ವಿರಾಟ್ ಕೊಹ್ಲಿ & ಧೋನಿ ಮಗಳ ಮುದ್ದಾದ ಸಂಭಾಷಣೆ ಕೇಳಿ!
ವಿರಾಟ್ ಕೊಹ್ಲಿ & ಮಹೇಂದ್ರ ಸಿಂಗ್ ಧೋನಿ ನಡುವೆ ಇದೇ ಶನಿವಾರ ಭೀಕರ ಕಾಳಗಕ್ಕಾಗಿ ವೇದಿಕೆ ಸಜ್ಜಾಗಿದೆ. ಆರ್‌ಸಿಬಿ ಬೆಂಗಳೂರು & ಸಿಎಸ್‌ಕೆ ಚೆನ್ನೈ ನಡುವೆ ಐಪಿಎಲ್ ಪಂದ್ಯವು ನಡೆಯಲಿದೆ. ಈ ಸಮಯದಲ್ಲೇ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಮಗಳು ಝೀವಾ ನಡುವಿನ ಮುಗ್ಧ ಸಂಭಾಷಣೆಯ, ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಹಾಗಾದ್ರೆ ಅಸಲಿಗೆ ಆಗಿದ್ದೇನು? ಆ ಕ್ಯೂಟ್ ಕ್ಯೂಟ್ ವಿಡಿಯೋ ನೋಡಲು ಮುಂದೆ ಓದಿ.
ಅಂದಹಾಗೆ ಭಾರತ ಕ್ರಿಕೆಟ್ ತಂಡದ ಹೊಸ ತಲೆಮಾರಿನಲ್ಲಿ, ಮೊದಲಿಗೆ ಮದುವೆ ಆಗಿದ್ದು ಮಹೇಂದ್ರ ಸಿಂಗ್ ಧೋನಿ. ಹಾಗೇ ಧೋನಿ ಅವರ ಮಗಳು ಝೀವಾ ಕೂಡ ನೋಡ ನೋಡುತ್ತಾ ದೊಡ್ಡವಳೂ ಆಗಿದ್ದಾಳೆ. ಆದರೆ ಝೀವಾ ಅಂದ್ರೆ ಇಂದಿಗೂ ಭಾರತ ಕ್ರಿಕೆಟ್ ತಂಡದಲ್ಲಿನ ಆಟಗಾರರಿಗೆ ತುಂಬಾ ಪ್ರೀತಿ. ಯಾಕಂದ್ರೆ ಝೀವಾ ಚಿಕ್ಕವಳಿದ್ದಾಗ ಆಡುತ್ತಿದ್ದ ಮುಗ್ಧ ಮಾತು ಎಲ್ಲರನ್ನೂ ಸೆಳೆಯುತ್ತಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ಝೀವಾ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಅದೇ ರೀತಿ ಝೀವಾ ಜೊತೆ ವಿರಾಟ್ ಕೊಹ್ಲಿ ತರ್ಲೆ ಮಾಡಿ, ಬೆಕ್ಕಿನ ರೀತಿ ಮಿಮಿಕ್ರಿ ಮಾಡಿ ಕಾಡಿಸಿದ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಲು ಮುಂದೆ ಓದಿ.

ಝೀವ + ಕೊಹ್ಲಿ ಕ್ಯೂಟ್ ಮಾತು!
ಮಕ್ಕಳ ಜೊತೆಗೆ ಮುಗ್ಧವಾಗಿ ಮಾತನಾಡುವುದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಕೊಹ್ಲಿ ಅವರಿಗೂ ಈ ಮಾತು ಅನ್ವಯ ಆಗುತ್ತೆ. ಯಾಕಂದ್ರೆ ವಿರಾಟ್ ಕೊಹ್ಲಿ ಅವರಿಗೂ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮೊದಲನೆಯ ಮಗು ಹೆಣ್ಣು, ಎರಡನೇಯ ಮಗು ಗಂಡು. ಈ ರೀತಿ ವಿರಾಟ್ ಕೊಹ್ಲಿ ಕೂಡ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ ವಿರಾಟ್ ಮದುವೆಗೆ ಮೊದಲು ಕೂಡ ಮಕ್ಕಳ ಜೊತೆಗೆ ಮಗುವಾಗಿ ಬೆರೆಯುತ್ತಿದ್ದರು.
ವಿರಾಟ್ ಕೊಹ್ಲಿ ತಮಾಷೆ ಮಾಡಿದಾಗ...
ಅದೇ ರೀತಿ ವಿರಾಟ್ ಕೊಹ್ಲಿ ಅವರು ಧೋನಿ ಮಗಳ ಜೊತೆ ನಡೆಸಿದ ಮುದ್ದಾದ ಸಂಭಾಷಣೆ ಈಗ ಮತ್ತೆ ಫುಲ್ ವೈರಲ್ ಆಗುತ್ತಿದೆ. ಧೋನಿ ಅವರ ಮನೆಯ ಆವರಣದಲ್ಲಿ ಝೀವಾ ಜೊತೆ ಕೊಹ್ಲಿ ಕೂತು ಮಾತುಕತೆ ನಡೆಸಿದ್ದಾರೆ. ಹರಟೆ ಹೊಡೆಯುವಾಗ, ನಿಮ್ಮ ಮನೆಯಲ್ಲಿ ಈಗ ಎಷ್ಟು ನಾಯಿಗಳು ಇವೆ? ಎನ್ನುವ ಮೂಲಕ ಮಾತು ಶುರುವಾಗುತ್ತೆ. ಆದರೆ ಝೀವಾ ಆಗ ಇನ್ನೂ ಚಿನ್ನ ಮಗು, ಹೀಗಾಗಿ ಝೀವಾಗೆ ಸರಿಯಾಗಿ ಲೆಕ್ಕ ಸಿಗುವುದಿಲ್ಲ. ಇದೇ ವೇಳೆ ಕೊಹ್ಲಿ ಸುಮ್ಮನೆ ಇರದೆ ಬೆಕ್ಕಿನ ರೀತಿ ಮಿಮಿಕ್ರಿ ಮಾಡುತ್ತಾರೆ. ಆಗ ಝೀವಾ ಯಾರು ಹಿಂಗೆ ಸದ್ದು ಮಾಡಿದ್ದು? ಅಂತಾ ಮುದ್ದಾಗಿ ಕೇಳಿದ್ದಾಳೆ!
ಗೆದ್ದೇ ಗೆಲ್ಲುತ್ತೆ ಬೆಂಗಳೂರು ತಂಡ!
ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಎಲ್ಲೆಲ್ಲೂ ಆರ್‌ಸಿಬಿ ತಂಡ ಟ್ರೆಂಡ್ ಹುಟ್ಟುಹಾಕಿ ಹವಾ ಎಬ್ಬಿಸಿದೆ. ನಮ್ಮ ಬೆಂಗಳೂರು ತಂಡವಾದ ಆರ್‌ಸಿಬಿ ಗೆದ್ದೇ ಗೆಲ್ಲುತ್ತೆ, ಉಪಾಂತ್ಯಕ್ಕೆ ತಲುಪಲಿದೆ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಆರ್‌ಸಿಬಿ ತಂಡ ಸಕಲ ಸಿದ್ಧತೆ ಆರಂಭಿಸಿದೆ. ಮತ್ತೊಂದು ಕಡೆ ಪಂದ್ಯ ನೋಡಲು ಕಾಯುತ್ತಿರುವ ಆರ್‌ಸಿಬಿ ಫ್ಯಾನ್ಸ್ ಎಲ್ಲೆಲ್ಲೂ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಪಂದ್ಯ ಹವಾ ಎಬ್ಬಿಸಿದೆ. ಹಾಗೇ ಟಿಕೆಟ್‌ಗೆ ಕೂಡ ಭಾರಿ ಡಿಮ್ಯಾಂಡ್ ಇದೆ. ಆದರೆ ಮಳೆ ಮಾತ್ರ ಬರಬಾರದು ಅಷ್ಟೇ!












Click it and Unblock the Notifications