Virat Kohli: ಇನ್‌ಸ್ಟಾಗ್ರಾಂನಲ್ಲಿ ನಟಿಯ ಫೋಟೊಗೆ ಲೈಕ್; ಸ್ಪಷ್ಟನೆ ಕೊಟ್ಟ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದಾ ಕ್ರಿಕೆಟ್‌ನಲ್ಲಿ ಮಾಡುವ ಸಾಧನೆಗಳಿಂದ ಸುದ್ದಿಯಲ್ಲಿರುವ ಅವರು ಈ ಬಾರಿ ಒಂದು ಫೋಟೊ ಲೈಕ್ ಮಾಡುವ ವ್ಯಾಪಕ ಸುದ್ದಿಯಾಗಿದ್ದಾರೆ. ನಟಿ ಅವನೀತ್ ಕೌರ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೊಗೆ ಕೊಹ್ಲಿ ಲೈಕ್ ಮಾಡಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡಿದೆ.
ವಿರಾಟ್ ಕೊಹ್ಲಿ ಲೈಕ್ ಮಾಡಿದ ಸ್ಕ್ರೀನ್‌ಶಾಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಂಡ ನಂತರ, ಸ್ವತಃ ವಿರಾಟ್ ಕೊಹ್ಲಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಫೋಟೊವನ್ನು ಆಕಸ್ಮಿಕವಾಗಿ ಲೈಕ್ ಮಾಡಿದ್ದು ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅತ್ಯಂತ ಪ್ರೀತಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರಾಗಿದ್ದರೂ, ವಿರಾಟ್ ಕೊಹ್ಲಿಯವರು ಅವನೀತ್ ಕೌರ್ ಅವರ ಫೋಟೊಗೆ ಲೈಕ್ ಮಾಡಿದ್ದು ವ್ಯಾಪಕ ಚರ್ಚೆಗೆ ಕಾರಣವಾಯಿತು. ಏಪ್ರಿಲ್ 30 ರಂದು, ಅವನೀತ್ ಕೌರ್ ಇನ್ಸ್ಟಾಗ್ರಾಮ್ನಲ್ಲಿ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ, ಅವರು ಮುದ್ರಿತ ಹೊದಿಕೆಯ ಸ್ಕರ್ಟ್ ಜೊತೆ ಹಸಿರು ಕ್ರಾಪ್ ಟಾಪ್ ಧರಿಸಿದ್ದಾರೆ.
ಆದರೆ ವಿರಾಟ್ ಕೊಹ್ಲಿ ಲೈಕ್ ಮಾಡಿದ್ದಾರೆ ಎನ್ನುವ ಸುದ್ದಿಯ ಬಳಿಕ ಈ ಫೋಟೊ ವ್ಯಾಪಕವಾಗಿ ವೈರಲ್ ಆಗಿದೆ. ಬಳಿಕ ವಿರಾಟ್ ಕೊಹ್ಲಿ ಲೈಕ್ ಮಾಡಿದ್ದನ್ನು ಅಳಿಸಿದ್ದರೂ, ಅದರ ಸ್ಕ್ರೀನ್‌ಶಾಟ್ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿತು. ಜನ ವಿರಾಟ್ ಕೊಹ್ಲಿ ಲೈಕ್ ಮಾಡಿದ್ದನ್ನು ನೋಡಿ ಅಚ್ಚರಿ ಪಟ್ಟರು. ವಿವಿಧ ಮೀಮ್‌ಗಳು ಕೂಡ ಗಮನ ಸೆಳೆದವು.
ಕೊಹ್ಲಿ ಅಭಿಮಾನಿಯೊಬ್ಬರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅಕಾಯ್ ಪುಟ್ಟ ಅಪ್ಪನಿಗೆ ಫೋನ್ ಕೊಡು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮಗ ಅಕಾಯ್ ಎನ್ನುವುದು ಅಭಿಮಾನಿಗಳಿಗೆ ತಿಳಿದಿರುವ ಸಂಗತಿಯೇ.
ಇದೀಗ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದು ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ. "ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಾಗಿ ಸಂವಹನವನ್ನು ನೋಂದಾಯಿಸಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡಬಾರದೆಂದು ನಾನು ವಿನಂತಿಸುತ್ತೇನೆ." ಎಂದು ಹೇಳಿದ್ದಾರೆ.
ಮೇ 1ರಂದು ವಿರಾಟ್ ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದಂದು ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದ್ದರು. ಅನುಷ್ಕಾ ಜೊತೆಗಿನ ಫೋಟೊ ಹಂಚಿಕೊಂಡಿದ್ದ ಅವರು, "ನನ್ನ ಆತ್ಮೀಯ ಸ್ನೇಹಿತೆ, ನನ್ನ ಜೀವನ ಸಂಗಾತಿ, ನನ್ನ ಆತ್ಮೀಯ ಅರ್ಧಾಂಗಿ, ನನಗೆ ಎಲ್ಲವೂ. ನೀನು ನಮ್ಮೆಲ್ಲರ ಜೀವನದ ಮಾರ್ಗದರ್ಶಕ ಬೆಳಕು. ನಾವು ಪ್ರತಿದಿನ ನಿನ್ನನ್ನು ತುಂಬಾ ಪ್ರೀತಿಸುತ್ತೇವೆ. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಅನುಷ್ಕಾ ಶರ್ಮಾ" ಎಂದು ಪೋಸ್ಟ್ ಮಾಡಿದ್ದರು.












Click it and Unblock the Notifications