15ನೇ ವಯಸ್ಸಿಗೆ ವಿಶ್ವ ಮಟ್ಟದ ಶ್ರೇಷ್ಠ ಗೌರವಕ್ಕೆ ಪಾತ್ರರಾದ ವೈಭವ್ ಸೂರ್ಯವಂಶಿ, ಕ್ರಿಕೆಟ್ ದಿಗ್ಗಜರಿಂದ ಮೆಚ್ಚುಗೆಗಳ ಸುರಿಮಳೆ

Vaibhav Sooryavanshi: ಟೈಮ್ ಮ್ಯಾಗಜೀನ್‌ನ 100 ಉದಯೋನ್ಮುಖ ಪ್ರತಿಭೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯ ಕ್ರಿಕೆಟ್‌ನ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಹೆಸರು ಕೂಡ ಇದ್ದು, ಇದು ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಭ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ.

ಭಾರತೀಯ ಕ್ರಿಕೆಟ್‌ನ ಯುವ ಉದಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶ್ವಪ್ರಸಿದ್ಧ 'ಟೈಮ್' ಮ್ಯಾಗಜೀನ್ ಬಿಡುಗಡೆ ಮಾಡಿರುವ '100 ರೈಸಿಂಗ್ ಸ್ಟಾರ್ಸ್' (100 Rising Stars 2026) ಸಾಲಿನ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Vaibhav Sooryavanshi 15-Year-Old Team India Youngest Cricketer Named in TIME100 Next 2026 Viral

ಜಾಗತಿಕ ಮಟ್ಟದ ಶ್ರೇಷ್ಠ ಗೌರವಕ್ಕೆ ಪಾತ್ರನಾದ ವೈಭವ್

ವಿವಿಧ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಯುವ ಪ್ರಭಾವಿ ನಾಯಕರು, ಕ್ರೀಡಾಪಟುಗಳು ಮತ್ತು ಸಾಧಕರನ್ನು ಗುರುತಿಸಿ ಟೈಮ್ ಸಂಸ್ಥೆಯು ಈ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ವಿಶ್ವದ ಸಾಲು ಸಾಲು ಸಾಧಕರ ನಡುವೆ 15ರ ಹರೆಯದ ಭಾರತೀಯ ಕ್ರಿಕೆಟರ್ ಆಯ್ಕೆ ಆಗಿರುವುದು ಭಾರತೀಯ ಕ್ರೀಡಾಲೋಕಕ್ಕೆ ಹೆಮ್ಮೆಯ ವಿಚಾರವಾಗಿದೆ.

ಯಾರು ಈ ವೈಭವ್ ಸೂರ್ಯವಂಶಿ?

ಬಿಹಾರ ಮೂಲದ ವೈಭವ್ ಸೂರ್ಯವಂಶಿ ತಮ್ಮ ಅದ್ಭುತ ಬ್ಯಾಟಿಂಗ್ ಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟು ವಿಶ್ವದ ಗಮನ ಸೆಳೆದವರು. ಎಡಗೈ ಬ್ಯಾಟರ್ ಆಗಿರುವ ವೈಭವ್, ರಣಜಿ ಟ್ರೋಫಿ ಸೇರಿದಂತೆ ಪ್ರಥಮ ದರ್ಜೆ ಕ್ರಿಕೆಟ್‌‌ಗೆ ಅತಿ ಕಿರಿಯ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ದಾಖಲೆ ಹೊಂದಿದ್ದಾರೆ. ಅಲ್ಲದೆ, ಭಾರತೀಯ ಅಂಡರ್-19 ಕ್ರಿಕೆಟ್ ತಂಡದಲ್ಲಿಯೂ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ಐಪಿಎಲ್‌ ಹರಾಜಿನಲ್ಲಿ ಸದ್ದು ಮಾಡಿದ್ದ 'ವಂಡರ್ ಕಿಡ್'

ಐಪಿಎಲ್ ಹರಾಜಿನಲ್ಲಿಯೂ ವೈಭವ್ ಸೂರ್ಯವಂಶಿ ಅವರು ಹೊಸ ಇತಿಹಾಸ ನಿರ್ಮಿಸಿದ್ದರು. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಈ ಯುವ ಪ್ರತಿಭೆಯನ್ನು ಭಾರೀ ಮೊತ್ತಕ್ಕೆ ಖರೀದಿಸಿದ್ದು, ಈ ಮೂಲಕ ಹರಾಜಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ಇವರು ಪಾತ್ರರಾಗಿದ್ದರು. ಮೈದಾನದಲ್ಲಿ ಯಾವುದೇ ಭಯವಿಲ್ಲದೆ ವಿಶ್ವಪ್ರಸಿದ್ಧ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಇವರ ಶೈಲಿ, ಅನೇಕ ಮಾಜಿ ಕ್ರಿಕೆಟಿಗರು ಹಾಗೂ ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.

ಟೈಮ್ ಮ್ಯಾಗಜೀನ್ ಶ್ಲಾಘನೆ

ಟೈಮ್ ಮ್ಯಾಗಜೀನ್ ವೈಭವ್ ಅವರ ಕ್ರೀಡಾ ಪಯಣ, ಕಠಿಣ ಪರಿಶ್ರಮ ಮತ್ತು ಮೈದಾನದಲ್ಲಿ ತೋರುವ ಅದ್ಭುತ ಮನೋಭಾವವನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. 'ವೈಭವ್ ಚಿಕ್ಕ ವಯಸ್ಸಿನವರಾಗಿದ್ದರೂ, ಜಾಗತಿಕ ಮಟ್ಟದ ಒತ್ತಡವನ್ನು ನಿಭಾಯಿಸಿ ಅತ್ಯದ್ಭುತ ಆಟ ಪ್ರದರ್ಶಿಸುವ ಇವರ ಸಾಮರ್ಥ್ಯವು ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್‌‌ಗೆ ದೊಡ್ಡ ಆಸ್ತಿಯಾಗಲಿದೆ,' ಎಂದು ತಿಳಿಸಿದೆ.

ಭಾರತೀಯ ಕ್ರೀಡಾಲೋಕಕ್ಕೆ ಹೆಮ್ಮೆಯ ವಿಚಾರ

ಜಾಗತಿಕ ಕ್ರೀಡಾ ವಲಯದಲ್ಲಿ ಭಾರತೀಯ ಯುವ ಆಟಗಾರರ ಪ್ರಭಾವ ಹೆಚ್ಚುತ್ತಿರುವುದಕ್ಕೆ ಈ ಗೌರವವೇ ಸಾಕ್ಷಿಯಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಜಾಗತಿಕ ಮನ್ನಣೆ ಗಳಿಸಿರುವ ವೈಭವ್ ಸೂರ್ಯವಂಶಿ ಅವರಿಗೆ ಕ್ರೀಡಾಭಿಮಾನಿಗಳು, ದಿಗ್ಗಜ ಕ್ರಿಕೆಟಿಗರು ಹಾಗೂ ರಾಜಕೀಯ ಗಣ್ಯರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇವರ ಈ ಸಾಧನೆ ದೇಶದ ಲಕ್ಷಾಂತರ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ. ಅಲ್ಲದೆ, ಇವರು ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದ ಸಾಧನೆಗಳನ್ನು ಮಾಡಿ ಭಾರತದ ಕೀರ್ತಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+