ಐಪಿಎಲ್ 3 ತಂಡಗಳು ಬ್ಯಾನ್: ಸಂಪೂರ್ಣ ವಿವರ ಇಲ್ಲಿದೆ
IPL RCB: ಐಪಿಎಲ್ 2008ರಿಂದ ಆರಂಭವಾಗಿದ್ದು, ಆರ್‌ಸಿಬಿ ಅಲ್ಲಿಂದ 17ನೇ ಸೀನಸ್‌ವರೆಗೂ ಒಂದೇ ಒಂದು ಟ್ರೋಫಿಯನ್ನು ಎತ್ತಿರಲಿಲ್ಲ. ಆದರೆ, ಈ ಬಾರಿ 18ನೇ ಆವೃತ್ತಿಯ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸುವ ಮೂಲಕ ಈ ಆಸೆಯನ್ನು ಕೊನೆಗೂ ನೆರವೇರಿಸಿಕೊಂಡಿದೆ. ಈ ನಡುವೆಯೇ ಐಪಿಎಲ್‌ನಿಂದ ಬ್ಯಾನ್ ಆದ ತಂಡಗಳ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಾದ್ರೆ ಯಾವೆಲ್ಲಾ ಟೀಂಗಳು ಔಟ್ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಮೊದಲ ಟ್ರೊಫಿ ತನ್ನದಾಗಿಸಿಕೊಂಡಿತು. ಅಂದು ಬರೀ ಕರ್ನಾಟಕ ಅಷ್ಟೇ ಅಲ್ಲದೆ, ಇರೀ ದೇಶವೇ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಮಿಂದೆದ್ದು ಹೋಗಿತ್ತು.

ಆರ್‌ಸಿಬಿ 17 ವರ್ಷಗಳ ಬಳಿಕ ಫೈನಲ್ ಗೆದ್ದ ಹಿನ್ನೆಲೆ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಕಳೆದುಕೊಂಡಿದ್ದು, ಈ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐಪಿಎಲ್‌ನಿಂದಲೇ ಹೊರಹಾಕಬೇಕೆನ್ನುವ ಮಾತುಗಳು ಕೇಳಿಬಂದಿದ್ದದ್ದವು. ಇದಕ್ಕೆ ವಿರೋಧಗಳು ಕೂಡ ವ್ಯಕ್ತವಾಗಿದ್ದವು. ಈ ನಡುವೆಯೇ ಐಪಿಎಲ್‌ನಿಂದ ಬ್ಯಾನ್ ಆದ ತಂಡಗಳ ಬಗ್ಗೆ ಸುದ್ದಿಯೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ಐಪಿಎಲ್ 2025 ಈಗಾಗಲೇ ಮುಕ್ತಾಯವಾಗಿದ್ದು, ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿಯು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇದಕ್ಕೂ ಮುಂಚಿತವಾಗಿ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ತಂಡಗಳಲ್ಲಿ ಡೆಕ್ಕನ್ ಚಾರ್ಜರ್ಸ್ ಸಹ ಒಂದಾಗಿತ್ತು. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಟ್ರೋಫಿ ಗೆದ್ದಿದೆಯಾದರೂ, ಕೆಲವೇ ವರ್ಷಗಳಲ್ಲಿ ಈ ಫ್ರಾಂಚೈಸಿ ಐಪಿಎಲ್ನಿಂದ ಕಾಣೆಯಾಗಿಬಿಟ್ಟಿತು.
ವಿಶ್ವದ ಅತೀ ದೊಡ್ಡ ಲೀಗ್‌ಗಳಲ್ಲಿ ಒಂದಾಗಿರುವ ಐಪಿಎಲ್ ಆರಂಭವಾಗಿ 18 ವರ್ಷಗಳು ಕಳೆದಿದ್ದು, ಈ 18 ವರ್ಷಗಳಲ್ಲಿ ಐಪಿಎಲ್ನಲ್ಲಿ ಬರೋಬ್ಬರಿ 15 ತಂಡಗಳು ಕಣಕ್ಕಿಳಿದಿವೆ. ಈ 15 ತಂಡಗಳಲ್ಲಿ 3 ಬ್ಯಾನ್ ಆದರೆ, 2 ಫ್ರಾಂಚೈಸಿಗಳನ್ನು ರದ್ದುಪಡಿಸಲಾಗಿದೆ.
ಐಪಿಎಲ್‌ಬಿಂದ ಬ್ಯಾನ್ ಆದ 3 ತಂಡಗಳು
* ಡೆಕ್ಕನ್ ಚಾರ್ಜರ್ಸ್
* ಕೊಚ್ಚಿ ಟಸ್ಕರ್ಸ್ ಕೇರಳ
* ಪುಣೆ ವಾರಿಯರ್ಸ್ ಇಂಡಿಯಾ
* ಹೈದರಾಬಾದ್ ಅನ್ನು ಪ್ರತಿನಿಧಿಸಿದ್ದ ಡೆಕ್ಕನ್ ಚಾರ್ಜರ್ಸ್ 2012ರ ವರೆಗೆ ಐಪಿಎಲ್ನಲ್ಲಿ ಆಟ ಮುಂದುವರೆಸಿತ್ತು. ಆದರೆ, 2012ರಲ್ಲಿ ಒಪ್ಪಂದದ ನಿಯಮಗಳನ್ನ ಉಲ್ಲಂಘನೆ ಮಾಡಿದ್ದರಿಂದ ಈ ಫ್ರಾಂಚೈಸಿಯನ್ನು ಐಪಿಎಲ್ ಆಡಳಿತ ಮಂಡಳಿಯು ವಜಾಗೊಳಿಸಿತು. ಬಳಿಕ ಹೈದರಾಬಾದ್ ಫ್ರಾಂಚೈಸಿಯನ್ನು ಖರೀದಿಸಿದ ಸನ್ ನೆಟ್ವರ್ಕ್ ಸಂಸ್ಥೆಯು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನ ಕಟ್ಟಿತು.
* 2011ರಲ್ಲಿ ಪರಿಚಯಿಸಲಾದ ಹೊಸ ತಂಡಗಳ ಪಟ್ಟಿಯಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ಸಹ ಒಂದು. ಆದರೆ ಮೊದಲ ಆವೃತ್ತಿಯಲ್ಲೇ ಫ್ರ್ಯಾಂಚೈಸ್ ಶುಲ್ಕದ ಭಾಗ ಆಗಿರುವ ಶೇಕಡ 10ರಷ್ಟು ಬ್ಯಾಂಕ್ ಗ್ಯಾರಂಟಿಯನ್ನ ಪಾವತಿ ಮಾಡಲಿ ಈ ತಂಡದ ಮಾಲೀಕರು ವಿಫಲರಾಗಿದ್ದು, ಆಗ ಇದನ್ನು ಐಪಿಎಲ್ನಿಂದ ಬ್ಯಾನ್ ಮಾಡಲಾಯಿತು.
* 2011ರಲ್ಲಿ ಐಪಿಎಲ್ಗೆ ಪುಣೆ ವಾರಿಯರ್ಸ್ ಇಂಡಿಯಾ ಕೂಡ ಎಂಟ್ರಿಯಾಯಿತು. ಸಹಾರಾ ಗ್ರೂಪ್ ಸ್ಪೋರ್ಟ್ಸ್ ಲಿಮಿಟೆಡ್ ಒಡೆತನದಲ್ಲಿದ್ದ ಈ ಫ್ರಾಂಚೈಸಿ 2013ರಲ್ಲಿ ಹಣಕಾಸಿನ ಸಮಸ್ಯೆಯಿಂದ ಎದುರಿಸಿತು. ಆದ್ದರಿಂದ ಆಗ ಈ ಫ್ರಾಂಚೈಸಿಯನ್ನು ಬಿಸಿಸಿಐ ಬ್ಯಾನ್ ಮಾಡಿತು.
ಇನ್ನು 2016ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಐಪಿಎಲ್ನಿಂದ ಅಮಾನತುಗೊಂಡ ಹಿನ್ನೆಲೆ ಗುಜರಾತ್ ಲಯನ್ಸ್ ತಂಡವನ್ನು ಪರಿಚಯಿಸಲಾಯಿತು. ಅದರಂತೆಯೇ ಐಪಿಎಲ್ನಲ್ಲಿ ತಾತ್ಕಾಲಿಕವಾಗಿದ್ದ ಈ ಫ್ರಾಂಚೈಸಿಯನ್ನು ಮತ್ತೆ ಸಿಎಸ್‌ಕೆ ಮತ್ತು ಆರ್‌ಆರ್ ತಂಡಗಳ ಮರಳುವಿಕೆಯೊಂದಿಗೆ ಐಪಿಎಲ್‌ನಿಂದ ಕೈಬಿಡಲಾಯಿತು.












Click it and Unblock the Notifications