Vaibhav: 15, 16, 17, 18 ವರ್ಷ ಎಂಬುದು ಮುಖ್ಯವಲ್ಲ.. ಭಾರತಕ್ಕೆ ವೈಭವ್ ಸೂರ್ಯವಂಶಿ ಸಿಕ್ಕಿರುವುದು ಅದೃಷ್ಟ: ಬ್ರೆಟ್ ಲೀ

Vaibhav Sooryavanshi: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾಗಿದ್ದಾರೆ. ಇದೀಗ ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್ ಲೀ ಅವರು ಬಾಲಕ ವೈಭವ್ ಆಟದ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಅವರ ವಯಸ್ಸಿನ ಮೇಲಿನ ಚರ್ಚೆಗಳಿಗಿಂತ ಅವರ ಆಟದ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

'ಬೀರ್ ಬೈಸೆಪ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಬ್ರೆಟ್‌ ಲೀ ಅವರು, ವೈಭವ್ ಸೂರ್ಯವಂಶಿ ಅವರ ಬೆಳವಣಿಗೆ ಮತ್ತು ಅವರಿಗೆ ಎದುರಾಗಬುದಾದ ಸವಾಲುಗಳ ಕುರಿತು ಮಹತ್ವದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ.

Vaibhav Sooryavanshi Brett Lee Praises India s 15-Year-Old boy Gives Important Advice for Future

ವಯಸ್ಸಲ್ಲ, ಆಟ ಮುಖ್ಯ ಎಂದ ಬ್ರೆಟ್‌ ಲೀ

ವೈಭವ್ ಸೂರ್ಯವಂಶಿ ಅವರ ವಯಸ್ಸಿನ ಬಗ್ಗೆ ಬರೀ ಭಾರತ ಅಷ್ಟೇ ಅಲ್ಲದೆ ಹೊರ ದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ ಬ್ರೆಟ್ ಲಿ, '15 ವರ್ಷವೋ ಅಥವಾ 17-18 ವರ್ಷವೋ ಎಂಬುದು ಮುಖ್ಯವಲ್ಲ. ಅವರಿಗೆ ಬ್ಯಾಟಿಂಗ್ ಮಾಡುವ ಅದ್ಭುತ ಸಾಮರ್ಥ್ಯವಿದೆ ಮತ್ತು ಅವರು ಭಾರತೀಯ ಕ್ರಿಕೆಟ್‌ಗೆ ಸಿಕ್ಕ ಅಪರೂಪದ ಅದ್ಭುತ ಪ್ರತಿಭೆ. ಮುಂಬರುವ ದಿನಗಳಲ್ಲಿ ಅವರು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲಿದ್ದಾರೆ,' ಎಂದು ಭವಿಷ್ಯ ನುಡಿದಿದ್ದಾರೆ.

ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ

ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಸೂರ್ಯವಂಶಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ಗೆದ್ದಿದ್ದರು. ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿಗಳ ಬೌಲಿಂಗ್ ಎದುರಿಸಿ ಗಳಿಸಿದ 97 ರನ್‌ಗಳ ಇನಿಂಗ್ಸ್ ಅನ್ನು ನೆನಪಿಸಿಕೊಂಡ ಬ್ರೆಟ್‌ ಲೀ, ಯುವ ಬ್ಯಾಟರ್ ತೋರಿದ ಧೈರ್ಯ ಮತ್ತು ಬಿಗ್‌ ಶಾಟ್‌ಗಳನ್ನ ಬಾರಿಸಿದ ರೀತಿಯನ್ನು ಕೊಂಡಾಡಿದರು. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದ ಬಳಿಕ ಭಾರತೀಯ ಟಿ20 ತಂಡಕ್ಕೆ ಆಯ್ಕೆಯಾದ ವೈಭವ್, ಜಿಂಬಾಬ್ವೆ ಪ್ರವಾಸದಲ್ಲಿ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಯನ್ನೂ ಗಿಟ್ಟಿಕೊಂಡು ಗಮನ ಸೆಳೆದರು.

ವೈಭವ್‌ಗೆ ಬ್ರೆಟ್ ಲೀ ಮಹತ್ವದ ಸಂದೇಶ

ಬ್ಯಾಟಿಂಗ್ ಫಾರ್ಮ್‌ಗಿಂತಲೂ ಮಾನಸಿಕ ಒತ್ತಡವನ್ನು ನಿರ್ವಹಿಸುವುದು ಈ ಯುವ ಆಟಗಾರನಿಗೆ ದೊಡ್ಡ ಸವಾಲಾಗಲಿದೆ ಎಂದು ಬ್ರೆಟ್ ಲೀ ಎಚ್ಚರಿಸಿದ್ದಾರೆ. 'ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅಥವಾ ಫಾರ್ಮ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆದರೆ ಹೆಚ್ಚುತ್ತಿರುವ ನಿರೀಕ್ಷೆಗಳು ಮತ್ತು ಮಾನಸಿಕ ಒತ್ತಡವನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದು ಮುಖ್ಯ. ಅವರನ್ನು ಇನ್ನೂ ಮಗುವಿನಂತೆಯೇ ಇರಲು ಬಿಡಿ, ಅವರ ಮೇಲೆ ಹೆಚ್ಚಿನ ಒತ್ತಡ ಹೇರಬೇಡಿ,' ಎಂದು ಮನವಿ ಮಾಡಿದ್ದಾರೆ.

ತಮ್ಮ ಬೌಲಿಂಗ್ ತಂತ್ರದ ಬ್ರೆಟ್‌ ಲೀ ಹೇಳಿದ್ದೇನು?

ತಮ್ಮ ಬೌಲಿಂಗ್ ತಂತ್ರದ ಬಗ್ಗೆಯೂ ಮಾತನಾಡಿದ ಬ್ರೆಟ್‌ ಲೀ, 'ಹುಕ್ ಮತ್ತು ಪುಲ್ ಶಾಟ್‌ಗಳನ್ನು ಚೆನ್ನಾಗಿ ಆಡುವ ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡುವುದು ತಮಗೆ ಸವಾಲಿನ ಕೆಲಸವಾಗಿತ್ತು. ನಾನು ಎದುರಾಳಿಗಳ ದೇಹದ ಭಾಗವನ್ನು ಗುರಿಯಾಗಿಸಿ ಶಾರ್ಟ್ ಪಿಚ್ ಬೌಲಿಂಗ್ ಮಾಡುತ್ತಿದ್ದೆ. ಅವರು ಸಿಕ್ಸ್ ಬಾರಿಸಿದರೂ ಹಿಂಜರಿಯದೆ ಮತ್ತೆ ಶಾರ್ಟ್ ಬಾಲ್‌ ಎಸೆಯುತ್ತಿದ್ದೆ,' ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ, ವೈಭವ್ ಸೂರ್ಯವಂಶಿ ಕೇವಲ ವೇಗದ ಬೌಲರ್‌ಗಳನ್ನು ಎದುರಿಸುವುದು ಅಷ್ಟೇ ಅಲ್ಲದೆ, ತಮಗಿರುವ ಅಪಾರ ಮಾಧ್ಯಮ ಮತ್ತು ಅಭಿಮಾನಿಗಳ ನಿರೀಕ್ಷೆಯ ಒತ್ತಡವನ್ನು ಸರಿದೂಗಿಸಿಕೊಂಡು ಹೋಗುವುದು ಅತ್ಯಂತ ಮುಖ್ಯ ಎಂಬುದು ಬ್ರೆಟ್ ಲೀ ಅವರ ಹೇಳಿಕೆಯ ಅರ್ಥವಾಗಿದೆ. ಲೀ ಹೇಳಿದಂತೆ ವೈಭವ್ ಮುಂದಿನ ದಿನಗಳಲ್ಲಿ ಯಾವ ರೀತಿ ಮಾನಸಿಕವಾಗಿ ತಯಾರಾಗುತ್ತಾರೆ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+