Virat Kohli: ಅಡಿಲೇಡ್‌ನಲ್ಲಿ ಕೊಹ್ಲಿಯೇ ಕಿಂಗ್; ಆಸ್ಟ್ರೇಲಿಯಾಗೆ ಶುರುವಾಯ್ತು ಹೊಸ ಭಯ!
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಟೆಸ್ಟ್ ಡಿಸೆಂಬರ್ 6ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಭಾರತ ಎರಡನೇ ಟೆಸ್ಟ್ ಗೆಲ್ಲುವ ವಿಶ್ವಾಸದಲ್ಲಿದೆ, ಮೊದಲ ಟೆಸ್ಟ್ ಸೋತಿರುವ ಆಸ್ಟ್ರೇಲಿಯಾ ಮತ್ತೆ ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ. ಅಡಿಲೇಡ್‌ನಲ್ಲಿ ಪಿಂಕ್ ಬಾಲ್ ಟೆಸ್ಟ್ ನಡೆಯುವ ಕಾರಣ ಹೊಸ ಸವಾಲುಗಳನ್ನು ಎದುರಿಸಲು ಎರಡೂ ತಂಡಗಳು ವಿಶೇಸ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಎರಡನೇ ಟೆಸ್ಟ್‌ಗೆ ಮುನ್ನ ಆಸ್ಟ್ರೇಲಿಯಾಗೆ ಹಲವು ಸಮಸ್ಯೆಗಳು ಎದುರಾಗಿದೆ. ಸ್ಟೀವ್ ಸ್ಮಿತ್ ಗಾಯಗೊಂಡಿದ್ದು ತಂಡದ ಆತಂಕ ಹೆಚ್ಚಿಸಿದೆ. ಸ್ಟೀವ್ ಸ್ಮಿತ್ ಅಡಿಲೇಡ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಭಾರತದ ಬಲಿಷ್ಠ ಬೌಲಿಂಗ್ ಪಡೆಯನ್ನು ಎದುರಿಸಲು ಸ್ಮಿತ್‌ರಂತಹ ಅನುಭವಿ ಬ್ಯಾಟರ್ ಗಳ ಅಗತ್ಯವಿದ್ದು, ಅವರು ಎರಡನೇ ಟೆಸ್ಟ್‌ಗೆ ಮುನ್ನ ಫಿಟ್ ಆದರೆ ಸಾಕು ಎನ್ನುವಂತಾಗಿದೆ.

ಆಸ್ಟ್ರೇಲಿಯಾ ಕಾಡುತ್ತಿರುವ ಮತ್ತೊಂದು ಭಯ ಎಂದರೆ ಅದು ವಿರಾಟ್ ಕೊಹ್ಲಿ. ಅಡಿಲೇಡ್‌ನಲ್ಲಿ ಪಂದ್ಯ ನಡೆಯುತ್ತಿರುವ ಕಾರಣ, ವಿರಾಟ್ ಕೊಹ್ಲಿ ಈಗ ಆಸ್ಟ್ರೇಲಿಯಾಗೆ ದೊಡ್ಡ ಸವಾಲಾಗಿದ್ದಾರೆ. ಅಡಿಲೇಡ್ ವಿರಾಟ್ ಕೊಹ್ಲಿಯವರ ನೆಚ್ಚಿನ ಕ್ರೀಡಾಂಗಣದಲ್ಲಿ ಒಂದು. ಇಲ್ಲಿ ಕೊಹ್ಲಿ ಮಾಡಿರುವ ದಾಖಲೆಯನ್ನು ಸ್ವತಃ ಆಸ್ಟ್ರೇಲಿಯಾ ಕ್ರಿಕೆಟಿಗರಿಗೂ ಮುರಿಯಲು ಸಾಧ್ಯವಾಗಿಲ್ಲ. ಆದ್ದರಿಂದಲೇ ಆಸ್ಟ್ರೇಲಿಯಾಗೆ ಕೊಹ್ಲಿ ಭಯ ಶುರುವಾಗಿದೆ.
ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾಗೆ ಬರುತ್ತಿದ್ದಂತೆ ಫಾರ್ಮ್ ಕಂಡುಕೊಂಡಿದ್ದಾರೆ. ಪರ್ತ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಮಿಂಚಿದ್ದಾರೆ. ಪರ್ತ್‌ನ ಪ್ರದರ್ಶನವನ್ನೇ ಅಡಿಲೇಡ್‌ನಲ್ಲು ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
ಪರ್ತ್ ಟೆಸ್ಟ್‌ನಲ್ಲಿ ತಮ್ಮ 30ನೇ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಈಗ ಅಡಿಲೇಡ್‌ನಲ್ಲಿ 31 ಶತಕ ಗಳಿಸುವ ವಿಶ್ವಾಸದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಕ್ರೀಡಾಂಗಣದಲ್ಲಿ ಕೊಹ್ಲಿ 116 ಗಳಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.
ಅಡಿಲೇಡ್‌ನಲ್ಲಿ ಕೊಹ್ಲಿ ಮಾಡಿರುವ ಸಾಧನೆಯನ್ನು ಸ್ವತಃ ಆಸ್ಟ್ರೇಲಿಯಾ ಆಟಗಾರರಿಗೂ ಮಾಡಲು ಸಾಧ್ಯವಾಗಿಲ್ಲ. ಅಡಿಲೇಡ್ ಮೈದಾನದಲ್ಲಿ ವಿರಾಟ್ ಕೊಹ್ಲಿ 11 ಪಂದ್ಯಗಳಲ್ಲಿ ಆಡಿದ್ದು 15 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 957 ರನ್ ಗಳಿಸಿದ್ದಾರೆ. 73.61 ಸರಾಸರಿ ಹೊಂದಿದ್ದು, 69.75 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅಡಿಲೇಡ್‌ನಲ್ಲಿ ಕೊಹ್ಲಿ ಈವರೆಗೂ 5 ಶತಕ ಮತ್ತು 4 ಅರ್ಧಶತಕ ಗಳಿಸಿದ್ದಾರೆ. 141ರನ್ ಇಲ್ಲಿ ಅವರು ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ.
ಅಡಿಲೇಡ್‌ನಲ್ಲಿ ಹೆಚ್ಚಿನ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 957 ರನ್ ಗಳಿಸಿರುವ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸ್ಟೀವ್ ಸ್ಮಿತ್ 932 ರನ್ ಗಳಿಸಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಗ್ರೆಗ್ ಚಾಪೆಲ್ 747 ರನ್, ಶೇನ್ ವ್ಯಾಟ್ಸನ್ 729 ರನ್ ಗಳಿಸಿದ್ದರೆ, ಆಡಮ್ ಗಿಲ್‌ಕ್ರಿಸ್ಟ್ 687 ರನ್ ಗಳಿಸಿದ್ದಾರೆ. ಇವರೆಲ್ಲಾ ಕೊಹ್ಲಿಗಿಂತ ಹೆಚ್ಚಿನ ಪಂದ್ಯಗಳಲ್ಲಿ ಆಡಿರುವುದು ವಿಶೇಷ.












Click it and Unblock the Notifications