IPL 2025: ವಿರಾಟ್ ಕೋಹ್ಲಿ ನಿರ್ಮಿಸಿದ ಈ ದಾಖಲೆಯನ್ನು ಮುರಿಯಲು ಸಾಧ್ಯವೇ ಇಲ್ಲ!

ವಿರಾಟ್ ಕೊಹ್ಲಿ ಅವರಿಗೆ ಮತ್ತೊಂದು ಹೆಸರು ಇದ್ದು, ಕಿಂಗ್ ಕೊಹ್ಲಿ ಅಂತಾ ಕೂಡ ನಮ್ಮ ಕೊಹ್ಲಿ ಅವರನ್ನು ಕರೆಯುತ್ತಾರೆ ಅಭಿಮಾನಿಗಳು. ವಿರಾಟ್ ಕೊಹ್ಲಿ ಒಂದು ಬಾರಿ ಬ್ಯಾಟ್ ಹಿಡಿದು ನಿಂತರೆ ಮುಗಿಯಿತು, ಅಂದು ಯಾವುದಾದರೂ ಒಂದು ದಾಖಲೆ ಧೂಳ್ ಅಗುವುದು ಗ್ಯಾರಂಟಿ ಅಂತಾ ಅಂದುಕೊಳ್ಳಿ.

ಯಾಕಂದ್ರೆ ವಿರಾಟ್ ಕೊಹ್ಲಿ ಅವರಿಗೆ ಅಷ್ಟು ತಾಕತ್ ಕೂಡ ಇದೆ. ಹೀಗಿದ್ದಾಗ ವಿರಾಟ್ ಕೊಹ್ಲಿ ಅವರ ದಾಖಲೆಗಳನ್ನ ಬೇರೆ ಯಾವುದೇ ಆಟಗಾರನೂ ಮುಟ್ಟುವುದು ಕಷ್ಟ. ಅಕಸ್ಮಾತ್ ಕೊಹ್ಲಿ ಅವರು ನಿರ್ಮಿಸಿರುವ ದಾಖಲೆಗಳನ್ನು ಯಾರದರೂ ಮುರಿದರೂ ಇದೊಂದು ದಾಖಲೆಯನ್ನ ಮುರಿಯುವುದು ಬಿಡಿ, ಈ ದಾಖಲೆಯ ಹತ್ತಿರಕ್ಕೂ ಬರುವುದಕ್ಕೆ ಆಗಲ್ಲ!

This Record In IPL By Virat Kohli May Never Been Defeated

ನೂರಾರು ಕೋಟಿ ಅಭಿಮಾನಿಗಳ ಹೃದಯ...

ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಕೂಡ ಅಳಿಸಲು ಆಗದ ದಾಖಲೆ ನಿರ್ಮಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ವಿರಾಟ್ ಕೊಹ್ಲಿ ಮುಟ್ಟದ ದಾಖಲೆ ಇಲ್ಲ ಅನ್ನೋ ಮಾತನ್ನ ಕೊಹ್ಲಿ ಅಭಿಮಾನಿಗಳು ಹೇಳುತ್ತಾರೆ. ಯಾಕಂದ್ರೆ ವಿರಾಟ್ ಕೊಹ್ಲಿಯ ತಾಕತ್ ಹಾಗಿದೆ.

ತಮ್ಮ ಕ್ರಿಕೆಟ್ ಆಟದ ಮೂಲಕ ನೂರಾರು ಕೋಟಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ ಭಾರತ ಕ್ರಿಕೆಟ್ ಟೀಂನ ವಜ್ರ ವಿರಾಟ್ ಕೊಹ್ಲಿ. 2008ರಲ್ಲಿ ಶುರುವಾಗಿದ್ದ ಐಪಿಎಲ್ ಟೂರ್ನಿಯಲ್ಲಿ ಮೊದಲಿಗೆ ತಮ್ಮ ಎಂಟ್ರಿಯನ್ನ ಕನ್ಫರ್ಮ್ ಮಾಡಿಕೊಂಡ ವಿರಾಟ್ ಕೊಹ್ಲಿ ಅವರು, ಆರ್‌ಸಿಬಿ ಪರವಾಗಿ ಯಾವ ಆಟಗಾರನಿಂದಲೂ ಅಳಿಸಲು ಆಗದ ದಾಖಲೆ ಮಾಡಿದ್ದಾರೆ!

ವಿರಾಟ್ ಕೊಹ್ಲಿ ಅಳಿಸಲಾಗದ ದಾಖಲೆ!

ಹೌದು, 2008ರಲ್ಲಿ ಶುರುವಾಗಿದ್ದ ಐಪಿಎಲ್ ಟೂರ್ನಿಯಲ್ಲಿ ಮೊದಲಿಗೆ ಆರ್‌ಸಿಬಿ ತಂಡದ ಪರ ಆಟ ಶುರು ಮಾಡಿದ್ದ ವಿರಾಟ್ ಕೊಹ್ಲಿ ಅವರು ಇದುವರೆಗೂ ಆರ್‌ಸಿಬಿ ಬಿಟ್ಟಿಲ್ಲ. ಈ ಮೂಲಕ ಯಾರೂ ಅಳಿಸಲು ಆಗದ ದಾಖಲೆ ಮಾಡಿದ್ದಾರೆ. ಒಂದೇ ತಂಡದ ಪರ ಅತಿಹೆಚ್ಚು ವರ್ಷಗಳಿಂದ ಆಡುತ್ತಿರುವ ಕೀರ್ತಿ ಕೂಡ ವಿರಾಟ್ ಕೊಹ್ಲಿ ಅವರಿಗೆ ಇದೆ. ಸುಮಾರು, 17 ವರ್ಷ ಮೀರಿ ಆರ್‌ಸಿಬಿ ಪರವಾಗಿ ಆಡುತ್ತಾ ಯಾರೂ ಅಳಿಸಲು ಆಗದ ದಾಖಲೆ ಬರೆದಿದ್ದಾರೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಕೂಡ ಕೊಹ್ಲಿ ಅವರ ದಾಖಲೆ ಮುರಿಯಲು ಆಗಿಲ್ಲ!

ಆರ್‌ಸಿಬಿ ಕಪ್ ಗೆಲ್ಲೋದು ಗ್ಯಾರಂಟಿ?

ಬೆಂಗಳೂರು ತಂಡಕ್ಕೆ ಅಂತಾ ಇಷ್ಟು ದಿನಗಳ ಕಾಲ ಕಷ್ಟಪಟ್ಟರೂ, ವಿರಾಟ್ ಕೊಹ್ಲಿ ಅವರ ಸಾರಥ್ಯದಲ್ಲಿ ಇದುವರೆಗೂ ಒಂದೇ ಒಂದು ಐಪಿಎಲ್ ಕಪ್ ಗೆಲ್ಲಲು ಆಗಿಲ್ಲ. ಈ ಕಾರಣಕ್ಕೆ 2025ರ ಐಪಿಎಲ್ ಕಪ್ ನಮ್ಮದೆ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಈ ಬಾರಿ ಟೂರ್ನಿ ಯಾರು ಗೆಲ್ಲುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ. ಹಾಗೇ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಗೆದ್ದೇ ಗೆಲ್ಲಬೇಕು ಎಂಬ ಆಸೆ ಈಡೇರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+