Get Updates
Get notified of breaking news, exclusive insights, and must-see stories!

Bengaluru Karaga: ಬೆಂಗಳೂರು ಕರಗ ಮಹೋತ್ಸವ ಅವಧಿಯಲ್ಲಿ 12 ದಿನಗಳಲ್ಲಿ 455 ಟನ್ ತ್ಯಾಜ್ಯ ವಿಲೇವಾರಿ

Bengaluru Karaga: ಬೆಂಗಳೂರು ಕರಗ ಮಹೋತ್ಸವ ಅವಧಿಯಲ್ಲಿ 12 ದಿನಗಳಲ್ಲಿ 455 ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ದೇವಸ್ಥಾನ ಆವರಣ, ದೇವಸ್ಥಾನ ರಸ್ತೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾರ್ಯ ಯಶಸ್ವಿ ನಿರ್ವಹಣೆ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಾಹಿತಿ ನೀಡಿದೆ. ಇನ್ನು ಬೆಂಗಳೂರು ಕರಗ ಮಹೋತ್ಸವಕ್ಕಾಗಿ ಹಗಲಿರುಳು ಪೂರ್ವ ಸಿದ್ಧತೆಗೆ ಸ್ವಚ್ಛತೆಗೆ, ಶ್ರಮಿಸಿದ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಿಗೆ, ಸ್ವಚ್ಛತೆ ಸಿಬ್ಬಂದಿಗೆ ಬೆಂಗಳೂರು ಕೇಂದ್ರ್ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಧನ್ಯವಾದಗಳು ತಿಳಿಸಿದ್ದಾರೆ .

ಪ್ರತಿದಿನ ಎರಡು ಸರದಿಯಂತೆ ಸ್ವಚ್ಛತೆ ಕಾರ್ಯ ನಿರ್ವಹಣೆ

ಹೆಚ್ಚುವರಿಯಾಗಿ 2 ಕಾಂಪ್ಯಾಕ್ಟರ್ ಬಳಕೆ

35 ಹೆಚ್ಚುವರಿ ಸಿಬ್ಬಂದಿಗಳು ಕಾರ್ಯ ನಿರ್ವಹಣೆ

15 ಹೆಚ್ಚುವರಿ ಆಟೋ ಟಿಪ್ಪರ್ ಗಳ ಬಳಕೆ

2026ನೇ ಸಾಲಿನ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಪ್ರಯುಕ್ತ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಕರಗ ಮಹೋತ್ಸವ ಅವಧಿಯಲ್ಲಿ 12 ದಿನಗಳಲ್ಲಿ ಸುಮಾರು 455 ಟನ್ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದ್ದಾರೆ.

Bengaluru Karaga

ದಿನಾಂಕ: 23-03-2026 ರಿಂದ 03-04-2026 ವರೆಗೆ ಕಳೆದ 12 ದಿನಗಳಲ್ಲಿ ಕರಗ ಮಹೋತ್ಸವದ ಕೇಂದ್ರ ಬಿಂದು ಸ್ಥಳ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿನ ಅಲಂಕಾರಿಕ ಹೂವು, ಸೇರಿದಂತೆ ದಿನನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಸೇರಿದಂತೆ ಕರಗ ಸಂಚರಿಸುವ ಪ್ರಮುಖ ರಸ್ತೆ ಹಾಗೂ ಸ್ಥಳಗಳ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಕಸಗುಡಿಸಿ, ತ್ಯಾಜ್ಯ ವಿಲೇವಾರಿಯನ್ನು ಯಶಶ್ವಿಯಾಗಿ ನಿರ್ವಹಣೆ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪ್ರತಿದಿನ ಮಧ್ಯಾಹ್ನ 2.30 ರಿಂದ ರಾತ್ರಿ 9.30 ವರೆಗೆ ಹಾಗೂ ರಾತ್ರಿ 9.30 ರಿಂದ ಬೆಳಿಗ್ಗೆ 6.30 ವರೆಗೆ ಎರಡು (ಪಾಳಿಯಂತೆ) ಸರದಿಯಂತೆ ಸ್ವಚ್ಛತೆ ಕಾರ್ಯ ನಿರ್ವಹಣೆ ಮಾಡಲಾಗಿದ್ದು, 35 ಹೆಚ್ಚುವರಿ ಸಿಬ್ಬಂದಿಗಳು, ಹೆಚ್ಚುವರಿಯಾಗಿ 2 ಕಂಪ್ಯಾಕ್ಟರ್ ಗಳ ಬಳಕೆ ಹಾಗೂ 15 ಹೆಚ್ಚುವರಿ ಆಟೋ ಟಿಪ್ಪರ್ ಗಳ ಬಳಕೆ ಮಾಡಲಾಗಿದೆ.

ಜಟ್ಟಿಂಗ್ ಪ್ರೆಶರ್ ಯಂತ್ರಗಳ ಬಳಕೆ

ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗ ಸ್ವಚ್ಛತೆಗೆ ಜಟ್ಟಿಂಗ್ ಪ್ರೆಶರ್ ಯಂತ್ರಗಳ ಬಳಕೆ ಮೂಲಕ ಸ್ವಚ್ಛಗೊಳಿಸಲಾಗಿತ್ತು. ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಸತತವಾಗಿ 3 ದಿನಗಳ ಕಾಲ ವಿದ್ಯುತ್ ಅಲಂಕಾರ, ರಸ್ತೆ ಗುಂಡಿ ಮುಚ್ಚುವುದು, ಸ್ವಚ್ಛತೆ ಕಾರ್ಯ ಹಾಗೂ ಇತರೆ ಪೂರ್ವ ಸಿದ್ಧತೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.

ಕರಗ ಮಹೋತ್ಸವಕ್ಕೆ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯುಕ್ತರಿಂದ ಧನ್ಯವಾದಗಳು

ಇನ್ನು ಬೆಂಗಳೂರು ಕರಗ ಮಹೋತ್ಸವಕ್ಕೆ ಕೇಂದ್ರ ನಗರ ಪಾಲಿಕೆಯ ವತಿಯಿಂದ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ನಿರಂತರವಾಗಿ ಸಭೆ ನಡೆಸಿ ಸ್ಥಳ ಪರಿಶೀಲನೆ ನಡೆಸಿ ಪೂರ್ವ ಸಿದ್ಧತೆಗಳನ್ನು ಹಾಗೂ ಸ್ವಚ್ಛತೆ ಕಾರ್ಯ ಯಶಸ್ವಿ ನಿರ್ವಹಣೆಗೆ ಶ್ರಮಿಸಿದ ಅಭಿವೃದ್ಧಿ ಹೆಚ್ಚುವರಿ ಆಯುಕ್ತರಾದ ದಲ್ಜಿತ್ ಕುಮಾರ್ ಅವರಿಗೆ, ಜಂಟಿ ಆಯುಕ್ತರಾದ ಹೇಮಂತ್ ಅವರಿಗೆ, ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಅವರಿಗೆ, ಚಿಕ್ಕಪೇಟೆ, ಗಾಂಧಿನಗರ, ಶಿವಾಜಿನಗರ ವಿಭಾಗಗಳ ಕಾರ್ಯಪಾಲಕ ಇಂಜಿನಿಯರ್‌ಗಳಿಗೆ, ವಿದ್ಯುತ್ ಕಾರ್ಯಪಾಲಕ ಇಂಜಿನಿಯರ್, ಬೆಂ.ಘ. ತ್ಯಾ.ನಿ.ನಿ ದ ಡಿಜಿಎಂ ಭೀಮೇಶ್ ಅವರಿಗೆ, ಚಿಕ್ಕಪೇಟೆ ವಿಭಾಗದ ಎಜಿಎಂ, ಮಾರ್ಷಲ್‌ಗಳಿಗೆ, ಆಟೋ ಟಿಪ್ಪರ್ ಚಾಲಕರಿಗೆ ವಿಶೇಷವಾಗಿ ಪೌರಕಾರ್ಮಿಕರಿಗೆ ಹಾಗೂ ಸಹಕರಿಸಿದ ಇತರೆ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯುಕ್ತರು ಧನ್ಯವಾದಗಳನ್ನು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+