ವಿಜಯ್ ಮಲ್ಯ 'ಊ ಲಾ ಲಾ ಲಾಲಾ ಲೆ ಓ' ಹಾಡು ಕೇಳಿ!
ವಿಜಯ್ ಮಲ್ಯ ಆರ್‌ಸಿಬಿ ತಂಡದ ಮೊದಲ ಮಾಲೀಕ. ಆದರೆ ಗ್ರಹಚಾರ ಕೆಟ್ಟು ವಿಜಯ್ ಮಲ್ಯ ಮೈತುಂಬಾ ಸಾಲ ಮಾಡಿಕೊಂಡಿದ್ದರು. ಹೀಗಾಗಿ ವಿಜಯ್ ಮಲ್ಯ ದೇಶವನ್ನೇ ಬಿಟ್ಟು ಓಡಿ ಹೋಗಿದ್ದರು. ಹೀಗಿದ್ದಾಗಲೇ ಆರ್‌ಸಿಬಿ ತಂಡಕ್ಕಾಗಿ ವಿಜಯ್ ಮಲ್ಯ ಮಾಡಿದ ಎಲ್ಲಾ ಸಹಾಯವನ್ನ ಅಭಿಮಾನಿಗಳು ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ. ವಿಜಯ್ ಮಲ್ಯ ಹಾಡಿದ್ದ ಕಿಂಗ್ ಫಿಶರ್ ಹಾಡಿನ ಹಳೆಯ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ.
ಹೌದು, ಆರ್‌ಸಿಬಿ ತಂಡದ ಮೊದಲ ಓನರ್ ಆಗಿದ್ದ ವಿಜಯ್ ಮಲ್ಯ ಅವರು ಕನ್ನಡಿಗರನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಕನ್ನಡ ತನಕ್ಕೆ ಹೆಚ್ಚು ಒತ್ತು ನೀಡಿದ್ದರು. ಅದರಲ್ಲೂ ಕನ್ನಡಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಕೆ.ಎಲ್. ರಾಹುಲ್ ಸೇರಿದಂತೆ ಹತ್ತಾರು ಕನ್ನಡದ ಆಟಗಾರರು ಆರ್‌ಸಿಬಿ ತಂಡಕ್ಕೆ ಆಡಿದ್ದರು. ಅಲ್ಲದೆ ಆರ್‌ಸಿಬಿ ತಂಡಕ್ಕೆ ಪೋಷಕರಾಗಿದ್ದವರು ಕೂಡ ಕನ್ನಡಿಗರೇ ಆಗಿದ್ದರು.

ಹೀಗೆ ವಿಜಯ್ ಮಲ್ಯ ಅವರು ಆರ್‌ಸಿಬಿ ತಂಡವನ್ನು ಪೂರ್ತಿ, ಕನ್ನಡಮಯ ಮಾಡಿದ್ದರು. ಆದ್ರೆ ಈಗ ವಿಜಯ್ ಮಲ್ಯ ಭಾರತದಲ್ಲೇ ಇಲ್ಲ, ಹೀಗಿದ್ದರೂ ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು ಮಲ್ಯ ನೆನಪು ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಆರ್‌ಸಿಬಿ ಹವಾ ಜೋರಾಗಿರುವ ಸಮಯದಲ್ಲೇ ವಿಜಯ್ ಮಲ್ಯ ಹಾಡು ವೈರಲ್ ಆಗುತ್ತಿದೆ. ಹಾಗಾದ್ರೆ ವಿಜಯ್ ಮಲ್ಯ ಆಗ ಹಾಡಿದ್ದ ಹಾಡು ಯಾವುದು? ಇದಕ್ಕೆ ಶಾರುಖ್ ಖಾನ್ ಏನ್ ಹೇಳಿದ್ರು?
ಊ ಲಾ ಲಾ ಲಾಲಾ ಲೆ ಓ!
ಕಿಂಗ್ ಫಿಶರ್ ಸಂಸ್ಥೆ ದೊಡ್ಡ ಹೆಸರನ್ನು ಮಾಡಿತ್ತು, ಅದರಲ್ಲೂ ದೊಡ್ಡ ಮಟ್ಟದ ಆಡ್ ಅಂದ್ರೆ ಜಾಹೀರಾತು ನೀಡುವ ಮೂಲಕ ಸದ್ದು ಮಾಡಿತ್ತು ಕಿಂಗ್ ಫಿಶರ್ ಸಂಸ್ಥೆ. ಅದ್ರಲ್ಲೂ ಕಿಂಗ್ ಫಿಶರ್ ಸಂಸ್ಥೆಯ ಉತ್ಪನ್ನಗಳನ್ನ ಪ್ರತಿನಿಧಿಸುವ ಜಾಹೀರಾತು ಒಂದು ಸಖತ್ ಸದ್ದನ್ನು ಮಾಡಿತ್ತು. 'ಊ ಲಾ ಲಾ ಲಾಲಾ ಲೆ ಓ' ಹಾಡು ಮೋಡಿ ಮಾಡಿತ್ತು. ಈ ಹಾಡನ್ನು ಸ್ವತಃ ವಿಜಯ್ ಮಲ್ಯ ಅವರೇ ಹಾಡಿದ್ದು, ಹಳೆಯ ವಿಡಿಯೋ ಈಗ ಹಲ್‌ಚಲ್ ಎಬ್ಬಿಸಿದೆ. ಆ ವಿಡಿಯೋ ನೋಡಿ ಆರ್‌ಸಿಬಿ ಅಭಿಮಾನಿಗಳು ಖುಷ್ ಆಗುತ್ತಿದ್ದಾರೆ. ಶಾರುಖ್ ಖಾನ್ ಮತ್ತು ವಿಜಯ್ ಮಲ್ಯ ಜೊತೆಗೆ ರಾಹುಲ್ ದ್ರಾವಿಡ್ ಕೂಡ ಈ ಹಾಡಿಗೆ ಧ್ವನಿಯಾಗಿದ್ದರು.
ವಿಜಯ್ ಮಲ್ಯ ವಾಪಸ್ ಬರ್ತಾರಾ?
ಒಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದರೆ ಆರ್‌ಸಿಬಿ ತಂಡದ ಅಭಿಮಾನಿಗಳು, ಇದೀಗ ವಿಜಯ್ ಮಲ್ಯ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ವಿಜಯ್ ಮಲ್ಯ ಆಗ, ಆರ್‌ಸಿಬಿ ತಂಡಕ್ಕೆ ಎಷ್ಟು ಬೆಂಬಲ ನೀಡುತ್ತಿದ್ದರು ಅನ್ನೋದು ಕೂಡ ಈಗ ಚರ್ಚೆಗೆ ವೇದಿಕೆ ಒದಗಿಸಿದೆ. ಹಾಗೇ ಮತ್ತೊಮ್ಮೆ ವಿಜಯ್ ಮಲ್ಯ ಆರ್‌ಸಿಬಿ ತಂಡದ ಮಾಲೀಕತ್ವ ವಹಿಸಲಿ ಅಂತಾನು ಆರ್‌ಸಿಬಿ ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ. ಇನ್ನೊಂದು ಮ್ಯಾಚ್ ಗೆದ್ದರೆ ಸಾಕು, RCB ತಂಡ ಮುಂದಿನ ಹಂತಕ್ಕೆ ಅಂದ್ರೆ ಪ್ಲೇ ಆಫ್‌ಗೆ ಎಂಟ್ರಿ ಕೊಡಲಿದೆ.












Click it and Unblock the Notifications