IPL 2024: ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಡ್ ಬೌಲ್‌ ಮಾಡಿದ ಬೌಲರ್ಸ್‌

ಇಂಡಿಯನ್ ಪ್ರೀಮಿಯರ್‌ ಲೀಗ್‌ ಭಾರತದಲ್ಲಿ ಸದ್ಯ ಸದ್ದು ಮಾಡುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ. ಅಲ್ಲದೆ ಪ್ಲೇ ಆಫ್‌ಗೆ ತಮ್ಮ ತಂಡ ಹೇಗೆ ಪ್ರವೇಶಿಸಲಿದೆ ಎಂಬ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಐಪಿಎಲ್‌ನಲ್ಲಿ ಬೌಲರ್‌ಗಳಿಗೆ ಬೌಲ್‌ ಮಾಡುವುದು ಸವಾಲೇ ಆಗಿರುತ್ತದೆ.

ಐಪಿಎಲ್‌ನಲ್ಲಿ ಬೌಲರ್‌ಗಳು ಸಿಗುವ 4 ಓವರ್‌ಗಲ್ಲಿ ಎದುರಾಳಿ ಬ್ಯಾಟರ್‌ ರಣ ತಂತ್ರ ಅರಿತು ಔಟ್‌ ಮಾಡುವುದು. ಅಲ್ಲದೆ ರನ್‌ಗಳಿಗೆ ಕಡಿವಾಣ ಹಾಕುವ ಜವಾಬ್ದಾರಿ ಬೌಲರ್‌ಗಳಿಗೆ ಇರುತ್ತದೆ. ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡ ಬೌಲರ್ಸ್‌ಗಳು ಕೊಲವೊಮ್ಮೆ ಹೆಚ್ಚು ರನ್ ನೀಡಿಯೂ ಸುದ್ದಿಯಾಗ್ತಾರೆ. ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಎದುರಾಳಿಗೆ ರನ್‌ ನೀಡದಂತೆ ತಡೆಯಲು ಹೋಗಿ ಹಲವು ಬಾರಿ ವೈಡ್‌ ಬೌಲಗಳನ್ನು ಸಹ ಎಸೆಯುತ್ತಾರೆ.

Top Bowlers in IPL 2024 Who Conceded the Most Wides

ಬೌಲರ್‌ ವೈಡ್‌ ಬೌಲ್‌ ಎಸೆಯುವುದರಿಂದ ಎದುರಾಳಿ ತಂಡಕ್ಕೆ ಲಾಭ. ಒಂದು ರನ್ ಸಿಗುತ್ತದೆ. ಅಲ್ಲದೆ ಒಂದು ಹೆಚ್ಚುವರಿ ಬೌಲ್‌ ಸಿಗುತ್ತದೆ. ಹಾಗಿದ್ದರೆ ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಡ್‌ ಬೌಲ್‌ಗಳನ್ನು ಮಾಡಿದ ಬೌಲರ್‌ಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಬೌಲರ್‌ಗಳು ಇದ್ದಾರೆ.

ಜೆರಾಲ್ಡ್ ಕೋಟ್ಜಿ

ಈ ಬಾರಿಯ ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ಅಬ್ಬರ ಕೊಂಚ ಕಡಿಮೆ ಆಗಿದೆ. ದೇಶೀಯ ಆಟಗಾರರು ಭರ್ಜರಿ ಪ್ರದರ್ಶ ನೀಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಸ್ಥಾನ ಪಡೆದಿರುವ ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೋಟ್ಜಿ ಸ್ಥಿರ ಪ್ರದರ್ಶನ ನೀಡುವಲ್ಲಿ ಹೆಸರುವಾಸಿ. ಆದರೆ ಅವರು ಐಪಿಎಲ್‌ 2024ರಲ್ಲಿ ಆಡಿರುವ 10 ಪಂದ್ಯಗಳಲ್ಲಿ 15 ವೈಡ್ ಬೌಲ್‌ಗಳನ್ನು ಮಾಡಿದ್ದಾರೆ.

ಯಶ್ ದಯಾಳ್

ಆರ್‌ಸಿಬಿ ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಯಶ್‌ ದಯಾಳ್ ಒಬ್ಬರು. ಇವರು ಆರ್‌ಸಿಬಿ ತಂಡಕ್ಕೆ ಅಗತ್ಯವಿದ್ದಾಗಲೆಲ್ಲಾ ವಿಕೆಟ್‌ ಕಬಳಿಸಿದ್ದಾರೆ. ಆದರೆ ಇವರು ಸಹ ಈ ಬಾರಿಯ ಐಪಿಎಲ್‌ನಲ್ಲಿ ವೈಡ್‌ಗಳನ್ನು ಎಸೆದು ಸುದ್ದಿಯಲ್ಲಿದ್ದಾರೆ. ಯಶ್‌ ಆಡಿದ 11 ಪಂದ್ಯಗಳಲ್ಲಿ 17 ವೈಡ್‌ ಎಸೆದಿದ್ದಾರೆ.

Top Bowlers in IPL 2024 Who Conceded the Most Wides

ಮೊಹಮ್ಮದ್‌ ಸಿರಾಜ್‌

ಐಪಿಎಲ್‌ನಲ್ಲಿ ಬಿಗುವಿನ ದಾಳಿ ನಡೆಸಿ ಗಮನ ಸೆಳೆದಿದ್ದ ಆರ್‌ಸಿಬಿ ತಂಡದ ಸ್ಟಾರ್‌ ಬೌಲರ್ ಮೊಹಮ್ಮದ್ ಸಿರಾಜ್, ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಲಯ ಕಳೆದುಕೊಂಡಿದ್ದರು. ಇವರು ಈ ಬಾರಿ ಐಪಿಎಲ್‌ನಲ್ಲಿ 20 ವೈಡ್‌ ಬೌಲಗಳನ್ನು ಎಸೆದಿದ್ದಾರೆ.

ಖಲೀಲ್ ಅಹ್ಮದ್‌

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲಿಂಗ್‌ಗೆ ಬಲ ನೀಡಿರುವ ಆಟಗಾರ ಖಲೀಲ್‌ ಅಹ್ಮದ್‌. ಇವರು ತಮ್ಮ ಬಿಗುವಿನ ದಾಳಿ ಹಾಗೂ ವೇರಿಯೇಷನ್‌ನಿಂದ ಹೆಸರು ವಾಸಿ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಇವರು ಅತಿ ಹೆಚ್ಚು ವೈಡ್‌ಗಳನ್ನು ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಈ ವರೆಗೆ 22 ವೈಡ್‌ ಬೌಲ್‌ಗಳನ್ನು ಮಾಡಿದ್ದಾರೆ.

ಆರ್ಷದೀಪ್‌ ಸಿಂಗ್‌

ಪಂಜಾಬ್‌ ಕಿಂಗ್ಸ್‌ನ ಭರವಸೆಯ ಬೌಲರ್‌ ಆರ್ಷದೀಪ್‌ ಸಿಂಗ್ ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಡ್‌ ಬೌಲ್‌ಗಳನ್ನು ಮಾಡಿದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಈ ವರೆಗೆ ಇವರು 12 ಪಂದ್ಯಗಳಲ್ಲಿ 23 ವೈಡ್‌ ಗಳನ್ನು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+