ವಿರಾಟ್ ಕೊಹ್ಲಿ ಕೈಬಿಡಲು ಕುತಂತ್ರ? ಬೆನ್ನಿಗೆ ಚೂರಿ ಹಾಕಲು ನಿಂತವರು ಯಾರು?

ವಿರಾಟ್ ಕೊಹ್ಲಿ ವಿಚಾರದಲ್ಲಿ ಅಭಿಮಾನಿಗಳಿಗೆ ಭಯ ಶುರುವಾಗಿದೆ. 'ಎದ್ದಾಗ ಎಲ್ಲಾ ನೆಂಟರು, ಬಿದ್ದಾಗ ಅವರೆಲ್ಲಾ ಶತ್ರುಗಳು ಎನ್ನುವಂತೆಯೇ' ವಿರಾಟ್ ಕೊಹ್ಲಿ ಸಖತ್ ಆಗಿ ಆಡುವಾಗ ವಿರಾಟ್ ಕೊಹ್ಲಿ ಬಗ್ಗೆ ಹೊಳಗುತ್ತಿದ್ದವರೇ ಈಗ ಬೆನ್ನಿಗೆ ಚೂರಿ ಹಾಕೋದಕ್ಕೆ ಮುಂದಾಗಿದ್ದಾರಾ? ಎಂಬ ಅನುಮಾನ ಮೂಡಿದೆ. ಯಾಕಂದ್ರೆ ವಿರಾಟ್ ಕೊಹ್ಲಿ ಅವರನ್ನ ಭಾರತ ತಂಡದಿಂದಲೇ ಕೈಬಿಡುವಂತೆ ಮಾಡಲು ಕುತಂತ್ರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ!

ವಿರಾಟ್ ಕೊಹ್ಲಿ ಸಾಲು ಸಾಲು ವೈಫಲ್ಯ ಕಂಡಿದ್ದಾರೆ. ಓಪನರ್ ಆಗಿ ಬ್ಯಾಟ್ ಮಾಡಲು ಬರುತ್ತಿರುವ ವಿರಾಟ್ ಕೊಹ್ಲಿ ಪರದಾಡುತ್ತಿದ್ದಾರೆ. 2024ರ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿ ಔಟ್ ಆಗಿದ್ದರು ವಿರಾಟ್ ಕೊಹ್ಲಿ. ಆ ನಂತರ ಪಾಕಿಸ್ತಾನ ತಂಡದ ವಿರುದ್ಧ ಕೇವಲ 4 ರನ್ ಗಳಿಸಿ ಪೆವಿಲಿಯನ್ ಗೂಡು ಸೇರಿದ್ರು. ಹಾಗೇ ಅಮೆರಿಕ ವಿರುದ್ಧ ಡಕ್ ಔಟ್ ಆಗಿ 0 ಸುತ್ತಿದ್ದ ವಿರಾಟ್ ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧ 24 ಬಾಲ್ ಆಡಿ 24 ರನ್ ಗಳಿಸಿದ್ದರು...

This Is What Fans Talking About Virat Kohli Cricket Future

ಹೀಗೆ ಸಾಲು ಸಾಲು ಎಡವಟ್ಟುಗಳ ನಂತರ ಕೊಹ್ಲಿ ಕಂಬ್ಯಾಕ್ ಮಾಡ್ತಾರೆ ಎನ್ನುವಾಗ ಬಾಂಗ್ಲಾದೇಶ ವಿರುದ್ಧ 37 ರನ್‌ಗೆ ಔಟಾಗಿದ್ರು ಕೊಹ್ಲಿ. ಆಸ್ಟ್ರೇಲಿಯಾ ಟೀಂ ವಿರುದ್ಧ ಡಕ್ ಔಟ್ ಆಗಿದ್ದರು, ಇಂಗ್ಲೆಂಡ್ ವಿರುದ್ಧವು ಕೂಡ ಒಂದಂಕಿ ರನ್ ಗಳಿಸಿದ್ದಾರೆ. ಹಾಗಾದ್ರೆ ವಿರಾಟ್ ಕೊಹ್ಲಿ ಭಾರತ ತಂಡದಿಂದಲೇ ಹೊರಗೆ ಹೋಗುತ್ತಾರಾ? ಕೊಹ್ಲಿ ಬಗ್ಗೆ ಕುತಂತ್ರ ಮಾಡುತ್ತಿರುವುದು ಯಾರು? ಈ ಬಗ್ಗೆ ಅಭಿಮಾನಿಗಳು ಏನು ಹೇಳುತ್ತಾರೆ? ಬನ್ನಿ ಮುಂದೆ ತಿಳಿಯೋಣ.

ಕೊಹ್ಲಿಗೆ ಶತ್ರುಗಳ ಕಾಟ?

ವಿರಾಟ್ ಕೊಹ್ಲಿ ಅವರಿಗೆ ಶತ್ರುಗಳ ಕಾಟ ಹೆಚ್ಚಾಗಿದೆ ಅನ್ನೋದು ಅವರ ಅಭಿಮಾನಿಗಳ ಮಾತು. ಅದರಲ್ಲೂ ವಿರಾಟ್ ಕೊಹ್ಲಿ ಅವರನ್ನ ಭಾರತ ತಂಡದಿಂದ ಕೈಬಿಡಲು ಈಗ ಭಾರಿ ದೊಡ್ಡ ಕುತಂತ್ರ ಸಾಗಿದೆ, ಇದರ ಭಾಗವಾಗಿ ಇದೀಗ ನಿಧಾನವಾಗಿ ಕೊಹ್ಲಿಯನ್ನ ಸೈಡ್‌ಲೈನ್ ಮಾಡುವ ಕುತಂತ್ರ ನಡೆದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಈಗ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಆದರೆ ಅಂತಹ ಯಾವುದೇ ಬೆಳವಣಿಗೆ ಈಗ ನಡೆದಿಲ್ಲ ಎಂಬುದು ತಜ್ಞರ ಮಾತು. ಯಾಕಂದ್ರೆ ಕೊಹ್ಲಿ ಕೈಬಿಟ್ಟರೆ ಕ್ರಿಕೆಟ್ ಇಲ್ಲ ಎಂಬ ಮಟ್ಟಿಗೆ ಕೊಹ್ಲಿ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ.

ಫೈನಲ್ ಮ್ಯಾಚ್‌ನಲ್ಲಿ ಕಂಬ್ಯಾಕ್?

ಒಟ್ನಲ್ಲಿ ಅಮೆರಿಕದ ನೆಲದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಲು ಸಾಧ್ಯವೇ ಆಗುತ್ತಿಲ್ಲ. ಈ ಪೈಕಿ ವಿರಾಟ್ ಕೊಹ್ಲಿ ಅವರೀಗ ಓಪನರ್ ಆಗಿ ಆಟ ಶುರು ಮಾಡುತ್ತಿರುವುದೇ ದೊಡ್ಡ ಸಮಸ್ಯೆ ಆಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ಇದೆಲ್ಲವನ್ನೂ ಸರಿ ಮಾಡಿ, ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡ್ತಾರಾ? ವಿರಾಟ್ ಕೊಹ್ಲಿಗೆ ಮತ್ತೆ ಮೊದಲಿನ ರೀತಿ ಆಡಲು ತಂಡದಲ್ಲಿ ಅವಕಾಶ ಮಾಡುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+