8, 16, 1.. ವೈಭವ್ ಸೂರ್ಯವಂಶಿ ಅಟ್ಟರ್ ಫ್ಲಾಪ್, 'ವಂಡರ್‌ ಕಿಡ್‌'ಗೆ ಬಂತು ಎಚ್ಚರಿಕೆ ಸಂದೇಶ

Vaibhav Sooryavanshi: ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರಾಗಿರುವ ಟೀಮ್ ಇಂಡಿಯಾ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಸದ್ಯ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಅವರಿಗೆ ಕ್ರಿಕೆಟ್ ದಿಗ್ಗಜರು ಹಾಗೂ ವಿಶ್ಲೇಷಕರು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

15 ವರ್ಷದ ವೈಭವ್ ಸೂರ್ಯವಂಶಿ ಅವರು ಈಗಾಗಲೇ ಅತೀ ಚಿಕ್ಕ ವಯಸ್ಸಿನಲ್ಲಿಯೇ ಚುಟುಕು ಕ್ರಿಕೆಟ್‌ ಮತ್ತು ಐಪಿಎಲ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರದ್ದಾರೆ. ಇದೀಗ ಅವರಿಗೆ ಟೆಸ್ಟ್‌ ಕ್ರಿಕೆಟ್ ಮತ್ತು ಸ್ಟಾರ್‌ಡಮ್‌ನಿಂದ ಎದುರಾಗಬಹುದಾದ ಸವಾಲುಗಳ ಕುರಿತು ಕ್ರೀಡಾ ವಿಶ್ಲೇಷಕರು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.

Vaibhav Sooryavanshi Experts Warns Team India Young Star wonder kid After Duleep Trophy Setback

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ನಡೆದಿದ್ದೇನು?

ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಈಸ್ಟ್ ಜೋನ್ ಪರ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಅವರು, ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 8 ರನ್ ಗಳಿಸಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಕಡೆಗೆ ನಡೆದರು. ಆಫ್‌ಸ್ಪಿನ್ನರ್ ತ್ರಿಪುರಾಣ ವಿಜಯ್ ಬೌಲಿಂಗ್‌ನಲ್ಲಿ ಕ್ರಿಸ್‌ನಿಂದ ಹೊರಬಂದು ದೊಡ್ಡ ಹೊಡೆತಕ್ಕೆ ಯತ್ನಿಸಿ ಸ್ಟಂಪ್ ಔಟ್ ಆದರು.

ಐಪಿಎಲ್‌ನಲ್ಲಿ ವಿಜಯ್ ಅವರ ಒಂದೇ ಓವರ್‌ನಲ್ಲಿ ಆಕ್ರಮಣಕಾರಿ ಆಟದ ಮೂಲಕ ವೈಭವ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು. ಆದರೆ ಅದೇ ಬೌಲರ್ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ಆಟದ ಶೈಲಿಯನ್ನು ಸರಿಯಾಗಿ ಗ್ರಹಿಸಿ, ತಮ್ಮ ಚಾಣಕ್ಷ ಬೌಲಿಂಗ್ ಮೂಲಕ ವಿಕೆಟ್ ಕಬಳಿಸಿ ಸೇಡು ತೀರಿಸಿಕೊಂಡರು.

ವೈಭವ್ ಕಲಿತುಕೊಳ್ಳಬೇಕಾದ ಪ್ರಮುಖ ಪಾಠಗಳು

ಟಿ20 ಮತ್ತು ಐಪಿಎಲ್ ವೈಭವ್‌ಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಆದರೆ ಪ್ರಥಮ ದರ್ಜೆ ಕ್ರಿಕೆಟ್ ಅಥವಾ ಟೆಸ್ಟ್ ಪಂದ್ಯಗಳಲ್ಲಿ ಪ್ರತಿ ಎಸೆತವನ್ನೂ ಬಿಗ್ ಶಾಟ್‌ ಮಾಡುವುದು ಸಾಧ್ಯವಿಲ್ಲ. ಕೆಲವು ಎಸೆತಗಳನ್ನು ಬಿಡುವುದು ಮತ್ತು ರಕ್ಷಣಾತ್ಮಕವಾಗಿ ಆಡುವುದು ಕೂಡ ಅಷ್ಟೇ ಮುಖ್ಯ ಎಂಬುದನ್ನು ವೈಭವ್ ಅರ್ಥಮಾಡಿಕೊಳ್ಳಬೇಕಿದೆ ಎಂದು ವಿಶ್ಲೇಷಕರು ಕಿವಿಮಾತನ್ನ ಹೇಳಿದ್ದಾರೆ.

ವೈಭವ್‌ ಸೂರ್ಯವಂಶಿ ಎಡವುತ್ತಿರುವುದು ಎಲ್ಲಿ?

ವೈಭವ್‌ ಸೂರ್ಯವಂಶಿಗೆ ಪ್ರಸ್ತುತ ಎದುರಾಗಿರುವ ಅತಿ ದೊಡ್ಡ ಸವಾಲು ಎಂದರೆ ಬೌಲರ್‌ಗಳಲ್ಲ, ಬದಲಿಗೆ ಅತೀ ಬೇಗನೇ ಸಿಕ್ಕ ಸ್ಟಾರ್‌ಡಮ್ ಪಟ್ಟ. ಪ್ರತಿಯೊಂದು ಪಂದ್ಯದಲ್ಲೂ ಅಭಿಮಾನಿಗಳು ಅವರಿಂದ ಬೌಂಡರಿ-ಸಿಕ್ಸರ್‌ಗಳನ್ನೇ ನಿರೀಕ್ಷಿಸುತ್ತಾರೆ. ಈ ನಿರೀಕ್ಷೆಗಳ ಒತ್ತಡಕ್ಕೆ ಸಿಲುಕಿ ತಮ್ಮ ಸ್ವಾಭಾವಿಕ ಆಟವನ್ನು ಮರೆತು ಆಡಿದರೆ, ಅದು ಅವರ ವೃತ್ತಿಜೀವನಕ್ಕೆ ಅಪಾಯ ತರಬಹುದು ಎಂದು ಎಚ್ಚರಿಸಿದ್ದಾರೆ.

ಬೌಲರ್‌ಗಳು ಈಗ ವೈಭವ್ ಅವರ ಆಟದ ಶೈಲಿ ಮತ್ತು ವೀಕ್‌ನೆಸ್‌ಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ್ದಾರೆ. ಆದ್ದರಿಂದ ಮೈದಾನದಲ್ಲಿದ್ದಾಗ ಕ್ರೀಸ್ ಬಿಟ್ಟು ಮುನ್ನುಗ್ಗುವ ಆತುರವನ್ನು ಕಡಿಮೆ ಮಾಡಿ, ಪರಿಸ್ಥಿತಿಗೆ ತಕ್ಕಂತೆ ತಾಳ್ಮೆಯಿಂದ ಆಡುವುದನ್ನು ಕಲಿಯುವುದು ಅವರಿಗೆ ಅತ್ಯಗತ್ಯ. ಐಪಿಎಲ್ ಮತ್ತು ಟಿ20 ಕ್ರಿಕೆಟ್ ಒಬ್ಬ ಆಟಗಾರನನ್ನು ಸ್ಟಾರ್ ಮಾಡಬಹುದು. ಆದರೆ ಟೆಸ್ಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಮಾತ್ರ ಅವರನ್ನು 'ಮಹಾನ್ ಆಟಗಾರ'ನನ್ನಾಗಿ ರೂಪಿಸುತ್ತದೆ. ವೈಭವ್ ಅವರಲ್ಲಿ ಅದ್ಭುತ ಪ್ರತಿಭೆಯಿದ್ದು, ಅದನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋದರೆ ಸುದೀರ್ಘ ಕ್ರಿಕೆಟ್ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂಬುದು ಕ್ರೀಡಾ ತಜ್ಞರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ವಂಡರ್ ಕಿಡ್‌ ಟೆಸ್ಟ್‌ ಕ್ರಿಕೆಟ್‌ ಅನ್ನು ಲಘುವಾಗಿ ತೆಗೆದುಕೊಳ್ಳದೇ ಜವಾಬ್ದಾರಿಯುತ ಹಾಗೂ ತಾಳ್ಮೆಯಿಂದ ಆಡುವುದೆ ಅಗತ್ಯ ಎನ್ನುವುದೇ ವಿಶ್ಲೇಷಕರ ಹೇಳಿಕೆಯ ಹಿಂದಿನ ಅರ್ಥವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+