ಐಸಿಸಿ ವಿಶ್ವಕಪ್: ವಿರಾಟ್ ಕೊಹ್ಲಿ ಬ್ಯಾಟ್ ಬ್ರಿಟನ್ ಪ್ರಧಾನಿಗೆ ಗಿಫ್ಟ್!
ವಿರಾಟ್ ಕೊಹ್ಲಿ ಅಬ್ಬರ ಎಲ್ಲೆಲ್ಲೂ ಕೇಳಿಬರುತ್ತಿದೆ. ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಇವರೇ ಫೆವರಿಟ್, ಕ್ರಿಕೆಟ್ ಅಖಾಡದಲ್ಲೂ ಕೊಹ್ಲಿಯೇ ಬಾಸ್. ಹೀಗಿದ್ದಾಗ ಬ್ರಿಟನ್ ಪಿಎಂ ದಿಢೀರ್ ವಿರಾಟ್ ಕೊಹ್ಲಿ ಹಸ್ತಾಕ್ಷರ ಇರುವ ಬ್ಯಾಟ್ ಸ್ವೀಕರಿಸಿದ್ರೆ ಹೇಗೆ ಆಗಬೇಡ? ಹೌದು ಈ ಮಾತು ಈಗ ನಿಜವಾಗಿದೆ, ಸ್ವತಃ ಭಾರತದ ವಿದೇಶಾಂಗ ಸಚಿವರೇ ಬ್ರಿಟನ್ ಪ್ರಧಾನಿಗೆ ಈ ವಿಶೇಷ ಉಡುಗೊರೆ ತಲುಪಿಸಿದ್ದಾರೆ.
ಅಂದಹಾಗೆ ನಿನ್ನೆಯಷ್ಟೇ ಭಾರತ, ನೆದರ್ಲೆಂಡ್ಸ್ ವಿರುದ್ಧ ಐತಿಹಾಸಿಕ ಜಯ ದಾಖಲಿಸುವ ಮೂಲಕ ಸೆಮಿಫೈನಲ್‌ಗೆ ಸಜ್ಜಾಗಿದೆ. ನಿನ್ನೆ ಭಾರತ ತಂಡ 410 ರನ್ ಗಳಿಸಿ ಡಚ್ಚರ ತಂಡಕ್ಕೆ 411 ರನ್ ಗುರಿ ನೀಡಿತ್ತು. ಆದರೆ, ಭಾರತದ ಬೌಲಿಂಗ್ ದಾಳಿಗೆ ತರಗೆಲೆ ರೀತಿ ಕೊಚ್ಚಿಹೋದ ಡಚ್ಚರು 250 ರನ್‌ಗೆ ಬಿಡಾರ ಖಾಲಿ ಮಾಡಿದರು. ನೆದರ್ಲೆಂಡ್ಸ್ ತಂಡವು ಸೋಲಿನ ಮೂಲಕ ಅಂಕಪಟ್ಟಿಗೆ ಕೊನೇ ಸ್ಥಾನದಲ್ಲಿ ಉಳಿಯಿತು. ಇದೇ ವೇಳೆ ದೂರದ ಬ್ರಿಟನ್‌ನಲ್ಲಿ ಭಾರತದ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಬ್ರಿಟನ್ ಪ್ರಧಾನಿಗೆ ಎಂದೂ ಮರೆಯಲಾಗದ ಗಿಫ್ಟ್ ಕೊಟ್ಟಿದ್ದಾರೆ.

ಕೊಹ್ಲಿ ಅಭಿಮಾನಿ ಬ್ರಿಟನ್ ಪ್ರಧಾನಿ!
ಹೌದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ವಿರಾಟ್ ಕೊಹ್ಲಿ ಅವರ ಅಭಿಮಾನಿ. ಈ ಕಾರಣಕ್ಕೆ ಕೊಹ್ಲಿ ಆಟವನ್ನ ಮತ್ತು ಅವರ ಸಾಧನೆಯನ್ನ ತುಂಬಾ ಇಷ್ಟ ಪಡುತ್ತಾರೆ. ಈ ಕಾರಣಕ್ಕೆ ರಿಷಿ ಸುನಕ್ ಅವರಿಗೆ ಕೊಹ್ಲಿ ಆಟೋಗ್ರಾಫ್ ಇರುವ ಬ್ಯಾಟ್ ಕೊಟ್ಟಿದ್ದಾರೆ ಎಸ್ ಜೈಶಂಕರ್ ಅವರು. ನಿನ್ನೆ ಅಂದ್ರೆ ಭಾನುವಾರ ದೀಪಾವಳಿ ಶುಭಾಶಯ ಕೋರಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಇದೇ ವೇಳೆ ಟೀಂ ಇಂಡಿಯಾ ಬ್ಯಾಟಿಂಗ್ ಲೆಜೆಂಡ್ ವಿರಾಟ್ ಕೊಹ್ಲಿ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್ ಗಿಫ್ಟ್ ಆಗಿ ನೀಡಿದ್ದಾರೆ.
Delighted to call on Prime Minister @RishiSunak on #Diwali Day. Conveyed the best wishes of PM @narendramodi.
— Dr. S. Jaishankar (@DrSJaishankar) November 12, 2023
India and UK are actively engaged in reframing the relationship for contemporary times.
Thank Mr. and Mrs. Sunak for their warm reception and gracious hospitality. pic.twitter.com/p37OLqC40N
ಭಾರತ ಮೂಲದ ಬ್ರಿಟನ್ ಪ್ರಧಾನಿ
ಜಗತ್ತಿನ ಹಲವು ದೇಶಗಳಲ್ಲಿ ಭಾರತ ಮೂಲದ ವ್ಯಕ್ತಿಗಳೇ ಉನ್ನತ ಹುದ್ದೆಯಲ್ಲಿ ಇದ್ದಾರೆ. ಅದರಲ್ಲೂ ಒಂದು ಕಾಲದಲ್ಲಿ ಭಾರತವನ್ನು ಆಳಿದ್ದ ಆಂಗ್ಲರು ಅಂದ್ರೆ ಬ್ರಿಟನ್ ದೇಶಕ್ಕೀಗ ಭಾರತ ಮೂಲದ ವ್ಯಕ್ತಿಯೇ ಮುಖ್ಯಸ್ಥರಾಗಿದ್ದಾರೆ. ಹೀಗಿದ್ದರೂ ಭಾರತ ಮೂಲದವರಾದ ರಿಷಿ ಸುನಕ್ ಅವರು, ತಮ್ಮ ತಾಯ್ನಾಡಿನ ಸಂಸ್ಕೃತಿ ಮತ್ತು ಶ್ರದ್ಧೆ ಮರೆತಿಲ್ಲ. ವಿರಾಟ್ ಕೊಹ್ಲಿ ಬಗ್ಗೆಯೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಅಪಾರ ಪ್ರೀತಿ ಇದ್ದು, ಇದೀಗ ವಿರಾಟ್ ಸಹಿ ಮಾಡಿದ ಬ್ಯಾಟ್ ಪಡೆದು ಖುಷ್ ಆಗಿದ್ದಾರೆ.
ಒಟ್ನಲ್ಲಿ ಭಾರತ ಮತ್ತು ಬ್ರಿಟನ್ ಸಂಬಂಧ ಸುಧಾರಿಸುತ್ತಿದೆ. ಇತ್ತೀಚಿನ ದಿನದಲ್ಲಿ ಎರಡೂ ದೇಶದ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತಿದೆ. ಅದ್ರಲ್ಲೂ ಭಾರತ ಮೂದಲವರೇ ಬ್ರಿಟನ್ ಪ್ರಧಾನಿಯಾದ ಸಮಯದಲ್ಲಿ ಭಾರತಕ್ಕೆ ಇನ್ನಷ್ಟು ಲಾಭವಾಗುತ್ತಿದೆ. ಈಗ ಅದರ ಮುಂದುವರಿದ ಭಾಗವಾಗಿ, ಕೊಹ್ಲಿ ಬ್ಯಾಟ್ ಸ್ವೀಕರಿಸಿ ಗಮನ ಸೆಳೆದಿದ್ದಾರೆ ಬ್ರಿಟನ್ ಪಿಎಂ ರಿಷಿ ಸುನಕ್.












Click it and Unblock the Notifications