Tilak Varma: ಕೌಂಟಿಯಲ್ಲಿ ಶತಕ ಬಾರಿಸಿದ ತಿಲಕ್ ವರ್ಮಾ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಹೆಡಿಂಗ್ಲಿಯಲ್ಲಿ ನಡೆಯುತ್ತಿದೆ. ಈ ವೇಳೆ ಇಂಗ್ಲೆಂಡ್‌ನಲ್ಲಿ ಕೌಂಟಿ ಪಂದ್ಯಗಳು ನಡೆಯುತ್ತಿವೆ. ಈ ಲೀಗ್‌ನಲ್ಲಿ ಆಡಲು ಟೀಮ್ ಇಂಡಿಯಾದ ಆಟಗಾರರು ಪ್ರವಾಸ ಬೆಳೆಸಿದ್ದಾರೆ. ಇದೇ ಪ್ರವಾಸದ ಭಾಗವಾಗಿದ್ದ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ಒಬ್ಬರು ಅಬ್ಬರಿಸಿದ್ದಾರೆ. ಈ ಮೂಲಕ ತಮ್ಮ ತಂಡಕ್ಕೆ ಆಧಾರವಾಗಿದ್ದಾರೆ. ಹ್ಯಾಂಪ್‌ಶೈರ್ ಪರ ಆಡುತ್ತಿರುವ ಭಾರತದ ಯುವ ಆಟಗಾರ ಆರ್ಭಟಿಸಿದ್ದಾರೆ.
ಹ್ಯಾಂಪ್‌ಶೈರ್ ತಂಡದ ಪರ ಮೊದಲ ಬಾರಿಗೆ ಅಂಗಳಕ್ಕೆ ಇಳಿಯುವ ಅವಕಾಶವನ್ನು ಪಡೆದ ಮುಂಬೈನ ತಿಲಕ್ ವರ್ಮಾ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಆರಂಭದಲ್ಲಿ ತಿಲಕ್ ವರ್ಮಾ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಅವರು, ಪಿಚ್ ಮರ್ಮ ಅರಿಯುತ್ತಿದ್ದಂತೆ ಆರ್ಭಟಿಸಿದರು. ಈ ಮೂಲಕ ತಿಲಕ್ ಎದುರಾಳಿ ಬೌಲರ್‌ಗಳ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲು ಆರಂಭಿಸಿದರು.

ಹ್ಯಾಂಪ್‌ಶೈರ್ ಹಾಗೂ ಎಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಸೋಮವಾರ ತಿಲಕ್ ವರ್ಮಾ 98 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದರು. ಮಂಗಳವಾರ ಬ್ಯಾಟಿಂಗ್ ಮಾಡಲು ಬಂದಾಗ ಶತಕದ ಸಾಧನೆ ಮಾಡಲು ಅವರಿಗೆ ಇನ್ನು ಎರಡು ರನ್ ಅವಶ್ಯಕತೆ ಇತ್ತು. ಇವರು 2 ರನ್ ಬಾರಿಸುವ ಮೂಲಕ ಅಬ್ಬರಿಸಿದರು. ತಿಲಕ್ ವರ್ಮಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದೇ ಇದ್ದರೂ, ಇವರ ಆಟಗಾರರ ಅಭಿಮಾನಿಗಳಿಗೆ ಮುದ ನೀಡಿದೆ.
ತಿಲಕ್ ವರ್ಮಾ ಶತಕ ಬಾರಿಸುತ್ತಿದ್ದಂತೆ ಔಟ್ ಆದರು. ತಿಲಕ್ 241 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಶತಕ ಬಾರಿಸಿ ಮಿಂಚಿದರು. ಈ ಮೂಲಕ ಕೌಂಟಿ ಆಡಿದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದರು. ಇದಕ್ಕೂ ಮೊದಲು ಇವರು ತಾವು ಪ್ರತಿನಿಧಿಸುವ ಹೈದರಾಬಾದ್ ತಂಡದ ಪರ ಮೂರು ಶತಕವನ್ನು ರಣಜಿ ಟ್ರೋಫಿಯಲ್ಲ ಶತಕ ಬಾರಿಸಿದ್ದರು. ಅಲ್ಲದೆ ಭಾರತ "ಎ" ಹಾಗೂ ದುಲೀಪ್ ಟ್ರೋಫಿಯಲ್ಲಿ ತಲಾ ಒಂದು ಶತಕ ಬಾರಿಸಿದ್ದರು. ಇವರು 2019 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

ತಿಲಕ್ ವರ್ಮಾ ಅವರು ಇತ್ತೀಚಿಗೆ ನಡೆದ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಅಲ್ಲದೆ ಭಾರತದ ಪರ ಟಿ20 ಕ್ರಿಕೆಟ್ ಆಡಿ ಸೈ ಎನಿಸಿಕೊಂಡಿದ್ದರು.
ಪಂದ್ಯದ ಚಿತ್ರಣ
ಮೊದಲು ಬ್ಯಾಟ್ ಮಾಡಿದ ಎಸೆಕ್ಸ್ 296 ರನ್‌ಗಳಿಗೆ ಆಲೌಟ್ ಆಯಿತು. ಎಸೆಕ್ಸ್ ಪರ ಚಾರ್ಲಿ ಆಲಿಸನ್ ಶತಕ ಬಾರಿಸಿ ಮಿಂಚಿದರು. ಇವರು 11 ಬೌಂಡರಿ, 2 ಸಿಕ್ಸರ್ ಸಹಾಯದಿಂದ 101 ರನ್ ಬಾರಿಸಿ ಔಟ್ ಆದರು. ಇನ್ನು ಮ್ಯಾಟ್ ಕ್ರಿಚ್ಲಿ 71 ರನ್ ಸಿಡಿಸಿದರು. ಹ್ಯಾಂಪ್‌ಶೈರ್ ಪರ ಕೈಲ್ ಅಬಾಟ್ 5 ವಿಕೆಟ್ ಕಬಳಿಸಿದರು. ಮೊದಲ ಇನಿಂಗ್ಸ್ ಆರಂಭಿಸಿದ ಹ್ಯಾಂಪ್‌ಶೈರ್ ಪರ ತಿಲಕ್ ವರ್ಮಾ ಶತಕ ಬಾರಿಸಿ ಮಿಂಚಿದರು. ಇನ್ನು ಲಿಯಾಮ್ ಡಾಸನ್ 14 ಬೌಂಡರಿ, 3 ಸಿಕ್ಸರ್ ಸಹಾಯದಿಂದ 139 ರನ್ ಸಿಡಿಸಿದರು.












Click it and Unblock the Notifications