿದ್ದಾರೆ ವಿರಾಟ್ ಕೊಹ್ಲಿ. ಹೀಗಿದ್ದಾಗ ತಮ್ಮ ಬಳಿ ಬಂದು ಎಂಆರ್‌ಎಫ್ ಬ್ಯಾಟ್ ಕೇಳಿದರೆ ಇಲ್ಲ ಎನ್ನುವುದಿಲ್ಲ ವಿರಾಟ್ ಕೊಹ್ಲಿ. ತಮ್ಮ ಬ್ಯಾಟ್ ಗಿಫ್ಟ್ ಕೊಟ್ಟು ಕಳುಹಿಸುತ್ತಾರೆ. ಅದೇ ರೀತಿ ಈಗ ಪಂಜಾಬ್ ಆಟಗಾರರಿಗೂ ವಿರಾಟ್ ಕೊಹ್ಲಿ ಬ್ಯಾಟ್ ಗಿಫ್ಟ್ ಕೊಟ್ಟು ಕಳುಹಿಸಿದ್ದಾರೆ. ಆದರೆ 50,000 ರೂಪಾಯಿ ಬ್ಯಾಟ್ ಕೊಟ್ಟು ಕೊಟ್ಟು ಈಗ ಕೊಹ್ಲಿಗೆ ಲಾಸ್ ಆಗುತ್ತಿದೆಯಂತೆ!
ವಿರಾಟ್ ಕೊಹ್ಲಿ ಅವರಿಗೆ ಲಾಸ್...
ಹೌದು, ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಬಗ್ಗೆ ದೊಡ್ಡದಾಗಿ ಚರ್ಚೆ ಶುರುವಾಗಿದೆ. ವಿರಾಟ್ ಕೊಹ್ಲಿ ಅವರ ಒಂದು ಬ್ಯಾಟ್ ತಯಾರಿಸೋಕೆ ಸುಮಾರು 50,000 ರೂಪಾಯಿ ಬೇಕಾಗುತ್ತದೆ. ಹೀಗಿದ್ದಾಗ ಚಹಲ್ ಸೇರಿದಂತೆ ಹಲವು ಆಟಗಾರರಿಗೆ, ಇದೇ ಕೊಹ್ಲಿ ಅವರು ಇದೀಗ ಬ್ಯಾಟ್ ಗಿಫ್ಟ್ ಮಾಡಿದ್ದಾರೆ ಎಂಬ ಫೋಟೋಸ್ ವೈರಲ್ ಆಗಿ ಚರ್ಚೆ ಜೋರಾಗಿದೆ. ಪ್ರತಿದಿನ ಈ ರೀತಿ 50,000 ರೂಪಾಯಿ ಬೆಲೆ ಬಾಳುವ ಬ್ಯಾಟ್ ಗಿಫ್ಟ್ ಆಗಿ ನೀಡುತ್ತಿದ್ದರೆ ವಿರಾಟ್ ಕೊಹ್ಲಿ ಅವರಿಗೆ ಲಾಸ್ ಆಗಲ್ವಾ? ಅನ್ನೋ ಪ್ರಶ್ನೆಯನ್ನು ಈಗ ಅಭಿಮಾನಿಗಳು ಕೇಳುತ್ತಿದ್ದಾರೆ.












Click it and Unblock the Notifications