ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಅಂತಾ... Virat Kohli

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಅಂತಾ ಕನ್ನಡಿಗರ ಹೃದಯ ಬಡಿದುಕೊಳ್ಳುತ್ತೆ. ಯಾಕೆ ಅಂದ್ರೆ ಕನ್ನಡಿಗರ ರಕ್ತದ ಜೊತೆಗೆ 'ಆರ್‌ಸಿಬಿ' ಬೆರೆತು ಹೋಗಿದೆ. ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಇರುವಷ್ಟು ಬೆಂಬಲ ಬೇರೆ ಯಾವುದೇ ತಂಡಕ್ಕೂ ಇಡೀ ಜಗತ್ತಿನಲ್ಲಿ ಸಿಕ್ಕಿಲ್ಲ ಎನ್ನಬಹುದು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟಿರುವ ವಿರಾಟ್ ಕೊಹ್ಲಿ ಅವರ ಬಗ್ಗೆ ಸ್ಫೋಟಕ ಸುದ್ದಿಯೊಂದು ಹಬ್ಬಿದ್ದು, ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಅಂತಾ...

ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದು 2008 ರಲ್ಲಿ ಅಲ್ಲಿಂದ ಇಲ್ಲಿ ತನಕ ಕೊಹ್ಲಿ ಅವರ ಹೆಸರಲ್ಲಿ ನೂರಾರು ದಾಖಲೆ ಸೇರ್ಪಡೆ ಆಗಿವೆ. ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ಅವರು ಫುಲ್ ಶೈನಿಂಗ್ ಸ್ಟಾರ್ ಆಗಿದ್ದಾರೆ. ಫುಟ್‌ಬಾಲ್ ದೊರೆ ಕ್ರಿಸ್ಟಿಯಾನೋ ರೊನಾಲ್ಡೋ ಕೂಡ ವಿರಾಟ್ ಕೊಹ್ಲಿ ಅವರ ಅಭಿಮಾನಿ ಅಂತಾ ಹೇಳುತ್ತಾರೆ & ರೊನಾಲ್ಡೋ ಕೂಡ ಕೊಹ್ಲಿ ಅವರನ್ನು ತುಂಬಾ ಇಷ್ಟಪಡುತ್ತಾರೆ. ಹೀಗೆಲ್ಲಾ ವಿರಾಟ್ ಕೊಹ್ಲಿ ಅವರು ನೂರಾರು ಕೋಟಿ ಜನರ ಆರಾಧ್ಯ ದೈವ ಆಗಿರುವ ಸಮಯದಲ್ಲೇ ನಿವೃತ್ತಿ ಘೋಷಣೆ ಅಂತಾ ಸ್ಫೋಟಕ...

Virat Kohli And Rohit Sharma Names Are On Trend After India Lost Against Australia In 5th Test Match

ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ...

ಹೌದು, ಆಸ್ಟ್ರೇಲಿಯಾದ ವಿರುದ್ಧ ಭಾರತ 20 ವರ್ಷಗಳ ಸುದೀರ್ಘ ಇತಿಹಾಸದ ನಂತರವೇ ಬಾರ್ಡರ್ & ಗವಾಸ್ಕರ್ ಟ್ರೋಫಿ ಸೋತಿದೆ. ಇದೇ ಸಮಯದಲ್ಲಿ ಭಾರಿ ಆಕ್ರೋಶ ಕೂಡ ಈಗ ಮೊಳಗಿದ್ದು, ಭಾರತದ ಕ್ರಿಕೆಟ್ ಅಭಿಮಾನಿಗಳು ಈ ಸೋಲು ಕಂಡು ತೀವ್ರ ಆಘಾತಕ್ಕೆ ಕೂಡ ಒಳಗಾಗಿದ್ದಾರೆ. ಇಂತಹ ಸಮಯದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಈಗ ಹಬ್ಬಿದೆ.

ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ & ಗವಾಸ್ಕರ್ ಟ್ರೋಫಿಯ 5ನೇ ಟೆಸ್ಟ್ ಪಂದ್ಯ ಸೋತ ನಂತರ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಅಂತಾ ಸುದ್ದಿ ಹಬ್ಬಿಸಲಾಗಿದೆ. ಈ ಕಾರಣಕ್ಕೆ ಸಾಕಷ್ಟು ಗೊಂದಲ ಕೂಡ ಶುರುವಾಗಿದ್ದು, ವಿರಾಟ್ ಕೊಹ್ಲಿ ಅವರ ಅಭಿಮಾನಿ ಬಳಗ ಕೂಡ ಟೆನ್ಷನ್ ಆಗಿದೆ. ಆದರೆ ಇದುವರೆಗೂ ಆ ರೀತಿಯಾಗಿ ಯಾವುದೇ ಅಧಿಕೃತವಾದ ಸುದ್ದಿ ಹೊರಗೆ ಬಿದ್ದಿಲ್ಲ. ಹೀಗಾಗಿ, ಈ ಪ್ರಶ್ನೆಗೆ ಉತ್ತರ ಹುಡುಕಲು ಕಾದು ನೋಡಬೇಕಿದೆ. ಈ ನಡುವೆ ಆಸ್ಟ್ರೇಲಿಯಾ ವಿರುದ್ಧದ ಸೋಲು ವಿರಾಟ್ ಕೊಹ್ಲಿ ಅವರಿಗೂ ಸಾಕಷ್ಟು ನೋವು ತರಿಸಿದೆ.

ಕೊಹ್ಲಿ ಇನ್ನೂ ಹಲವು ವರ್ಷ ಆಡ್ತಾರೆ!

ಒಟ್ನಲ್ಲಿ ಭಾರತ ಕ್ರಿಕೆಟ್ ಲೋಕದ ವಜ್ರ ಅಂತಾ ಹೆಸರು ಪಡೆದಿರುವ ವಿರಾಟ್ ಕೊಹ್ಲಿ ಅವರು ಇನ್ನೂ ಹಲವು ವರ್ಷಗಳ ಕಾಲ ಭಾರತ ತಂಡಕ್ಕಾಗಿ ಆಡಬೇಕು ಅನ್ನೋದು ಅಭಿಮಾನಿಗಳ ಆಶಯ. ಹಾಗೇ ಈ ಆಸೆ ಈಡೇರುವುದು ಗ್ಯಾರಂಟಿ ಅಂತಾರೆ ತಜ್ಞರು. ಯಾಕಂದ್ರೆ ವಿರಾಟ್ ಕೊಹ್ಲಿ ಅವರು ಈಗಲೂ ಫಿಟ್ ಆಗಿಯೇ ಇದ್ದು, ಒಂದಷ್ಟು ಫಾರ್ಮ್‌ಗೆ ಮರಳಿದರೆ ಮತ್ತೆ ಮ್ಯಾಜಿಕ್ ಗ್ಯಾರಂಟಿ. ಮತ್ತೊಂದು ಕಡೆ ಐಪಿಎಲ್ ಕೂಡ ಬರುತ್ತಿದ್ದು, ಆರ್‌ಸಿಬಿ ಅಭಿಮಾನಿ ಬಳಗ ಕೂಡ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಲು ಕಾಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+