Virat Kohli: ಗಂಡು ಮಗುವಿನ ತಂದೆಯಾದ ವಿರಾಟ್ ಕೊಹ್ಲಿ; ಮಗುವಿನ ಹೆಸರು ಏನು ಗೊತ್ತಾ?

ವಿರಾಟ್ ಕೊಹ್ಲಿ ಗಂಡು ಮಗುವಿನ ತಂದೆಯಾಗಿದ್ದಾರೆ. ನಟಿ ಅನುಷ್ಕಾ ಶರ್ಮಾ ಫೆಬ್ರವರಿ 15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಇಬ್ಬರೂ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ದಂಪತಿಗಳು ಮಗುವಿಗೆ "ಅಕಾಯ್" ಎಂದು ಹೆಸರಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದು, "ನಮ್ಮ ಹೃದಯಗಳು ಸಮೃದ್ಧ, ಸಂತೋಷ ಮತ್ತು ಪ್ರೀತಿಯಿಂದ ತುಂಬಿವೆ, ಫೆಬ್ರವರಿ 15 ರಂದು, ನಾವು ನಮ್ಮ ಮಗು ಅಕಾಯ್ ಮತ್ತು ವಾಮಿಕಾ ಅವರ ಚಿಕ್ಕ ಸಹೋದರನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ!" ಎಂದು ಹೇಳಿದ್ದಾರೆ.

 Virat Kohli and Anushka Sharma Welcome Baby Boy, Named Akaay

"ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇವೆ. ಈ ಸಮಯದಲ್ಲಿ ದಯೆಯಿಂದ ನಮ್ಮ ಗೌಪ್ಯತೆಯನ್ನು ಗೌರವಿಸುವಂತೆ ನಾವು ವಿನಂತಿಸುತ್ತೇವೆ" ಎಂದು ವಿರಾಟ್ ಮತ್ತು ಅನುಷ್ಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಜವಾದ ಊಹಾಪೋಹಗಳು

ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು. ಎಲ್ಲಿದ್ದಾರೆ, ಯಾಕಾಗಿ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಹಲವು ಬಾರಿ ಅವರು ತಂದೆಯಾಗುತ್ತಿರುವ ಕಾರಣ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿತ್ತಾದರೂ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ಇರಲಿಲ್ಲ. ಈಗ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದ್ದು ಸ್ವತಃ ವಿರುಷ್ಕಾ ದಂಪತಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+