Vinesh Phogat: ವಿನೇಶ್ ಪೋಗಟ್‌ಗೆ ಇತ್ತು ಬೆಳ್ಳಿ ಪದಕ ಪಡೆಯುವ ಅವಕಾಶ!
ಪ್ಯಾರಿಸ್ ಒಲಿಂಪಿಕ್ ನಲ್ಲಿ ವಿನೇಶ್ ಫೋಗಟ್ ತೂಕದ ಕಾರಣದಿಂದಾಗಿ ಫೈನಲ್‌ನಲ್ಲಿ ಸ್ಪರ್ಧೆ ಮಾಡುವ ಅವಕಾಶ ಕಳೆದುಕೊಂಡಿದ್ದಾರೆ. ಚಿನ್ನದ ಪದಕ ಗೆಲ್ಲುವ ಕನಸು ಕಂಡಿದ್ದ ಕುಸ್ತಿಪಟು ಈಗ ಒಲಿಂಪಿಕ್ಸ್‌ನಿಂದಲೇ ಹೊರಬಿದ್ದಿದ್ದಾರೆ. ಈ ಮೂಲಕ ವಿನೇಶ್ ಫೋಗಟ್ ಚಿನ್ನ ಗೆಲ್ಲುತ್ತಾರೆ ಎಂದು ಕಾದಿದ್ದ ಕೋಟ್ಯಂತರ ಅಭಿಮಾನಿಗಳಿಗೂ ಆಘಾತ ಎದುರಾಗಿದೆ.
50 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದ ವಿನೇಶ್ ಫೋಗಟ್ ನಿಗದಿಪಡಿಸಿದ್ದಕ್ಕಿಂತ 100 ಗ್ರಾಂ ಹೆಚ್ಚು ತೂಕ ಇದ್ದ ಕಾರಣ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಘೋಷಿಸಲಾಯಿತು. ಕಳೆದ ಬಾರಿ ಒಲಿಂಪಿಕ್ಸ್‌ನಲ್ಲಿ 53 ಕೆ.ಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದ ವಿನೇಶ್ ಫೋಗಟ್ ಈ ಬಾರಿ 50 ಕೆಜಿ ವಿಭಾಗದಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ತೂಕ ಇಳಿಸಿಕೊಳ್ಳಲು ಸಾಕಷ್ಟು ಶ್ರಮ ಹಾಕಿದ್ದರು.

ಬೆಳ್ಳಿ ಪದಕ ಪಡೆಯಲು ಇತ್ತು ಅವಕಾಶ!
ವಿನೇಶ್ ಫೋಗಟ್ ಅನರ್ಹಗೊಂಡ ಬಳಿಕ 50 ಕೆಜಿ ಕುಸ್ತಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಯಾರಿಗೂ ನೀಡದಿರಲೂ ನಿರ್ಧರಿಸಲಾಗಿದೆ. ಚಿನ್ನದ ಮತ್ತು ಕಂಚಿನ ಪದಕವನ್ನು ಮಾತ್ರ ನೀಡಲಾಗುತ್ತದೆ. ಆದರೆ ತೂಕ ಹೆಚ್ಚಾದ ಬಳಿಕವೂ ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ಪಡೆಯುವ ಅವಕಾಶ ಇತ್ತು ಎನ್ನಲಾಗಿದೆ.
ಅನೇಕ ಕ್ರೀಡಾ ತಜ್ಞರು ಇಂತಹ ಸಾಧ್ಯತೆ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ. ತೂಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಬಗ್ಗೆ ಅವರಿಗೆ ಮೊದಲೇ ಮುನ್ಸೂಚನೆ ಇದ್ದರೆ ಕನಿಷ್ಠ ಬೆಳ್ಳಿ ಪದಕವನ್ನು ಉಳಿಸಿಕೊಳ್ಳಲು ಅವಕಾಶ ಇತ್ತು ಎನ್ನುವುದು ಅವರ ವಾದವಾಗಿದೆ.
If they knew she would fail the weight test why didn't they withdraw her as injured and assure a silver medal for her and India? Sorry, but what has happened seems completely unbelievable. Something does not add up here. #VineshPhogat
— Sumanth Raman (@sumanthraman) August 7, 2024
ಸುಮಂತ್ ರಾಮನ್ ಎನ್ನುವವರು ಈ ಬಗ್ಗೆ ಟ್ವೀಟ್ ಮಾಡಿದ್ದು ವಿನೇಶ್ ಫೋಗಟ್ ಬೆಳ್ಳಿ ಪದಕ ಉಳಿಸಿಕೊಳ್ಳುವ ಅವಕಾಶದ ಸಾಧ್ಯತೆ ಬಗ್ಗೆ ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ವಿನೇಶ್ ಫೋಗಟ್ ತೂಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ ಎಂದು ಅವರಿಗೆ ಮೊದಲೇ ತಿಳಿದಿದ್ದರೆ ಗಾಯಗೊಂಡಿದ್ದಾರೆ ಎಂದು ಫೈನಲ್ ಪಂದ್ಯದಿಂದ ಹಿಂದೆ ಸರಿಯಬಹುದಿತ್ತು, ಆಗ ಅವರಿಗೆ ಬೆಳ್ಳಿ ಪದಕವಾದರೂ ಸಿಗುತ್ತಿತ್ತು. ಆದರೆ ಆಕೆ ಅನರ್ಹಗೊಂಡಿದ್ದು ಮಾತ್ರ ನಂಬಲಾಗುತ್ತಿಲ್ಲ. ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪದಕ ಗೆಲ್ಲದಿದ್ದರೇನು?
ವಿನೇಶ್ ಫೋಗಟ್ ಪದಕ ಗೆಲ್ಲದೇ ಇದ್ದರೂ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಆಕೆ ಭಾರತದ ಹೆಮ್ಮೆಯ ಮಗಳು, ಅಖಾಡದಲ್ಲಿ ಮಾತ್ರವಲ್ಲ ಸಮಾಜದಲ್ಲಿಯೂ ಹಲವು ಸವಾಲುಗಳನ್ನು ಎದುರಿಸಿ ನಿಂತ ದಿಟ್ಟೆ. ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಹೋರಾಡಿದ್ದ ವಿನೇಶ್ ಫೋಗಟ್‌ಗೆ ಬಿಜೆಪಿ ಬೆಂಬಲಿಗರು ಸಾಕಷ್ಟು ಅವಮಾನ ಮಾಡಿದ್ದರು. ಅದೆಲ್ಲದಕ್ಕೂ ಆಕೆ ಒಲಿಂಪಿಕ್ಸ್‌ನ ಕುಸ್ತಿ ಅಖಾಡದಲ್ಲಿ ಉತ್ತರ ನೀಡಿದ್ದಾರೆ. ನಿನ್ನ ಸಾಧನೆಗೆ ಯಾವ ಪದಕವೂ ಕಡಿಮೆಯೇ, ಜನರ ಪ್ರೀತಿಯ, ಆಶೀರ್ವಾದದ ಪದಕ ನಿನ್ನ ಮೇಲಿದೆ ಎಂದು ಭಾರತದ ಕ್ರೀಡಾಭಿಮಾನಿಗಳು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.












Click it and Unblock the Notifications