ರಾಜಸ್ಥಾನ ರಾಯಲ್ಸ್ ಪರ ಜೋಸ್ ಬಟ್ಲರ್ ಸ್ಥಾನ ತುಂಬುವವರು ಯಾರು?

ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ವಿದೇಶಿ ಆಟಗಾರರು ರಾಷ್ಟ್ರೀಯ ತಂಡವನ್ನು ಸೇರಲು ಐಪಿಎಲ್‌ ತಂಡವನ್ನು ತೊರೆಯುತ್ತಿದ್ದಾರೆ. ಇತ್ತೀಚಿಗೆ ಆರ್‌ಸಿಬಿ ತಂಡದ ವಿಲ್‌ ಜಾಕ್ಸ್‌ ತಂಡದಿಂದ ಹೊರ ನಡೆದಿದ್ದು ಎಲ್ಲರಿಗೂ ತಿಳಿದಿದೆ. ಇವರು ಇಂಗ್ಲೆಂಡ್ ತಂಡವನ್ನು ಸೇರಿಕೊಂಡಿದ್ದಾರೆ. ಇವರಂತೆ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್‌ ಸಹ ತಂಡವನ್ನು ತೊರೆದಿದ್ದಾರೆ.

ಐಪಿಎಲ್‌ 2024ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿದ್ದರಿಂದ ಇಂದು ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಸ್ಥಾನವನ್ನು ತುಂಬ ಬಲ್ಲ ಓಪನರ್ ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಜೋಸ್ ಬಟ್ಲರ್ ನಿರ್ಗಮನದ ನಂತರ ರಾಯಲ್ಸ್‌ನ ಒತ್ತಡಕ್ಕೆ ಒಳಗಾದಂತೆ ಕಾಣುತ್ತಿದೆ.. ಓಪನಿಂಗ್‌ನಲ್ಲಿ ಜೋಸ್ ಬಟ್ಲರ್ ಬದಲಿಗೆ ಯಾರು? ಎಂಬ ಪ್ರಶ್ನೆ ಉದ್ಭವಿಸಿದೆ. ಜೋಸ್‌ ಬಟ್ಲರ್ ಸ್ಥಾನವನ್ನು ಅವರದ್ದೇ ದೇಶದ ಆಟಗಾರ ತುಂಬಬಹುದು ಎಂದು ಅಂದಾಜಿಸಲಾಗಿದೆ.

Top Picks Potential Replacements for Jos Buttler in RR Squad for Upcoming IPL 2024 Matches

ಆಂಗ್ಲ ಕ್ರಿಕೆಟಿಗ ಟಾಮ್ ಕೊಹ್ಲರ್ ಕಾಡ್ಮೋರ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಓಪನಿಂಗ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಟಾಮ್ ಕೊಹ್ಲರ್ ಕ್ಯಾಡ್ಮೋರ್ ಅಭ್ಯಾಸದ ವೀಡಿಯೊವನ್ನು ರಾಜಸ್ಥಾನ್ ರಾಯಲ್ಸ್ ತನ್ನ ಸಾಮಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಅವರು ನೆಟ್ಸ್‌ನಲ್ಲಿ ತಮ್ಮ ಕ್ಷಮತೆಯನ್ನು ತೋರಿಸುತ್ತಿದ್ದಾರೆ.

ಟಾಮ್ ಕೊಹ್ಲರ್-ಕ್ಯಾಡ್ಮೋರ್ ಯಾರು?

29 ವರ್ಷದ ಟಾಮ್ ಕೊಹ್ಲರ್-ಕ್ಯಾಡ್ಮೋರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ಅವರು ಅನೇಕ ಟಿ-20 ಲೀಗ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. 190 T-20 ಪಂದ್ಯಗಳಲ್ಲಿ, ಅವರು 28.01 ರ ಸರಾಸರಿಯಲ್ಲಿ ಮತ್ತು 139.89 ರ ಸ್ಟ್ರೈಕ್ ರೇಟ್‌ನಲ್ಲಿ 4734 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 34 ಅರ್ಧಶತಕಗಳು ಸೇರಿವೆ. ಮಾರ್ಚ್‌ನಲ್ಲಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ರಾಜಸ್ಥಾನ್ ರಾಯಲ್ಸ್ ತಂಡ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.

Top Picks Potential Replacements for Jos Buttler in RR Squad for Upcoming IPL 2024 Matches

ಭಾರತೀಯರಿಗೂ ಇದೆ ಚಾನ್ಸ್

ಇವರನ್ನು ಬಿಟ್ಟರೆ ಕುನಾಲ್ ಸಿಂಗ್ ರಾಥೋಡ್ ಸಹ ರಾಜಸ್ಥಾನ ಪರ ಇನ್ನಿಂಗ್ಸ್ ಆರಂಭಿಸಬಹುದು. ಇವರು ರಣಜಿ ಟ್ರೋಫಿಯಲ್ಲಿ ತಮ್ಮ ಪ್ರಭಾವಶಾಲಿ ಪ್ರದರ್ಶನದೊಂದಿಗೆ ರಾಜಸ್ಥಾನ ರಾಯಲ್ಸ್ ತಂಡದ ಗಮನ ಸೆಳೆದರು. ಅವರು 2022 ರಿಂದ ದೇಶೀಯ ಟೂರ್ನಿಯಲ್ಲಿ ರಾಜಸ್ಥಾನಕ್ಕಾಗಿ ಆಡುತ್ತಿದ್ದಾರೆ ಮತ್ತು RR ಅವರ ಮೇಲೆ ಹೂಡಿಕೆ ಮಾಡಿದೆ.

ರಾಜಸ್ಥಾನ ರಾಯಲ್ಸ್‌ ಬೆಂಚ್ ಕಾಯುತ್ತಿರುವ ತನುಷ್ ಕೋಟ್ಯಾನ್ ಸಹ ಐಪಿಎಲ್‌ಗೆ ಪದಾರ್ಪಣೆ ಮಾಡಬಹುದು. ಭಾರತದ ಯುವ ಕ್ರಿಕೆಟಿಗ ದೇಶೀಯ ಸರ್ಕ್ಯೂಟ್‌ನಲ್ಲಿ ಮುಂಬೈನ ಪ್ರತಿಭಾವಂತ ಆಟಗಾರ. ಆಸ್ಟ್ರೇಲಿಯಾದ ಸ್ಪಿನ್ನರ್ ಆಡಮ್ ಝಂಪಾಗೆ ಬದಲಿಯಾಗಿ ಐಪಿಎಲ್ 2024 ರಲ್ಲಿ ರಾಯಲ್ಸ್ ಅವರ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಿತ್ತು. ಆರ್‌ಆರ್‌ ತನ್ನ ಬೌಲಿಂಗ್ ಬಲಡಪಸಿಕೊಳ್ಳಲು ಇವರಿಗೆ ಅವಕಾಶವನ್ನು ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+