U19 World Cup: ಭಾರತ-ಅಫ್ಘಾನಿಸ್ತಾನ ನಡುವೆ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯ: ಸಮಯ, ಸ್ಥಳ, ತಂಡಗಳ ವಿವರ
U19 World Cup: ಅಂಡರ್-19 ಕ್ರಿಕೆಟ್ ವಿಶ್ವಕಪ್ನಲ್ಲಿ ನಿರಂತರ ಗೆಲುವಿನೊಂದಿಗೆ ಭರ್ಜರಿ ಭಾರತದ ಭರ್ಜರಿ ಲಯದಲ್ಲಿದೆ. ಬುಧವಾರ (ಫೆಬ್ರವರಿ 4) ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಈ ಮೂಲಕ ಈವರೆಗೆ ಒಂದೇ ಒಂದು ಸೋಲು ಕಂಡಿಲ್ಲದ ಟೀಮ್ ಇಂಡಿಯಾವಯ ಫೈನಲ್ ಪ್ರವೇಶಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. ಹಾಗಾದ್ರೆ ಸಮಯ, ಸ್ಥಳ, ತಂಡದ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆರನೇ ವಿಶ್ವಕಪ್ ಗೆಲ್ಲುವ ಭರವಸೆಯಲ್ಲಿ ಭಾರತ: ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬಾರಿ ವಿಶ್ವಕಪ್ ಗೆದ್ದಿರುವ ತಂಡ ಎಂಬ ಹೆಗ್ಗಳಿಕೆಯನ್ನು ಭಾರತ ಹೊಂದಿದ್ದು, 2000, 2008, 2012, 2018 ಮತ್ತು 2022ರಲ್ಲಿ ಚಾಂಪಿಯನ್ ಆಗಿದೆ. ನಾಲ್ಕು ಬಾರಿ ಟ್ರೋಫಿ ಗೆದ್ದಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಇದೀಗ ಭಾರತ ತಂಡವು ದಾಖಲೆಯ ಆರನೇ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಮುಂದಿನ ಹೆಜ್ಜೆ ಇಡುವ ಗುರಿ ಹೊಂದಿದೆ.

ಪ್ರಸ್ತುತ ಟೂರ್ನಿಯಲ್ಲಿ ಭಾರತ ಐದು ಪಂದ್ಯಗಳಲ್ಲಿ ಐದು ಜಯಗಳೊಂದಿಗೆ ಅಜೇಯ ಆಗಿದ್ದು, ಸೂಪರ್ ಸಿಕ್ಸ್ ಹಂತದಲ್ಲಿ ಪಾಕಿಸ್ತಾನದ ವಿರುದ್ಧ 58 ರನ್ಗಳ ಅಂತರದ ಭರ್ಜರಿ ಗೆಲುವು ಕಂಡಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲೂ ತಂಡದ ಪ್ರದರ್ಶನ ಸ್ಥಿರವಾಗಿದ್ದು, ಸಮತೋಲನದ ಆಟಲು ಟೀಮ್ ಇಂಡಿಯಾದ ಪ್ರಮಖ ಬಲವಾಗಿದೆ ಅಂದ್ರೆ ತಪ್ಪಾಗಲಾರದು.
ಇನ್ನೂ, ಅಫ್ಘಾನಿಸ್ತಾನ ತಂಡವು ನಾಲ್ಕು ಗೆಲುವುಗಳೊಂದಿಗೆ ಸೆಮಿಫೈನಲ್ ತಲುಪಿ ಗಮನ ಸೆಳೆದಿದೆ. ಶ್ರೀಲಂಕಾ ವಿರುದ್ಧ ಮಾತ್ರ ಸೋಲು ಕಂಡಿದ್ದರೂ, ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ, ಇಂದಿನ ಫಾರ್ಮ್ ಹಾಗೂ ಅನುಭವದ ಆಧಾರದಲ್ಲಿ ಭಾರತ ತಂಡವೇ ಸ್ವಲ್ಪ ಮೇಲುಗೈ ಸಾಧಿಸಿದಂತೆ ಕಾಣುತ್ತಿದೆ. ಇದಕ್ಕೆ ಭರ್ಜರಿ ಸಿದ್ಧತೆಯನ್ನು ಕೂಡ ಭಾರತದ ನಡೆಸಿದೆ ಎನ್ನಲಾಗುತ್ತಿದೆ.
ಭಾರತ ತಂಡ: ವೈಭವ್ ಸೂರ್ಯವಂಶಿ, ಆ್ಯರೊನ್ ಜಾರ್ಜ್, ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ, ಅಭಿಜ್ಞಾನ್ ಕುಂಡು, ವೇದಾಂತ್ ತ್ರಿವೇದಿ, ಕನಿಷ್ಕ್ ಚೌಹಾಣ್, ಆರ್.ಎಸ್.ಅಂಬರೀಶ್, ಖಿಲನ್ ಪಟೇಲ್, ಹೆನಿಲ್ ಪಟೇಲ್, ದೀಪೇಶ್ ದೇವೇಂದ್ರನ್.
ಅಫ್ಘಾನಿಸ್ತಾನ: ಫೈಸಲ್ ಶಿನೊಝಾದಾ, ಖಲೀದ್ ಅಹ್ಮದ್ಝೈ, ಉಸ್ಮಾನ್ ಸಾದತ್, ಉಝೈರುಲ್ಲಾ ನಿಯಾಝೈ, ಮಹಬೂಬ್ ಖಾನ್(ನಾಯಕ), ಅಝೀಝುಲ್ಲಾ ಮಿಯಾಖಿಲ್, ನೂರಿಸ್ತಾನಿ ಉಮರ್ಝೈ, ಅಬ್ದುಲ್ ಅಝೀಝ್, ರೂಹುಲ್ಲಾ ಅರಬ್, ವಹೀದುಲ್ಲಾ ಝದ್ರಾನ್, ಅಖಿಲ್ ಖಾನ್.
ಐದು ಬಾರಿ ಟ್ರೋಫಿ ಗೆದ್ದ ಭಾರತ
* 2000
* 2008
* 2012
* 2018
* 2022
ನಾಲ್ಕು ಬಾರಿ ಟ್ರೋಫಿ ಗೆದ್ದ ಆಸ್ಟ್ರೇಲಿಯಾ
* 1988
* 2002
* 2010
* 2024
ಭಾರತ ತಂಡದಿಂದ ಉತ್ತಮ ಪ್ರದರ್ಶನ: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿ ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುವ ಪ್ರಮುಖ ಅವಕಾಶವಾಗಿದೆ. ಈ ಟೂರ್ನಿಯಲ್ಲಿ ವಿಶ್ವದ ವಿವಿಧ ದೇಶಗಳ ಯುವ ತಂಡಗಳು ಭಾಗವಹಿಸುತ್ತಿದ್ದು, ಭವಿಷ್ಯದ ಕ್ರಿಕೆಟ್ ತಾರೆಯರು ಇಲ್ಲಿ ಬೆಳೆಯುತ್ತಾರೆ. ಭಾರತ ತಂಡ ಈ ಟೂರ್ನಿಯಲ್ಲಿ ಸದಾ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದೆ.
-
Namma Metro: ಐಪಿಎಲ್ ಪಂದ್ಯದ ದಿನ ದಟ್ಟಣೆ ಇಲ್ಲದೇ ಓಡಾಡಿ, ಮೆಟ್ರೋ ಸೇವಾವಧಿ ವಿಸ್ತರಣೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?












Click it and Unblock the Notifications