Vaibhav Sooryavanshi: ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ಕಿವೀಸ್ ಮುಖ್ಯ ಕೋಚ್ ನೇರ ಸವಾಲು

Vaibhav Sooryavanshi: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರಾಗಿದ್ದಾರೆ. ಇದೀಗ ಈ ಬಾಲಕನಿಗೆ ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಕಿವೀಸ್ ಪಡೆ ಹೊಸ ಸವಾಲೊಂದನ್ನು ಒಡ್ಡಿದೆ.

ಭಾರತ ಕ್ರಿಕೆಟ್ ತಂಡದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಕಿವೀಸ್ ಪಡೆ ಹೊಸ ಸವಾಲೊಂದನ್ನು ಒಡ್ಡಿದೆ. ಈ ಪ್ರವಾಸದ ವೇಳೆ ಬೌನ್ಸ್ ಹೊಂದಿರುವ ಪಿಚ್‌ಗಳಲ್ಲಿ ವೈಭವ್ ಹೇಗೆ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದನ್ನು ನೋಡಲು ಕಾತರದಿಂದ ಇರುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ರಾಬ್ ವಾಲ್ಟರ್ ಹೇಳಿದ್ದಾರೆ.

Vaibhav Sooryavanshi Faces New Zealand Head Coach Rob Walter Challenge Ahead of India Tour Viral

ಫೈನಲ್ ಆಗದ ಅಧಿಕೃತ ತಂಡ

ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಈ ಸರಣಿಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಇನ್ನೂ ಅಧಿಕೃತ ತಂಡವನ್ನು ಪ್ರಕಟಿಸಿಲ್ಲ. ಆದರೂ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಿಗೆ ತಂಡದಲ್ಲಿ ಜಾಗ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.

ರಾಬ್ ವಾಲ್ಟರ್ ಹೇಳಿದ್ದೇನು?

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿವೀಸ್ ಕೋಚ್ ರಾಬ್ ವಾಲ್ಟರ್ ಅವರು, 'ವೈಭವ್ ಸೂರ್ಯವಂಶಿಯನ್ನು ನಮ್ಮ ದೇಶದ ವೇಗದ ಮತ್ತು ಬೌನ್ಸಿ ಪಿಚ್‌ಗಳಲ್ಲಿ ಆಡುವುದನ್ನು ನೋಡಲು ನಾನು ವೈಯಕ್ತಿಕವಾಗಿ ತುಂಬಾ ಇಷ್ಟಪಡುತ್ತೇನೆ. ಅವರು ಖಂಡಿತವಾಗಿಯೂ ಅದ್ಭುತ ಆಟಗಾರ. ಐಪಿಎಲ್‌ನಲ್ಲಿ ವಿಶ್ವಶ್ರೇಷ್ಠ ಬೌಲರ್‌ಗಳ ವಿರುದ್ಧವೇ ಪ್ರಾಬಲ್ಯ ಸಾಧಿಸುವುದನ್ನು ನಾವು ಈಗಾಗಲೇ ನೋಡಿದ್ದೇವೆ,' ಎಂದು ಹೇಳಿದ್ದಾರೆ.

'ಆದರೆ ತವರು ನೆಲದ ಪರಿಸ್ಥಿತಿಯನ್ನು ಬಿಟ್ಟು ಸಂಪೂರ್ಣವಾಗಿ ಭಿನ್ನವಾದ ವಿದೇಶಿ ವಾತಾವರಣಕ್ಕೆ ಬಂದಾಗ ಆಟಗಾರರ ಪ್ರದರ್ಶನ ಹೇಗೆ ಬದಲಾಗುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನಾವು ಅವರಿಗೆ ಹೇಗೆ ಬೌಲಿಂಗ್ ಮಾಡುತ್ತೇವೆ ಎಂಬುದೇ ನಿಜವಾದ ಸವಾಲು,' ಎಂದು ರಾಬ್ ವಾಲ್ಟರ್ ಅವು ತಿಳಿಸಿದ್ದಾರೆ.

ವೈಭವ್ ಸೂರ್ಯವಂಶಿಗೆ ರಾಬ್ ವಾಲ್ಟರ್ ಸವಾಲು

ಮುಂದುವರಿದು ಮಾತನಾಡಿದ ಅವರು, 'ಒಬ್ಬ ಕೋಚ್ ಆಗಿ ನನ್ನ ಮನಸ್ಸಿನ ಮೂಲೆಯಲ್ಲಿ ಎದುರಾಳಿ ಆಟಗಾರರು ಸ್ವಲ್ಪ ಒತ್ತಡಕ್ಕೆ ಒಳಗಾಗುವುದನ್ನು ಮತ್ತು ಅಂತಹ ಪರಿಸ್ಥಿತಿಯನ್ನು ಅವರು ಹೇಗೆ ಎದುರಿಸುತ್ತಾರೆ ಎಂಬುದನ್ನು ನೋಡುವ ಆಸೆ ಇದ್ದೇ ಇರುತ್ತದೆ. ಒಂದು ವೇಳೆ ಅವರು ಈ ಪ್ರವಾಸದಲ್ಲಿ ಆಡಿದರೆ, ಅವರ ವಿರುದ್ಧ ನಮ್ಮ ತಂತ್ರ ರೂಪಿಸಲು ಕಾಯುತ್ತಿದ್ದೇನೆ. ಒಂದು ವೇಳೆ ಅವರು ಇಲ್ಲದಿದ್ದರೂ ಭಾರತ ತಂಡದಲ್ಲಿ ಇತರ ಹಲವು ವಿಶ್ವದರ್ಜೆಯ ಬ್ಯಾಟರ್‌ಗಳಿದ್ದಾರೆ,' ಎಂದು ಮುಕ್ತವಾಗಿ ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಐಪಿಎಲ್ ಅಂಗಳಕ್ಕೆ ಕಾಲಿಟ್ಟ ವೈಭವ್ ಸೂರ್ಯವಂಶಿ ಅವರು, ತಾವು ಆಡಿದ ಚೊಚ್ಚಲ ಸೀಸನ್‌ನಲ್ಲೇ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಬಳಿಕ ಅವರು 2026ರ ಐಪಿಎಲ್‌ನಲ್ಲಿ ಗರಿಷ್ಠ ರನ್ ಕಲೆಹಾಕಿ 'ಆರೆಂಜ್ ಕ್ಯಾಪ್' ಕೂಡ ಪಡೆದುಕೊಂಡಿದ್ದರು. ಭಾರತ ಹಿರಿಯರ ಟಿ20ಐ ತಂಡಕ್ಕೆ ಪಾದಾರ್ಪಣೆ ಮಾಡಿದ ಇವರು, ಭಾರತ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಈಸ್ಟ್ ಜೋನ್ (ಪೂರ್ವ ವಲಯ) ಪರವಾಗಿ ಆಡಿದ್ದ ವೈಭವ್, ಅದ್ಭುತ ಅರ್ಧಶತಕಗಳನ್ನು ಬಾರಿಸುವ ಮೂಲಕ ರೆಡ್-ಬಾಲ್ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದ ಅಂಡರ್-19 ಪ್ರವಾಸಗಳಲ್ಲಿ ಶತಕ ಸಿಡಿಸಿ ಮಿಂಚಿರುವ ವೈಭವ್‌ಗೆ, ನ್ಯೂಜಿಲೆಂಡ್‌ನ ಸವಾಲಿನ ವಾತಾವರಣದಲ್ಲಿ ಆಡುವುದು ವೃತ್ತಿಜೀವನದ ದೊಡ್ಡ ಮೈಲಿಗಲ್ಲಾಗಲಿದೆ.

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಅನುಭವಿಸಿದ ಸೋಲಿನ ಕಹಿ ನೆನಪುಗಳಿದ್ದರೂ, ಮುಂಬರುವ ಸರಣಿಯಲ್ಲಿ ತವರಿನಲ್ಲಿ ಭಾರತವನ್ನು ಎದುರಿಸಲು ಕಿವೀಸ್ ಪಡೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಒಟ್ಟಿನಲ್ಲಿ ವೈಭವ್‌ಗೆ ಸವಾಲೆಸೆದಿರುವುದೇ ಇದೀಗ ಗಮನಾರ್ಹ ಸಂಗತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+