ವಿರಾಟ್ ಕೊಹ್ಲಿ ಭಾರತ ತಂಡದಿಂದ ಔಟ್? ಕಾರಣ ತಿಳಿಯಿರಿ

ವಿರಾಟ್ ಕೊಹ್ಲಿ 'ಕಿಂಗ್' ಎಂಬ ಪಟ್ಟ ಪಡೆದು, ಕ್ರಿಕೆಟ್ ಲೋಕದಲ್ಲಿ ಭರ್ಜರಿ ಸೌಂಡ್‌ ಕೂಡ ಮಾಡುತ್ತಿರುವ ಸಮಯದಲ್ಲೇ ಭೀಕರ ಆಘಾತ ಎದುರಾಗಿದೆ. 2024ರ ಟಿ20 ವಿಶ್ವಕಪ್ ಶುರು ಆದಾಗಿನಿಂದಲೂ ವಿರಾಟ್ ಕೊಹ್ಲಿ ನಿರಂತರ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಇದೀಗ ವಿರಾಟ್ ಕೊಹ್ಲಿ ಅವರನ್ನ ಭಾರತ ತಂಡದಿಂದ ಕೈಬಿಡುತ್ತಾರೆ? ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.

ವಿರಾಟ್ ಕೊಹ್ಲಿ ಬಗ್ಗೆ 2024ರ ಟಿ20 ವಿಶ್ವಕಪ್ ಆರಂಭದಲ್ಲಿ ಭಾರಿ ನಿರೀಕ್ಷೆ ಇತ್ತು. ಆದರೂ ಕೊಹ್ಲಿ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿ ಹೋಗಿದೆ. ಅದು ಬಿಡಿ ಕನಿಷ್ಠ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕೂಡ ನೀಡಿಲ್ಲ ವಿರಾಟ್ ಕೊಹ್ಲಿ. ಮೊದಲ ಪಂದ್ಯದಲ್ಲೇ, 1 ರನ್ ಗಳಿಸಿ ಔಟ್ ಆಗಿದ್ದರು ವಿರಾಟ್ ಕೊಹ್ಲಿ. ಆ ನಂತರ ಪಾಕಿಸ್ತಾನ ತಂಡದ ವಿರುದ್ಧ ಕೇವಲ 4 ರನ್ ಗಳಿಸಿ ಪೆವಿಲಿಯನ್ ಗೂಡು ಸೇರಿದ್ದರು. ಹಾಗಾದ್ರೆ ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ಗಳಿಸಿರುವ ಒಟ್ಟು ರನ್ ಎಷ್ಟು ಗೊತ್ತೆ? ಮುಂದೆ ಓದಿ

Virat Kohli Fans Are Now Discussing About This Topic After Match Against Australia In T20 World Cup

ಡಕ್ ಔಟ್ ಮೂಲದ ಕೊಹ್ಲಿ ದಾಖಲೆ!

ಅಮೆರಿಕ ಟೀಂ ವಿರುದ್ಧ ಡಕ್ ಔಟ್ ಆಗಿ 0 ಸುತ್ತಿದ್ದ ವಿರಾಟ್ ಕೊಹ್ಲಿ, ಅಫ್ಘಾನಿಸ್ತಾನ ತಂಡದ ವಿರುದ್ಧ 24 ಬಾಲ್ ಆಡಿ 24 ರನ್ ಗಳಿಸಿದ್ದರು. ಇದನ್ನ ಬಿಟ್ಟರೆ ಬಾಂಗ್ಲಾದೇಶ ವಿರುದ್ಧ 37 ರನ್ ಗಳಿಸಿದ್ದರು. ಇಷ್ಟು ಬಿಟ್ಟು ಮತ್ತೆ ನಿನ್ನೆ ಆಸ್ಟ್ರೇಲಿಯಾ ತಂಡದ ವಿರುದ್ಧ ಡಕ್ ಔಟ್ ಆಗಿದ್ದಾರೆ ಕೊಹ್ಲಿ. ಒಟ್ಟಾರೆ ಟೂರ್ನಿಯಲ್ಲಿ ಕೇವಲ 66 ರನ್ ಗಳಿಸಿದ್ದಾರೆ ವಿರಾಟ್ ಕೊಹ್ಲಿ. ಹಾಗಾದರೆ, ವಿರಾಟ್ ಕೊಹ್ಲಿ ಅವರನ್ನ ಭಾರತ ತಂಡದಿಂದ ಹೊರಗೆ ಹಾಕುತ್ತಾರಾ? ಮುಂದೆ ಓದಿ.

ನೋ ವೇ.. ಚಾನ್ಸೇ ಇಲ್ಲ!

ವಿರಾಟ್ ಕೊಹ್ಲಿ ಸರಿಯಾಗಿ ಆಡುತ್ತಿಲ್ಲ ಎಂಬ ಅಸಮಾಧಾನ ಸ್ಫೋಟವಾಗಿದೆ ನಿಜ, ಆದರೆ ಇಷ್ಟು ಬೇಗ ಗಂಭೀರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ. ಯಾಕಂದ್ರೆ ವಿರಾಟ್ ಕೊಹ್ಲಿ ಸಾಕಷ್ಟು ದೊಡ್ಡ ಸಾಧನೆ ಮಾಡಿದ್ದಾರೆ. ಹೀಗಾಗಿ ಕೊಹ್ಲಿ ಒಂದೆರಡು ಮ್ಯಾಚ್ ಆಡದಿದ್ದರೆ ಅದು ಲೆಕ್ಕಕ್ಕೆ ಬರುವುದಿಲ್ಲ. ಹೀಗಾಗಿ ವಿರಾಟ್ ಕೊಹ್ಲಿಗೆ ಮತ್ತಷ್ಟು ಅವಕಾಶ ಸಿಗಬಹುದೆಂಬ ನಿರೀಕ್ಷೆ ಇದೆ. ವಿರಾಟ್ ಕೊಹ್ಲಿ ಅಭಿಮಾನಿಗಳು ಕೂಡ ಈ ಬಗ್ಗೆ ಚಿಂತನೆ ನಡೆಸುವಂತಾಗಿದೆ. ಯಾಕಂದ್ರೆ ಕೊಹ್ಲಿ ಬಗ್ಗೆ ಅಭಿಮಾನಿಗಳು ನೂರಾರು ಕನಸು ಕಟ್ಟಿಕೊಂಡಿದ್ದರು.

ಸೇಡು ತೀರಿಸಿಕೊಂಡ ಭಾರತ ತಂಡ

ಆಸ್ಟ್ರೇಲಿಯಾ ವಿರುದ್ಧ ನಿನ್ನೆ ಭಾರತ ತಂಡ ಗೆದ್ದು ಬೀಗಿದ್ದು, ಈ ಮೂಲಕ 2023 ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ. ಆಸ್ಟ್ರೇಲಿಯಾ ತಂಡ ಸೆಮಿಫೈನಲ್‌ಗೆ ಹೋಗಲು ನಿನ್ನೆ ಭಾರತ ತಂಡದ ವಿರುದ್ಧ ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಆದ್ರೆ ಭಾರತದ ಆಟಗಾರರು ಆಸಿಸ್ ಪಡೆಯನ್ನ ಬಗ್ಗುಬಡಿದು, ಆಸ್ಟ್ರೇಲಿಯಾ ತಂಡವನ್ನು ಮನೆಗೆ ಕಳುಹಿಸಿದ್ದಾರೆ. ಈ ಮೂಲಕ ದುರ್ಬಲ ಅಫ್ಘಾನಿಸ್ತಾನ ಸೆಮಿಫೈನಲ್‌ಗೆ ತಲುಪಿದ್ದು ದಕ್ಷಿಣ ಆಫ್ರಿಕಾ ವಿರುದ್ಧ ಮ್ಯಾಚ್ ಆಡಲಿದೆ. ಹೀಗಾಗಿ ಇಡೀ ಕ್ರಿಕೆಟ್ ಜಗತ್ತು ಈಗ ಅಮೆರಿಕದ ಮೇಲೆ ಕಣ್ಣಿಟ್ಟು ಕೂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+