ಕ್ರಿಕೆಟ್ ಅಷ್ಟೇ ಅಲ್ಲ ಬ್ರ್ಯಾಂಡಿಂಗ್‌ನಲ್ಲೂ ಬಾಲಕ ವೈಭವ್ ಸೂರ್ಯವಂಶಿ ಹೊಸ ದಾಖಲೆ.. 15ರ ಹರೆಯದಲ್ಲೇ ಕೋಟಿ ಕೋಟಿ ಸಂಪತ್ತಿನ ಒಡೆಯ
Vaibhav Sooryavanshi: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮೂಲಕ ಇಡೀ ಕ್ರಿಕೆಟ್ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೀಗ ಅವರ ಬ್ರ್ಯಾಂಡ್ ವ್ಯಾಲ್ಯೂ ಯಾರೂ ಊಹಿಸಲಾರದಷ್ಟು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವೈಭವ್ ಸೂರ್ಯವಂಶಿ ಅವರು 14ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಅವರು ತೋರಿದ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಐಪಿಎಲ್ ಹರಾಜಿನಲ್ಲಿ ಅವರ ಮೇಲೆ ಬಿಡ್‌ಗಳನ್ನು ಕೂಗಲಾಗಿತ್ತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಅವರಿಗೆ 1.1 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು.

ವೈಭವ್ ಸೂರ್ಯವಂಶಿ ಮತ್ತೊಂದು ಹೊಸ ದಾಖಲೆ
ಅದರ ನಂತರ ಅವರು ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಛಾಪು ಮೂಡಿಸಿದ್ದು, ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಒಂದೆಡೆ ದಿನಕ್ಕೊಂದು ಹೊಸ ಇತಿಹಾಸ ನಿರ್ಮಾಣ ಆಗುತ್ತಿದ್ದರೆ, ಮತ್ತೊಂದೆಡೆ ಅವರ ಆಸ್ತಿಯಲ್ಲೂ ವೇಗವಾಗಿ ಏರಿಕೆಯಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
'ವಂಡರ್ ಕಿಡ್' ಆಸ್ತಿ ಮೌಲ್ಯದ ವಿವರ
ವೈಭವ್ ಸೂರ್ಯವಂಶಿಯವರ ಹೆಚ್ಚುತ್ತಿರುವ ಬ್ರ್ಯಾಂಡ್ ಮೌಲ್ಯದಿಂದಾಗಿ ಪ್ರಮುಖ ಕಂಪನಿಗಳು ಅವರತ್ತ ಗಮನಹರಿಸಿವೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕಂಪನಿಗಳು ಮತ್ತು ಬ್ರ್ಯಾಂಡ್‌ಗಳು ಅವರನ್ನ ರಾಯಭಾರಿನ್ನಾಗಿ ಮಾಡಿಕೊಳ್ಳಲು ಮುಂದೆ ಬರುತ್ತಿವೆ. 15 ವರ್ಷದ ಈ ಬಾಲಕನ ಒಟ್ಟು ಆಸ್ತಿ ಈಗ ಸುಮಾರು 7ರಿಂದ 10 ಕೋಟಿ ರೂಪಾಯಿಗೆ ತಲುಪಿದೆ ಎಂದು ತಮೂಲಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ, ವೈಭವ್ ಸೂರ್ಯವಂಶಿ ಅವರಿಗೆ ಈವರೆಗೆ ಯಾವುದೇ ದೊಡ್ಡ ಕಾರ್ಪೊರೇಟ್ ಕಂಪನಿಯೊಂದಿಗೆ ಎಂಡಾರ್ಸ್‌ಮೆಂಟ್ ಒಪ್ಪಂದ ಸಿಕ್ಕಿಲ್ಲ. ಆದರೆ ಶೀಘ್ರದಲ್ಲೇ ಈ ಕುರಿತು ಪ್ರಮುಖ ಬೆಳವಣಿಗೆಯಾಗುವ ಸಾಧ್ಯತೆಯಿದೆ. ಐಪಿಎಲ್ 2026ಕ್ಕಿಂತ ಮೊದಲು ವೈಭವ್ ಅವರು ಬ್ರ್ಯಾಂಡ್ ಜಾಹೀರಾತುಗಳಿಗಾಗಿ 1 ಕೋಟಿ ರೂಪಾಯಿ ಪಡೆಯುತ್ತಿದ್ದರು ಎಂಬ ಚರ್ಚೆ ಕ್ರೀಡಾ ವಲಯದಲ್ಲಿ ನಡೆಯುತ್ತಿದೆ.
ಐಪಿಎಲ್ 2026ರ ನಂತರ ಈ ಮೊತ್ತವು ದುಪ್ಪಟ್ಟಾಗಿದೆ. ಪ್ರಸ್ತುತ ವೈಭವ್ ಸೂರ್ಯವಂಶಿ ಅವರು ಅಧಿಕೃತವಾಗಿ ಪ್ರಮುಖ ಐದು ದೊಡ್ಡ ಬ್ರ್ಯಾಂಡ್‌ಗಳು ಮತ್ತು ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನುವ ಬಿಗ್ ಅಪ್ಡೇಟ್‌ವೊಂದು ಲಭ್ಯವಾಗಿದೆ. ಹಾಗಾದ್ರೆ ಅವುಗಳು ಯಾವುವು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಯಾವೆಲ್ಲಾ ಬ್ರ್ಯಾಂಡ್‌ಗಳಿಂದ ಬೇಡಿಕೆ?
* ಸರೀನ್ ಸ್ಪೋರ್ಟ್ಸ್ (Sareen Sports - SS)
* ಕಾಂಪ್ಲಾನ್ (Complan)
* ಗೂಗಲ್ ಪೇ (Google Pay)
* ರೆಡ್ ಬುಲ್ (Red Bull)
* ಜಾರ್ಖಂಡ್ ಆರೋಗ್ಯ ಇಲಾಖೆ (Jharkhand Health Department)
ಸರೀನ್ ಸ್ಪೋರ್ಟ್ಸ್‌ನೊಂದಿಗೆ ಕ್ರಿಕೆಟ್ ಉಪಕರಣಗಳ ಒಪ್ಪಂದವಿದ್ದು, ಇದಕ್ಕಾಗಿ ಅವರಿಗೆ ವರ್ಷಕ್ಕೆ ಅಂದಾಜು 50 ಲಕ್ಷ ರೂಪಾಯಿ ಸಿಗುತ್ತದೆ. ಸರೀನ್ ಸ್ಪೋರ್ಟ್ಸ್ ಮಾರುಕಟ್ಟೆಯಲ್ಲಿ ವಿಶೇಷವಾದ ವೈಭವ್ ಸೂರ್ಯವಂಶಿ ಹೆಸರಿನ ಬ್ಯಾಟ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಮತ್ತೊಂದೆಡೆ ಅವರ ಬ್ಯಾಟ್ ಮೇಲಿನ ಸ್ಟಿಕ್ಕರ್ ಪ್ರಾಯೋಜಕತ್ವಕ್ಕಾಗಿ ದೊಡ್ಡ ಮೊತ್ತದ ಒಪ್ಪಂದವೊಂದು ಅಂತಿಮ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ.
ವೈಭವ್ ಸೂರ್ಯವಂಶಿ ಅವರು ಕಾಂಪ್ಲಾನ್‌ನ 'ಥೋಡಾ ಪ್ಲಾನ್, ಥೋಡಾ ಕಾಂಪ್ಲಾನ್' ಎಂಬ ಪ್ರಮುಖ ಜಾಹೀರಾತು ಪ್ರಚಾರದ ಮುಖ್ಯ ಭಾಗವಾಗಿದ್ದಾರೆ. ಅಲ್ಲದೆ, ರಾಜಸ್ಥಾನ್ ರಾಯಲ್ಸ್ ತಂಡದ ತಮ್ಮ ಸಹ ಆಟಗಾರ ಧ್ರುವ್ ಜುರೆಲ್ ಅವರೊಂದಿಗೆ 'ರೆಡ್ ಬುಲ್ ಚಾಲೆಂಜ್'ನಲ್ಲಿ ಭಾಗವಹಿಸಿದ್ದರು. ಅದರಲ್ಲಿ 30 ಎಸೆತಗಳಲ್ಲಿ 60 ರನ್ ಗಳಿಸುವ ಸವಾಲಿತ್ತು. ಇಂತಹ ಬ್ರ್ಯಾಂಡ್‌ಗಳೊಂದಿಗೆ ಕಾಣಿಸಿಕೊಳ್ಳುವುದು ಸಹ ಅವರ ವೃತ್ತಿಪರ ಒಪ್ಪಂದದ ಭಾಗವಾಗಿದೆ.
ಐಪಿಎಲ್ ಆರಂಭಕ್ಕೂ ಮುನ್ನ ಅವರು ಈ ಪ್ರತಿಯೊಂದು ಕಂಪನಿಯೊಂದಿಗೆ ತಲಾ 1 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗೂಗಲ್ ಪೇ ಜಾಹೀರಾತಿಗಾಗಿ ಅವರಿಗೆ ಸುಮಾರು 1 ರಿಂದ 1.5 ಕೋಟಿ ರೂಪಾಯಿ ಲಭಿಸಿದೆ ಎಂಬ ಚರ್ಚೆಯೂ ಇದೆ. ಜಾರ್ಖಂಡ್ ಆರೋಗ್ಯ ಇಲಾಖೆಯು ಅವರನ್ನು ತಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಇದೊಂದು ಸರ್ಕಾರಿ ಹುದ್ದೆ ಆಗಿರುವುದರಿಂದ, ವೇತನಕ್ಕಿಂತ ಹೆಚ್ಚಾಗಿ 'ಬ್ರ್ಯಾಂಡ್ ಅಂಬಾಸಿಡರ್' ಎಂಬ ಗೌರವ ಮತ್ತು ಗೌರವಧನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಈ ವಂಡರ್ ಕಿಡ್ ಬ್ರ್ಯಾಂಡ್ ವ್ಯಾಲ್ಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.


Click it and Unblock the Notifications
