Vijay Mallya RCB: ಫೈನಲ್‌ ಪ್ರವೇಶಿಸಿದ ಆರ್‌ಸಿಬಿ ತಂಡಕ್ಕೆ ವಿಶೇಷ ಗಿಫ್ಟ್‌ ನೀಡಿದ ವಿಜಯ್‌ ಮಲ್ಯ

Vijay Mallya RCB: ಐಪಿಎಲ್‌ 2025 ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಇನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಪಂಜಾಬ್‌ ವಿರುದ್ಧ ಮೊದಲ ಕ್ವಾಲಿಫೈಯರ್‌ನಲ್ಲೇ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದೆ. ಇದರ ಬೆನ್ನಲ್ಲೇ ರಾಯಲ್‌ ಹುಡುಗ್ರುಗೆ ವಿಜಯ್‌ ಮಲ್ಯ ಅವರು ವಿಶೇಷ ಸಂದೇಶವೊಂದನ್ನು ಕಳುಹಿಸಿದ್ದಾರೆ.

ಆರ್‌ಸಿಬಿ ತಂಡವು ಈ ಸೀಸನ್‌ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್‌ ಪ್ರವೇಶ ಪಡೆದುಕೊಂಡಿದೆ. ಗುರುವಾರ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಭರ್ಜರಿಯಾಗು ಗೆದ್ದು ಬೀಗುವ ಮೂಲಕ ಫೈನಲ್‌ ಪ್ರವೇಶಿಸಿರುವ ಬೆಂಗಳೂರು ತಂಡಕ್ಕೆ ಖ್ಯಾತ ಉದ್ಯಮಿ, ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ತಮ್ಮ ಟ್ವೀಟ್‌ ಖಾತೆ ಮೂಲಕ ಅಭಿನಂದನೆ ತಿಳಿಸಿದ್ದಾರೆ.

Vijay Mallya Congratulates to RCB Team for Entered IPL 2025 Final

ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆಲುವು ಸಾಧಿಸಿ ಐಪಿಎಲ್ 2025 ಫೈನಲ್‌ ಪ್ರವೇಸಿದ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಬ್ಯಾಟಿಂಗ್‌, ಬೌಲಿಂಗ್‌ ಎರಡು ವಿಭಾಗದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ಮಾಡಿದೆ. ಮುಂದಿನ ಕೊನೆ ಪಂದ್ಯದಲ್ಲೂ ಹೀಗೆ ಉತ್ತಮವಾಗಿ ಆಟ ಆಡುವ ಮೂಲಕ ಟ್ರೋಫಿ ಗೆದ್ದುಕೊಂಡು ಬನ್ನಿ ಎಂದು ತಮ್ಮ ಟ್ವೀಟ್‌ನಲ್ಲಿ ಶುಭ ಹಾರೈಸಿದ್ದಾರೆ. ಇದು ಆರ್‌ಸಿಬಿ ಪಾಲಿಗೆ ದೊಡ್ಡ ಗಿಫ್ಟ್‌ ಆದಂತಾಗಿದೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿಯು ಪಂಜಾಬ್‌ ಕಿಂಗ್ಸ್‌ ವಿರುದ್ಧ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೇ 29ರಂದು ಗೆದ್ದು ಬೀಗಿತು. ಟಾಸ್‌ ಗೆದ್ದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಪಂಜಾಬ್‌ ಕಿಂಗ್ಸ್ 14.1 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 101 ರನ್‌ಗಳನ್ನು ಕಲೆಹಾಕುವ ಮೂಲಕ ಬೆಂಗಳೂರು ತಂಡಕ್ಕೆ 102 ರನ್‌ಗಳ ಸಾಧಾರಣ ಗುರಿ ನೀಡಿತು.

ಈ ಗುರಿ ಬೆನ್ನತ್ತಿದ ಆರ್‌ಸಿಬಿ ಕೇವಲ 10 ಓವರ್‌ಗೆ 2 ವಿಕೆಟ್‌ ನಷ್ಟಕ್ಕೆ 106 ಕಲೆಹಾಕಿ ಭರ್ಜರಿ ಗೆಲುವು ಸಾಧಿಸಿತು. ಆರ್‌ಸಿಬಿ ಪರ ಬೌಲಿಂಗ್‌ ಮಾಡಿದ ಜೋಶ್‌ ಹೇಜಲ್‌ವುಡ್‌, ಸುಯೇಶ್ ಶರ್ಮಾ ತಲಾ 3 ವಿಕೆಟ್‌ ಪಡೆದುಕೊಂಡರೆ, ಯಶ್‌ ದಯಾಲ್‌ 2, ಭುವನೇಶ್ವರ್ ಕುಮಾರ್ ಹಾಗೂ ರೊಮಾರಿಯೋ ಶೆಫರ್ಡ್ ತಲಾ 1 ವಿಕೆಟ್‌ ಪಡೆದು ಪಂಜಾಬ್‌ ಕಿಂಗ್ಸ್‌ ತಂಡವನ್ನು 101 ರನ್‌ಗಳಿಗೆ ಕಟ್ಟಿಹಾಕಿ ಮಿಂಚಿದರು.

ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್‌ ಸಾಲ್ಟ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ಮಾಡುವ ಅರ್ಧಶತಕದೊಂದಿಗೆ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕೇವಲ 27 ಬಾಲ್‌ಗಳಿಗೆ 6 ಬೌಂಡಲಿ, 3 ಸಿಕ್ಸರ್‌ ಸಿಡಿಸುವುದರೊಂದಿಗೆ 56 ರನ್‌ ಬಾರಿಸಿ ಔಟಾಗದೇ ತಂಡವನ್ನು ಗೆಲ್ಲಿಸಿ ಮಿಂಚಿದರು. ಇನ್ನು ವಿರಾಟ್‌ ಕೊಹ್ಲಿ 12, ಮಯಂಕ್‌ ಅಗರ್ವಾಲ್‌ 19 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ನತ್ತ ನಡೆದರೆ, ನಾಯಕ ರಜತ್‌ ಪಾಟೀದಾರ್‌ 15 ರನ್‌ ಗಳಿಸಿ ನಾಟ್‌ ಔಟ್‌ ಆಗಿ ಉಳಿದು ವಿನ್ನಿಂಗ್‌ ಶಾಟ್‌ ಮಾಡುವ ಮೂಲಕ ತಂಡವನ್ನು ಗೆಲ್ಲಿಸಿಕೊಟ್ರು.

ಪಂಜಾಬ್‌ ಕಿಂಗ್ಸ್‌ ಆರಂಭದಲ್ಲೇ ಬ್ಯಾಟಿಂಗ್‌ನಲ್ಲಿ ಎಡವಿತು. ಒಂದರ ಹಿಂದೆ ಒಂದರಂತೆ ವಿಕೆಟ್‌ ಕಳೆದುಕೊಂಡು ಸಾಧಾರಣ ರನ್‌ ರನ್‌ಗಳನ್ನು ಕಲೆಹಾಕಿತು. ಪ್ರಿಯಾಂಶ್ ಆರ್ಯ 7, ಜೋಶ್‌ ಇಂಗ್ಲಿಸ್‌ 4, ನಾಯಕ ಶ್ರೇಯಸ್‌ ಅಯ್ಯರ್‌ 2, ನೆಹಾಲ್ ವಧೇರಾ 8, ಪ್ರಭಸಿಮ್ರನ್ ಸಿಂಗ್ 18, ಮಾರ್ಕಸ್ ಸ್ಟೊಯಿನಿಸ್ 26, ಅಜ್ಮತುಲ್ಲಾ ಒಮರ್ಜೈ 18 ರನ್‌ಗಳಿಸಿದರು. ಈ ಮೂಲಕ ಎಲ್ಲಾ ವಿಕೆಟ್‌ ಕಳೆದುಕೊಂಡ ಪಂಜಾಬ್‌ ಕಿಂಗ್ಸ್‌ ಬರೀ 102 ರನ್‌ಗಳ ಸಾಧಾರಣ ಗುರಿ ನೀಡಿದರು. ಈ ಗುರಿಯನ್ನು ಯಾವುದೇ ಟೆನ್ಷನ್‌ ಇಲ್ಲದೆ, ಆರ್‌ಸಿಬಿ ತಲುಪುವಲ್ಲಿ ಯಶಸ್ವಿಯಾಗುವ ಮೂಲಕ ಫೈನಲ್‌ ಪ್ರವೇಶ ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+