ಭಾರತದ ಶತ್ರು ಪಾಕಿಸ್ತಾನದಲ್ಲೂ ಆರ್‌ಸಿಬಿ ಹವಾ: ‘ಈ ಸಲ ಕಪ್ ನಮ್ದೆ’ ಅಂತಿದ್ದಾರೆ ಪಾಕಿಸ್ತಾನಿಯರು!

ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದು ಇದೀಗ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿದೆ. ಇಂದು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಮ್ಯಾಚ್ ಆಡಲಿದ್ದು, ಆ ನಂತರ ಕೇವಲ 2 ಹೆಜ್ಜೆ ದಾಟಿದರೆ ಆಯ್ತು ಆರ್‌ಸಿಬಿ ತಂಡ ಕಪ್ ಗೆದ್ದು ಬೀಗಲಿದೆ. ಹೀಗಿದ್ದಾಗಲೇ ಭಾರತದ ಶತ್ರು ಪಾಕಿಸ್ತಾದಲ್ಲೂ ಜನರು 'ಈ ಸಲ ಕಪ್ ನಮ್ದೆ' ಅಂತಿದ್ದಾರೆ! ಯಾಕೆ ಗೊತ್ತಾ? ಕುತೂಹಲ ಭರಿತ ಮಾಹಿತಿ ತಿಳಿಯಲು ಮುಂದೆ ಓದಿ.

ಪಾಕಿಸ್ತಾನ ಜನರು ಕೂಡ ಕ್ರಿಕೆಟ್ ಆಟವನ್ನು ತುಂಬಾ ಇಷ್ಟಪಡುತ್ತಾರೆ. ಯಾಕಂದ್ರೆ ಕ್ರಿಕೆಟ್ ಭಾರತದ ರೀತಿಯೇ ಪಾಕಿಸ್ತಾನದ ಜನರ ಭಾವನೆಯಲ್ಲಿ ಬೆರೆತು ಹೋಗಿದೆ. ಇದೇ ರೀತಿ IPL ಬಗ್ಗೆ ಕೂಡ ಪಾಕಿಸ್ತಾನ ಜನರಿಗೆ ಸಖತ್ ಕುತೂಹಲ ಇದ್ದು, ಪಾಕ್ ಜನರಿಗೆ ಕೂಡ ಆರ್‌ಸಿಬಿ ತಂಡ ಅಂದ್ರೆ ಅಚ್ಚುಮೆಚ್ಚು. ಯಾಕಂದ್ರೆ ಆರ್‌ಸಿಬಿ ಕುರಿತು ಜಾಗತಿಕ ಮಟ್ಟದಲ್ಲಿ ಕ್ರೇಜ್ ಇದ್ದು, ಜಗತ್ತಿನ ಮೂಲೆ ಮೂಲೆಯಲ್ಲೂ ಆರ್‌ಸಿಬಿ ತಂಡಕ್ಕೆ ಬೆಂಬಲಿಗರು ಇದ್ದಾರೆ. ಅದೇ ರೀತಿಯಾಗಿ ಪಾಕಿಸ್ತಾನದಲ್ಲಿ ಕೂಡ ಆರ್‌ಸಿಬಿ ತಂಡಕ್ಕೆ ಫ್ಯಾನ್ಸ್ ಇದ್ದು, ಅವರೆಲ್ಲರೂ ಏನ್ ಹೇಳ್ತಿದ್ದಾರೆ? ಬನ್ನಿ ತಿಳಿಯೋಣ.

This Is How Pakistan Cricket Fans Are Reacted To RCB Win Against The CSK In IPL 2024

ಚೆನ್ನೈ ವಿರುದ್ಧ ಗೆದ್ದಿದ್ದಕ್ಕೆ ಖುಷಿ!

ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಹೀಗೆ ಎಲ್ಲೆಲ್ಲೂ ಆರ್‌ಸಿಬಿ ತಂಡದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈಗಾಗಲೇ, ಐಪಿಎಲ್ ಟೂರ್ನಿಯ ಪ್ಲೇಆಫ್ ಪ್ರವೇಶ ಮಾಡಿರುವ ಆರ್‌ಸಿಬಿ ತಂಡ ಭರ್ಜರಿ ಅಬ್ಬರ ತೋರಿಸುತ್ತಿದೆ. ಹಾಗೇ 2024ರ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆದ್ದು ಬೀಗುವ ನೆಚ್ಚಿನ ತಂಡ ಕೂಡ ಆಗಿದೆ ಆರ್‌ಸಿಬಿ. ಹೀಗಿದ್ದಾಗ ಆರ್‌ಸಿಬಿ ತಂಡ ಚೆನ್ನೈ ಟೀಂ ವಿರುದ್ಧ ಗೆದ್ದಿದ್ದಕ್ಕೆ ಇಡೀ ಇಂಡಿಯಾ ಖುಷಿಪಟ್ಟಿದೆ. ಪಾಕಿಸ್ತಾನದ ಜನ ಕೂಡ ಆರ್‌ಸಿಬಿಗೆ, ತಮ್ಮ ಸಪೋರ್ಟ್ ನೀಡುತ್ತಿದ್ದಾರೆ.

ಯಾಕಂದ್ರೆ ಒಂದೇ ಒಂದು ಬಾರಿಯು ಕಪ್ ಗೆಲ್ಲದ ಆರ್‌ಸಿಬಿ ಬೆಂಗಳೂರು ತಂಡ, ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ನಿರೀಕ್ಷೆ ದಟ್ಟವಾಗಿದೆ. ಹೀಗಿದ್ದಾಗ ಪಾಕಿಸ್ತಾನದ ಜನರು ಕೂಡ 'ಈ ಸಲ ಕಪ್ ನಮ್ದೆ' ಅಂತಿದ್ದಾರೆ. ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಜನ ಫುಲ್ ಸಪೋರ್ಟ್ ಕೊಡ್ತಿದ್ದು, ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಕಪ್ ಗೆಲ್ಲಲಿ ಅಂತಿದ್ದಾರೆ.

ಈ ಸಲ ಕಪ್ ನಮ್ದೆ?

ಒಟ್ನಲ್ಲಿ ಆರ್‌ಸಿಬಿ ತಂಡಕ್ಕೆ ಇಡೀ ಜಗತ್ತಿನ ಮೂಲೆ ಮೂಲೆಯಿಂದ ಬೆಂಬಲ ಸಿಗುತ್ತಿದೆ. ಈ ಮೂಲಕ ಆರ್‌ಸಿಬಿ ತಂಡ ಕಪ್ ಗೆಲ್ಲಬೇಕು ಅಂತಾ ಕೋಟ್ಯಂತರ ಜನರು ಪ್ರಾರ್ಥನೆ ಕೂಡ ಸಲ್ಲಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಆರ್‌ಸಿಬಿ ತಂಡ ಕಪ್ ಗೆದ್ದರೆ ಅದರ ಖದರ್ ಬೇರೆಯೇ ಆಗಿರುತ್ತೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇಂದು ರಾಜಸ್ಥಾನ ತಂಡದ ಎದುರು ನಮ್ಮ ಆರ್‌ಸಿಬಿ ಮ್ಯಾಚ್ ಆಡಲಿದ್ದು, ಆ ನಂತರ ಗೆದ್ದು ಹೈದರಾಬಾದ್ ತಂಡದ ವಿರುದ್ಧ ಭಾರಿ ಹೋರಾಟ ಪ್ರದರ್ಶನ ಮಾಡುವ ನಿರೀಕ್ಷೆ ಇದೆ. ಹಾಗೇ ಕೆಕೆಆರ್ ಸೋಲಿಸಿ ಆರ್‌ಸಿಬಿ ಕಪ್ ಗೆಲ್ಲುತ್ತೆ, ಫೈನಲ್ ಮ್ಯಾಚ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗುತ್ತೆ ಅಂತಿದ್ದಾರೆ ಫ್ಯಾನ್ಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+