Virat Kohli: ಎಲ್ಲರೂ ಅನಂತ್ ಅಂಬಾನಿ ಮದುವೆಯಲ್ಲಿದ್ದಾಗ ವಿರಾಟ್ ಕೊಹ್ಲಿ ಏನ್ ಮಾಡ್ತಿದ್ದಾರೆ ನೋಡಿ!
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ದೂರಿ ಮದುವೆ ಸಮಾರಂಭದಲ್ಲಿ ಭಾರತ ಕ್ರಿಕೆಟ್ ಆಟಗಾರರು, ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರಮುಖ ನಟ ನಟಿಯರೆಲ್ಲ ಭಾಗವಹಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಇದೆಲ್ಲದರಿಂದ ದೂರ ಉಳಿದಿದ್ದಾರೆ.
ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಬಂದ ಕೊಹ್ಲಿ, ಇಲ್ಲಿ ಸಂಭ್ರಮಾಚರಣೆ ಮುಗಿಯುತ್ತಿದ್ದಂತೆ ಲಂಡನ್‌ಗೆ ಹಾರಿದ್ದರು. ಪತ್ನಿ ಅನುಷ್ಕಾ ಮತ್ತು ಮಕ್ಕಳ ಜೊತೆ ಅವರು ಸಮಯ ಕಳೆಯುತ್ತಿದ್ದಾರೆ. ಅಂಬಾನಿ ಮದುವೆಯಲ್ಲಿ ಸಿನಿಮಾ ತಾರೆಯರು, ಕ್ರಿಕೆಟಿಗರು ಸಂಭ್ರಮಿಸುತ್ತಿರುವಾಗ ಕೊಹ್ಲಿ ಮಾತ್ರ ದೇವರ ಧ್ಯಾನದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್ ರಜೆಯ ಸಮಯದಲ್ಲಿ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ವೈರಲ್ ವೀಡಿಯೊದಲ್ಲಿ, ಇಬ್ಬರೂ ಕೃಷ್ಣ ದಾಸ್ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ನೋಡಬಹುದು.
ರೆಡ್ಡಿಟ್ ಬಳಕೆದಾರರು ವೀಡಿಯೊದಲ್ಲಿ ಕಾಮೆಂಟ್ ಮಾಡಿದ್ದು, ಎಲ್ಲಾ ಇತರ ಸೆಲೆಬ್ರಿಟಿಗಳು ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಮದುವೆಯ ಸಂಭ್ರಮದಲ್ಲಿ ಭಾಗವಹಿಸಿದ್ದರೆ ವಿರುಷ್ಕಾ ದಂಪತಿ ಮಾತ್ರ ತಮ್ಮದೇ ಆದ ಆಯ್ಕೆಗಳನ್ನು ಮಾಡಿದ್ದಾರೆ ಹೊಗಳಿದ್ದಾರೆ.
ದೇವರ ಭಜನೆ ಕೇಳುತ್ತಿರುವ ದಂಪತಿ
ವೀಡಿಯೊದಲ್ಲಿ ವಿರಾಟ್ ಮತ್ತು ಅನುಷ್ಕಾ ಭಜನೆಯಲ್ಲಿ ಚಪ್ಪಾಳೆ ತಟ್ಟುವುದನ್ನು ಮತ್ತು ಹುರಿದುಂಬಿಸುವುದನ್ನು ಕಾಣಬಹುದು, ಅಮೇರಿಕನ್ ಗಾಯಕ ಕೃಷ್ಣ ದಾಸ್ ಪ್ರೇಕ್ಷಕರನ್ನು ಕೈ ಜೋಡಿಸಿ ಸ್ವಾಗತಿಸುತ್ತಾರೆ.
ವಿರಾಟ್ ಕೊಹ್ಲಿ ಕಳೆದ ಕೆಲವು ವರ್ಷಗಳಿಂದ ಆಧ್ಯಾತ್ಮಿಕತೆಯತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿದಾಗಲೂ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಕಾಲ ಕಳೆದಿದ್ದರು. ಭಾರತದಲ್ಲಿದ್ದಾಗ ಸಮಯ ಸಿಕ್ಕಾಗಲೆಲ್ಲ ಕೊಹ್ಲಿ ದಂಪತಿ ಮತ್ತು ಮಕ್ಕಳ ಜೊತೆ ಹಲವು ದೇವಸ್ಥಾನಗಳಿಗೆ ಭೇಟಿ ಕೊಡುತ್ತಾರೆ.
Virat Kohli and Anushka Sharma both enjoying spiritual vibes at the Kirtan in London.
— Tanuj Singh (@ImTanujSingh) July 14, 2024
- This is Beautiful. ❤️pic.twitter.com/LBsb4A154k
ಲಂಡನ್‌ನಲ್ಲೇ ನೆಲೆಸುತ್ತಾರಾ ಕೊಹ್ಲಿ?
ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ವಿರಾಟ್ ಕೊಹ್ಲಿ ಭಾರತವನ್ನು ತೊರೆದು ಲಂಡನ್‌ನಲ್ಲೇ ನೆಲೆಸುತ್ತಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಲಂಡನ್‌ನಲ್ಲಿ ಒಬ್ಬನೇ ಸಾಮಾನ್ಯ ಮನುಷ್ಯನಂತೆ ಓಡಾಡಬಹುದು, ಅದು ನನಗೆ ತುಂಬಾ ಇಷ್ಟ ಎಂದು ವಿರಾಟ್ ಕೊಹ್ಲಿ ಈ ಮೊದಲು ಸಂದರ್ಶನವೊಂದರಲ್ಲಿ ಹೇಳಿದ್ದರು. ಭಾರತದಲ್ಲಿ ಅವರು ಹಾಗೆ ಮಾಡಲು ಆಗುವುದಿಲ್ಲ, ಎಲ್ಲೇ ಹೋದರು ಅವರ ಹಿಂದೆ ಅಭಿಮಾನಿಗಳ ದಂಡೇ ಇರುತ್ತದೆ.
ತಮ್ಮ ಎರಡನೇ ಮಗುವಿಗಾಗಿ ಕೂಡ ಕೊಹ್ಲಿ-ಅನುಷ್ಕಾ ಲಂಡನ್‌ಗೆ ಹಾರಿದ್ದರು. ಸಮಯ ಸಿಕ್ಕಾಗಲೆಲ್ಲಾ ಕೊಹ್ಲಿ ಮತ್ತು ಕುಟುಂಬ ಲಂಡನ್‌ಗೆ ತೆರಳುತ್ತಿದೆ. ಇದನ್ನೆಲ್ಲಾ ಗಮನಿಸಿರುವ ಅಭಿಮಾನಿಗಳು ಕೊಹ್ಲಿ ಲಂಡನ್‌ನಲ್ಲಿ ನೆಲೆಸುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications