Virat Kohli: ವಿರಾಟ್ ಕೊಹ್ಲಿ ಕ್ರಿಕೆಟ್ ಬಿಟ್ಟು ಫುಟ್‌ಬಾಲ್ ಕಡೆ ಹೋರಟರಾ? ವಿಡಿಯೋ ನೋಡಿ!
ವಿರಾಟ್ ಕೊಹ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ನಿಂತರೆ ಥೇಟ್ ಮಷಿನ್ ರೀತಿಯಲ್ಲೇ ಆಟ ಆಡ್ತಾರೆ. ಯಾವುದೇ ಬಾಲ್ ಬಂದರೂ ವಿರಾಟ್ ಕೊಹ್ಲಿ ಅದನ್ನ ಬಾರಿಸದೆ ಬಿಡುವುದಿಲ್ಲ. ತಮ್ಮದೇ ಸ್ಟೈಲ್ ಮತ್ತು ಸ್ಮೈಲ್ ಮೂಲಕ ಬೌಲರ್ ಹಾಕುವ ಬಾಲ್‌ಗೆ ಒಂದು ಗತಿ ಕಾಣಿಸುತ್ತಾರೆ. ಆದ್ರೆ ವಿರಾಟ್ ಕೊಹ್ಲಿ ಫುಟ್‌ಬಾಲ್ ಆಡುವುದನ್ನ ನೋಡಿದ್ದೀರಾ? ಮೆಸ್ಸಿ & ರೊನಾಲ್ಡೋ ಕೂಡ ವಿರಾಟ್ ಕೊಹ್ಲಿ ಮುಂದೆ ಡಮ್ಮಿ ಅನಿಸುತ್ತಾರೆ, ಆ ವಿಡಿಯೋ ನೋಡಲು ಮುಂದೆ ಓದಿ.
ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಮಾತ್ರವಲ್ಲ ಕನ್ನಡಿಗರ ಪಾಲಿಗೂ ರನ್ ಮಷಿನ್. 16 ವರ್ಷದಿಂದ ಕನ್ನಡಿಗರ ಆರ್‌ಸಿಬಿ ತಂಡಕ್ಕೆ ಆಟ ಆಡುತ್ತಿರುವ ವಿರಾಟ್ ಕೊಹ್ಲಿ, ನೂರಾರು ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡು ಅಬ್ಬರಿಸುತ್ತಿದ್ದಾರೆ. ಜೊತೆಗೆ, ವಿರಾಟ್ ಕೊಹ್ಲಿ ಫುಟ್‌ಬಾಲ್ ಆಟದಲ್ಲೂ ಪಂಟರ್ ಅನ್ನೋದು ನಿಮಗೆ ಗೊತ್ತಾ? ಫುಟ್‌ಬಾಲ್ ಸಿಕ್ಕರೆ ಸಾಕು ಕ್ರಿಕೆಟ್ ಆಟಕ್ಕಿಂತ ಸಲೀಸಾಗಿ ಆಡುತ್ತಾರೆ ವಿರಾಟ್ ಕೊಹ್ಲಿ. ಹೀಗೆ ವಿರಾಟ್ ಕೊಹ್ಲಿ ಫುಟ್‌ಬಾಲ್ ಆಡುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದರಲ್ಲೂ ಫುಟ್‌ಬಾಲ್‌ನ ತರಗೆಲೆ ರೀತಿ ಕೊಹ್ಲಿ ಆಡಿಸುವುದು ಅಭಿಮಾನಿ ಬಳಗಕ್ಕೆ ಇಷ್ಟ ಆಗುತ್ತಿದೆ. ವಿಡಿಯೋ ಮುಂದೆ ಇದೆ ನೋಡಿ.

ವಿರಾಟ್ ಕೊಹ್ಲಿ ಫುಟ್‌ಬಾಲ್ ಪಂಟರ್!
ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ನಿಂತರೆ ಮುಗಿಯಿತು ರನ್ ಹೊಳೆ ಗ್ಯಾರಂಟಿ. ಆಗಲೋ ಈಗಲೋ ಒಮ್ಮೆಮ್ಮೊ ಕೊಹ್ಲಿ ಬೇಗನೆ ಔಟಾಗಿ ತೆರಳಿದ್ದಾರೆ. ಇದನ್ನ ಬಿಟ್ಟು ವಿರಾಟ್‌ಗೆ ವಿರಾಟ್ ಅವರೇ ಸಾಟಿ ಎಂಬಂತೆ ಬ್ಯಾಟ್ ಬೀಸ್ತಾರೆ ನಮ್ಮ ಕೊಹ್ಲಿ. ಅದ್ರಲ್ಲೂ ಕೊಹ್ಲಿ ತಮ್ಮ ಹೆಸರಲ್ಲಿ ಬರೆದುಕೊಂಡಿರುವ ಈ ದಾಖಲೆಗಳ ಮೀರಿಸುವುದು ಬಿಡಿ, ಅದರ ಹತ್ತಿರಕ್ಕೆ ಕೂಡ ಸುಳಿಯಲು ಆಗುವುದಿಲ್ಲ. ಇಂತಿಪ್ಪ ಕೊಹ್ಲಿ ಅವರು ಫುಟ್‌ಬಾಲ್ ಹೆಂಗೆ ಆಡ್ತಾರೆ ಗೊತ್ತಾ?
ಸಾಕಷ್ಟು ಸಮಯ ಫುಟ್‌ಬಾಲ್ ಆಟ!
ಈ ವಿಡಿಯೋ ನೋಡಿದ್ರಲ್ಲ, ಇದು ಝಲಕ್ ಮಾತ್ರ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಆಟದಲ್ಲಿ ಮಾತ್ರವಲ್ಲ ಫುಟ್‌ಬಾಲ್ ಆಟದಲ್ಲೂ ಪಂಟರ್ ಅನ್ನೋದು ಈ ವಿಡಿಯೋಗಳಿಂದ ಗೊತ್ತಾಗುತ್ತೆ ಎನ್ನಬಹುದು. ಯಾಕಂದ್ರೆ ವಿರಾಟ್ ಕೊಹ್ಲಿ ತಮ್ಮ ಅಭ್ಯಾಸದ ವೇಳೆ ಸಾಕಷ್ಟು ಸಮಯವನ್ನು ಫುಟ್‌ಬಾಲ್ ಜೊತೆಯಲ್ಲೇ ಕಳೆಯುತ್ತಾರೆ. ಯಾಕಂದ್ರೆ ಫುಟ್‌ಬಾಲ್ ಮೂಲಕ ದೇಹ & ಮನಸ್ಸು ಆಕ್ಟಿವ್ ಆಗಿ ಇಟ್ಟುಕೊಳ್ಳಲು ಸುಲಭ ಅಂತ. ಹೀಗೆ ವಿರಾಟ್ ಕೊಹ್ಲಿ ಎಲ್ಲಾ ಆಟದಲ್ಲೂ ತಾವು ಎಷ್ಟು ಆಕ್ಟಿವ್ ಅನ್ನೋದನ್ನ ಪ್ರೂವ್ ಮಾಡುತ್ತಿದ್ದಾರೆ.












Click it and Unblock the Notifications