VIRAT..55.. 5.. ವಿರಾಟ್ ಕೊಹ್ಲಿ ಹೆಸರು, ಏಕದಿನ ಶತಕಗಳ ಸಾಧನೆ ಹಾಗೂ ಅವರ ಜನ್ಮ ದಿನಕ್ಕಿದೆ ನಂಟು
Virat Kohli 5 Number Secret: ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ (ಸೆಪ್ಟೆಂಬರ್ 27) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಗೆಲುವಿಗೆ ವಿರಾಟ್ ಕೊಹ್ಲಿ, ನಾಯಕ ಶುಭ್‌ಮನ್ ಗಿಲ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಕುಲದೀಪ್ ಯಾದವ್ ಅವರ ಮಾರಕ ಬೌಲಿಂಗ್ ದಾಳಿ ಪ್ರಮುಖ ಪಾತ್ರವಹಿಸಿತು. ವಿಶೇಷ ಅಂದ್ರೆ ಇದೇ ವೇಳೆ ಕೊಹ್ಲಿ ಮಾಡಿದ 55ನೇ ODI ಶತಕದ ಸಾಧನೆಯು ಅವರ ಜನ್ಮದಿನಕ್ಕೆ ಹೋಲಿಕೆ ಆಗುವಂತಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಲು ಸಾಲು ದಾಖಲೆಗಳನ್ನು ಧೂಳೀಪಟ ಮಾಡುತ್ತಿರುವ ಕಿಂಗ್ ವಿರಾಟ್ ಕೊಹ್ಲಿ, ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಬಾರಿಸಿದ 55ನೇ ಏಕದಿನ ಶತಕದ ಮೂಲಕ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ. ಆದರೆ ಈ 55ನೇ ಏಕದಿನ ಶತಕಕ್ಕೂ ಕೊಹ್ಲಿಯ ಜನ್ಮ ದಿನದ ಸಂಖ್ಯೆಗೂ ಒಂದು ಅಚ್ಚರಿ ಹಾಗೂ ಅಪರೂಪದ ಸಂಖ್ಯಾಶಾಸ್ತ್ರದ ಸಂಪರ್ಕವಿದೆ ಎಂಬ ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಕೊಹ್ಲಿ ಹೆಸರು, ಜನನ, ಏಕದಿನ ಶತಕದ ಸಾಧನೆಗಿದೆ ನಂಟು
ವಿರಾಟ್ ಕೊಹ್ಲಿ ಅವರ ಜನನ ಸಂಖ್ಯೆ ಮತ್ತು ಅವರ 55ನೇ ಶತಕದ ನಡುವೆ ನಂಟಿದೆ. ಇದು ಅವರ ವೃತ್ತಿಜೀವನದಲ್ಲಿ ಶಕ್ತಿಶಾಲಿ ಆಟವನ್ನು ಸೂಚಿಸುವಂತಿದೆ. ವಿರಾಟ್ ಕೊಹ್ಲಿ ಅವರು 1988ರ ನವೆಂಬರ್ 5 ರಂದು ಜನಿಸಿದರು. ಅಷ್ಟೇ ಅಲ್ಲದೆ, 'VIRAT' ಎಂಬ ಹೆಸರಿನಲ್ಲೂ ಐದು ಅಕ್ಷರಗಳಿವೆ.
ಏಕದಿನ ಕ್ರಿಕೆಟ್‌ನಲ್ಲಿ 55ನೇ ಶತಕ
ಇದೀಗ ಅವರು ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದ 55ನೇ ಶತಕ ಪೂರೈಸುವ ಮೂಲಕ, ಎರಡು ಬಾರಿಯ '5'ರ ಸಂಖ್ಯೆಯನ್ನು (55) ತಲುಪಿದ್ದಾರೆ. ಮೂಲಾಂಕ 5, ಹೆಸರು 5 ಮತ್ತು ಶತಕದ ಸಂಖ್ಯೆ 55 ಸೇರಿದಾಗ ರೂಪುಗೊಳ್ಳುವ ಈ 'ಡಬಲ್-5' ಮಾದರಿಯು ಅತ್ಯಂತ ಅಪರೂಪದ ಸಂಯೋಜನೆಯಾಗಿದೆ.
ಸಂಖ್ಯಾಶಾಸ್ತ್ರ ಹೇಳುವುದೇನು?
ಸಂಖ್ಯಾಶಾಸ್ತ್ರದ ಪ್ರಕಾರ, 'ಸಂಖ್ಯೆ 5' ಅನ್ನು ಬುಧ ಗ್ರಹವು ಆಳುತ್ತದೆ. ಬುಧ ಗ್ರಹವು ಚುರುಕುತನ, ವೇಗ, ಕಾರ್ಯಕ್ಷಮತೆ, ಕ್ರೀಡಾ ಕೌಶಲ್ಯ ಹಾಗೂ ಅಸಾಧಾರಣ ಮಾನಸಿಕ ಶಕ್ತಿಯ ಸಂಕೇತವಾಗಿದೆ. ಮೂಲಾಂಕ 5 ಹೊಂದಿರುವ ವ್ಯಕ್ತಿಗಳು ಯಾವುದೇ ಕ್ಷೇತ್ರದಲ್ಲಿ ಸ್ಥಿರ ಪ್ರದರ್ಶನ ನೀಡಲು ಮತ್ತು ಕಷ್ಟದ ಸನ್ನಿವೇಶಗಳಿಂದ ತಕ್ಷಣ ಚೇತರಿಸಿಕೊಂಡು ಕಮ್ ಬ್ಯಾಕ್ ಮಾಡುವಲ್ಲಿ ಹೆಸರುವಾಸಿ.
ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದುದ್ದಕ್ಕೂ ತೋರಿಸಿದ ಕ್ರೀಡಾ ಸ್ಪೂರ್ತಿ ಹಾಗೂ ಶರವೇಗದ ರನ್ ಗಳಿಕೆಗೆ ಬುಧ ಗ್ರಹದ ಪ್ರಭಾವವೇ ಪ್ರಮುಖ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸಂಖ್ಯಾಶಾಸ್ತ್ರದ ಪ್ರಕಾರ, '5 ರಂತಹುದೇ ಶಕ್ತಿಯುತ ಸಂಖ್ಯೆ ದ್ವಿಗುಣಗೊಂಡಾಗ (55), ಆ ವ್ಯಕ್ತಿಯ ಆತ್ಮವಿಶ್ವಾಸ ಮತ್ತು ಯಶಸ್ಸಿನ ಗ್ರಾಫ್ ಉನ್ನತ ಮಟ್ಟಕ್ಕೇರುತ್ತದೆ.'
ಪ್ರಸ್ತುತ ಯಾವುದೇ ನಾಯಕತ್ವದ ಒತ್ತಡವಿಲ್ಲದೆ ಮುಕ್ತವಾಗಿ ಆಡುತ್ತಿರುವ ವಿರಾಟ್ ಕೊಹ್ಲಿಗೆ, ಈ 'ಡಬಲ್-5' ಯೋಗವು ಮುಂದಿನ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ಬೃಹತ್ ದಾಖಲೆಯನ್ನು ಮುರಿಯಲು ಹೆಚ್ಚಿನ ಶಕ್ತಿ ನೀಡಲಿದೆ ಎಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಮೈದಾನದಲ್ಲಿ ಕಿಂಗ್ ಕೊಹ್ಲಿ ಬ್ಯಾಟಿಂಗ್ ಸಾಮರ್ಥ್ಯ ಒಂದೆಡೆಯಾದರೆ, ಅವರ ಜನನ ಸಂಖ್ಯೆ ಮತ್ತು ಶತಕದ ನಡುವಿನ ಈ ಸಂಖ್ಯಾಶಾಸ್ತ್ರೀಯ ಕಾಕತಾಳೀಯವು ಕ್ರೀಡಾಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿರುವುದಂತೂ ನಿಜ. ಆದರೆ ಅವರು ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ ಅಷ್ಟೇ.


Click it and Unblock the Notifications
