ಐಸಿಸಿ ವಿಶ್ವಕಪ್: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ‌ನಲ್ಲಿ ವಿರಾಟ್ ಕೊಹ್ಲಿ & ಅನುಷ್ಕಾ ರೋಮ್ಯಾನ್ಸ್!

ಕಿಂಗ್ ವಿರಾಟ್ ಕೊಹ್ಲಿ ಉತ್ತಮ ಕ್ರಿಕೆಟಿಗ ಮಾತ್ರವಲ್ಲ ಅತ್ಯುತ್ತಮ ಸಂಸಾರಸ್ಥನೂ ಹೌದು. ಯಾಕಂದರೆ ಪ್ರೀತಿಸಿ ಮದುವೆಯಾದ ಅನುಷ್ಕಾ ಶರ್ಮಾ ಅವರನ್ನು ತಮ್ಮ ಕಣ್ಣುಗಳಂತೆ ನೋಡಿಕೊಳ್ಳುತ್ತಾರೆ ಕೊಹ್ಲಿ. ಬಿಡುವೇ ಇಲ್ಲದ ಕ್ರಿಕೆಟ್ ಜೀವನದಲ್ಲಿ ಕುಟುಂಬಕ್ಕೆ ಸಾಕಷ್ಟು ಸಮಯ ನೀಡುತ್ತಾರೆ. ಹೀಗೆ ಇಬ್ಬರ ಲವ್‌ಗೆ ಅಭಿಮಾನಿ ಬಳಗವೂ ಫಿದಾ ಆಗಿದ್ದು, ಈಗ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಷ್ಕಾ & ರೊಮ್ಯಾನ್ಸ್ ಹೇಗಿತ್ತು ಗೊತ್ತಾ?

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನಡುವಿನ ಬಾಂಡಿಂಗ್ ಅತ್ಯುತ್ತಮವಾಗಿದ್ದು, ಇಬ್ಬರು ಒಬ್ಬರ ಬಗ್ಗೆ ಮತ್ತೊಬ್ಬರು ತರ್ಲೆ ಮಾಡುತ್ತಾ ಎಂಜಾಯ್ ಮಾಡ್ತಾರೆ. ಹೀಗಿದ್ರೂ ಇಬ್ಬರು ಕೋಪ ಮಾಡಿಕೊಳ್ಳುವುದಿಲ್ಲ. ಅದರಲ್ಲೂ ವಿರಾಟ್ ಕೊಹ್ಲಿ ಅವರ ಆಟದ ಬಗ್ಗೆ ಮತ್ತು ಆಗ್ರೆಸ್ಸಿವ್ ವರ್ತನೆ ಬಗ್ಗೆ ಆಗಾಗ ಅನುಷ್ಕಾ ಮಾತನಾಡುತ್ತಾರೆ. ಇದಿಷ್ಟೂ ಕೊಹ್ಲಿ, ಅನುಷ್ಕಾ ನಡುವಿನ ಬಾಂಡಿಂಗ್ ಆದ್ರೆ, ಇನ್ನು ಇಬ್ಬರ ನಡುವಿನ ರೊಮ್ಯಾನ್ಸ್ ಹೇಗಿರುತ್ತೆ ಗೊತ್ತಾ? ನಿನ್ನೆ ಇಡೀ ಜಗತ್ತೇ ನಮ್ಮ ಬೆಂಗಳೂರಿನಲ್ಲಿ ಅದನ್ನ ಕಣ್ತುಂಬಿಕೊಂಡಿದೆ.

virat-kohli-and-anushka-sharma-celebrates

ವಿರಾಟ್ & ಅನುಷ್ಕಾ ಕಣ್ ಕಣ್ಣ ಸಲಿಗೆ!

ಹೌದು, ನಿನ್ನೆ ವಿರಾಟ್ ಕೊಹ್ಲಿ ಅವರು ಅಪರೂಪಕ್ಕೆ ಬೌಲಿಂಗ್ ಮಾಡಿದರು. ಹಾಗೇ ಈ ವೇಳೆ ಪಕ್ಕಾ ಪ್ಲ್ಯಾನ್ ಮಾಡಿ ನೆದರ್ಲೆಂಡ್ಸ್ ಟೀಂ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರಿಗೆ ಖೆಡ್ಡ ತೋಡಿ ವಿಕೆಟ್ ಕಿತ್ತರು. ಹೀಗೆ ವಿರಾಟ್ ಕೊಹ್ಲಿ ವಿಕೆಟ್ ತೆಗೆದ ನಂತರ ಪೆವಿಲಿಯನ್‌ನಲ್ಲಿ ನಿಂತಿದ್ದ ಅನುಷ್ಕಾ ಶರ್ಮಾ ಸಖತ್ ಎಂಜಾಯ್ ಮಾಡಿದರು. ಗಂಡ ದಿಢೀರ್ ಎದುರಾಳಿ ತಂಡದ ವಿಕೆಟ್ ಉರುಳಿಸಿದ್ದು ಅನುಷ್ಕಾ ಅವರಿಗೂ ಖುಷಿ ನೀಡಿತ್ತು. ಆಗ ತನ್ನ ಸ್ನೇಹಿತೆ ಜೊತೆ ಸಂಭ್ರಮಿಸಿದರು, ಆಗ ವಿರಾಟ್ ಕೊಹ್ಲಿ ಪೆವಿಲಿಯನ್ ಎದುರು ನಿಂತು ಸೆಲೆಬ್ರೇಟ್ ಮಾಡಿ ಹೆಂಡತಿ ಅನುಷ್ಕಾ ಅವರಿಗೆ ಕಣ್ಣಿನ ಮೂಲಕವೇ ಮೆಸೇಜ್ ಕೊಟ್ಟರು.

ಬ್ಯಾಟಿಂಗ್ ಲೆಜೆಂಡ್ ಕೊಹ್ಲಿ ಬೌಲಿಂಗ್ ಸಾಧನೆ!

ಕೊಹ್ಲಿ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದು 2008ರಲ್ಲಿ ಆದ್ರೆ ಕೊಹ್ಲಿಗೆ ಮೊದಲನೆಯ ವಿಕೆಟ್ ಬಿದ್ದಿದ್ದು 2011 ರಲ್ಲಿ. ಆಗಿನ ಕಾಲಘಟ್ಟಕ್ಕೆ ಇಂಗ್ಲೆಂಡ್ ಟೀಂನ ಏಕದಿನ ಮಾದರಿ ಪಂದ್ಯಗಳಿಗೆ ನಾಯಕನಾಗಿದ್ದ ಅಲೆಸ್ಟರ್ ಕುಕ್ ಅವರ ವಿಕೆಟ್ ಉರುಳಿಸಿ ಗಮನ ಸೆಳೆದರು. ಇದಾದ ಬಳಿಕ ಅದೇ ವರ್ಷದಲ್ಲಿ ಅಂದ್ರೆ 2011 ರಲ್ಲಿ ಕ್ರೇಗ್ ಕೀಸ್ವೆಟರ್ ಅವರ ವಿಕೆಟ್ ಉರುಳಿಸಿದರು. ನಂತರ ದಕ್ಷಿಣ ಆಫ್ರಿಕಾ ತಂಡದ ದಾಂಡಿಗ, ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಉರುಳಿಸಿದರು. ಇನ್ನು ಅದೇ ವರ್ಷದಲ್ಲಿ ಅಂದ್ರೆ 2014 ರಲ್ಲಿ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ವಿಕೆಟ್‌ನ ಉರುಳಿಸಿ ದಾಖಲೆ ಬರೆದರು.

2014 ರಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ವಿಕೆಟ್‌ ಉರುಳಿಸಿದ ನಂತರ, ನಿನ್ನೆ ನೆದರ್ಲೆಂಡ್ಸ್ ಟೀಂನ ನಾಯಕ ಸ್ಕಾಟ್ ಎಡ್ವರ್ಡ್ಸ್ ಪಾಲಿಗೂ ವಿಲನ್ ಆಗಿದ್ದರು. ಕನ್ನಡಿಗರ ನೆಚ್ಚಿನ ಆಟಗಾರ, ಹಾಗೂ ಶತಕೋಟಿ ಭಾರತೀಯರ ವೀರ ವಿರಾಟ್ ಕೊಹ್ಲಿ ನಿನ್ನೆ 17 ರನ್ ಗಳಿಸಿದ್ದ ನೆದರ್ಲೆಂಡ್ಸ್ ಟೀಂ ನಾಯಕ ಸ್ಕಾಟ್ ಎಡ್ವರ್ಡ್ಸ್ ವಿಕೆಟ್ ಬೀಳಿಸಿದರು. ಈ ಮೂಲಕ 9 ವರ್ಷ ನಂತರ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ವಿಕೆಟ್ ಕಬಳಿಸಿ ಗಮನ ಸೆಳೆದರು. ಇದೇ ವೇಳೆ ಗಂಡ & ಹೆಂಡತಿ ಪ್ರೀತಿ ಹಂಚಿಕೋಂಡರು.

ಒಟ್ನಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮತ್ತೊಮ್ಮೆ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಹಾಗೇ ಅಭಿಮಾನಿಗಳು ಇಬ್ಬರ ಪ್ರೀತಿಗೆ ಯಾರ ದೃಷ್ಟಿಯೂ ಬೀಳದೆ ಇರಲಿ ಅಂತಾ ಹೇಳುತ್ತಿದ್ದಾರೆ. ಮತ್ತೊಂದು ಕಡೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಅವರ ಈ ಕಣ್ ಕಣ್ಣ ಸಲಿಗೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+